ಮೈಸೂರು: ನಮಗೆ ಸರಿಯಾಗಿ ಕುಡಿಯಲು ನೀರಿಲ್ಲ. ಅಂತಹದರಲ್ಲಿ ತಮಿಳುನಾಡಿಗೆ ಹೇಗೆ ನೀರು ಬಿಡುವುದು. ಮೊದ್ಲು ನಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೇಳಿದ್ದಾರೆ.
ನಗರದಲ್ಲಿಂದು 'ಈಟಿವಿ ಭಾರತ್' ನೊಂದಿಗೆ ಮಾತಾಡಿರುವ ಅವರು, ಕಳೆದ ವರ್ಷ ಉತ್ತಮ ಮಳೆಯಾಗಿ ತಮಿಳುನಾಡಿಗೆ ಬೇಡವೆಂದರೂ ನೀರು ಕೊಟ್ಟಿದ್ದೇವೆ. ಆದರೆ, ಈ ಬಾರಿ ಸರಿಯಾಗಿ ಮಳೆ ಬಿದ್ದಿಲ್ಲ, ಅಣೆಕಟ್ಟು ತುಂಬಿಲ್ಲ, ಅವರಿಗೆ ಹೇಗೆ ನೀರು ಕೊಡುವುದು ಎಂದು ಪ್ರಶ್ನಿಸಿದರು. ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ವಿವಾದ ಸದಾ ಇರುತ್ತದೆ. ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದರು.
ಇನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವು ಮಂಡ್ಯ ಜನತೆ ನೀಡಿದ ದೊಡ್ಡ ಉಡುಗೊರೆ. ಮಂಡ್ಯ ಜನರ ನಿರೀಕ್ಷೆಗೆ ಮೀರಿ ಸುಮಲತಾ ಅಂಬರೀಶ್ ಕೆಲಸ ಮಾಡುತ್ತಾರೆ ಎಂದು ಹೇಳಿದರು.