ETV Bharat / city

ವಿಧಾನ ಪರಿಷತ್ ಚುನಾವಣೆಯಲ್ಲಿ 6 ರಿಂದ 8 ಸ್ಥಾನ ಗೆಲ್ಲುವ ವಿಶ್ವಾಸ: ಹೆಚ್‌.ಡಿ.ಕುಮಾರಸ್ವಾಮಿ - ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ

ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ‌.ಕುಮಾರಸ್ವಾಮಿ, ನಮ್ಮ ಪಕ್ಷದ ಶಕ್ತಿ ಇರುವ ಕಡೆ ನಾವು ಅಭ್ಯರ್ಥಿಗಳನ್ನು ಹಾಕುತ್ತೇವೆ. ಸಂಜೆ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿ ಅವರ ಸಲಹೆ, ಭಾವನೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ವಿಧಾನ ಪರಿಷತ್ ಚುನಾವಣೆಯಲ್ಲಿ 6 ರಿಂದ 8 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

JDS leader HD Kumaraswamy on Council Election
ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Nov 22, 2021, 3:36 PM IST

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ (Karnataka Legislative Council Election) 6 ರಿಂದ 8 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ‌.ಕುಮಾರಸ್ವಾಮಿ (Former CM H.D. Kumaraswamy) ಹೇಳಿದರು.

ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಶಕ್ತಿ ಇರುವ ಕಡೆ ನಾವು ಅಭ್ಯರ್ಥಿಗಳನ್ನು ಹಾಕುತ್ತೇವೆ. ಸಂಜೆ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ (JDS Meeting) ನಡೆಸಿ ಅವರ ಸಲಹೆ, ಭಾವನೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು.

ಸಂದೇಶ್ ನಾಗರಾಜ್ ಅವರು ಪರಿಷತ್ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್​ಡಿಕೆ, ಅವರು ಪಕ್ಷ ಬಿಟ್ಟು 3 ವರ್ಷ ಆಗಿದೆ ಎನ್ನುತ್ತಾರೆ. ಸಂಜೆ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಸಲಹೆಯಂತೆ ಟಿಕೆಟ್ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬೇರೆಯವರ ಬೆಂಬಲ ಬೇಡ ಎಂದು ಹೇಳುತ್ತಾರೆ. ಆ ನಂತರ ಜೆಡಿಎಸ್ (JDS) ಬೆಂಬಲ ನೀಡಲಿದೆ ಎನ್ನುತ್ತಾರೆ. ಇದರಿಂದ ನಮ್ಮ ಅಸ್ತಿತ್ವ ಅಲ್ಲಿದೆ ಎಂದು ಅರ್ಥ ಎಂದರು.

'ಬಿಜೆಪಿ ಅವರದ್ದು ಘೋಷಣೆ ಸರ್ಕಾರ':

ಬಿಜೆಪಿ (BJP) ಅವರದ್ದು ಘೋಷಣೆ ಸರ್ಕಾರ. ಅವರು ಆಕಾಶದೆತ್ತರದಲ್ಲಿದ್ದಾರೆ.‌ ಭೂಮಿ ಕಾಣುತ್ತಿಲ್ಲ. ಜನ ನೀಡಿರುವ ಜಾಗ ನಿರಂತರವಾಗಿರುತ್ತದೆ.‌ ಜನರನ್ನು ಮರುಳು ಮಾಡಬಹುದು ಎಂದುಕೊಂಡಿದ್ದಾರೆ. ಆದರೆ ಜನರು ನಿರ್ಲಕ್ಷ್ಯ ಮಾಡುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಗುತ್ತಿಗೆದಾರರಿಂದ 40 ಪರ್ಸಂಟೇಜ್ ಕಮೀಷನ್ ಪಡೆಯುವುದನ್ನು ಕಮ್ಮಿ ಮಾಡಿದರೆ ರೈತರಿಗೆ ಅನುಕೂಲ ಮಾಡಿಕೊಡಬಹುದು. ತೆರಿಗೆ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬಹುದು.‌ ಕೋವಿಡ್​ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ನೆರವು ಕೊಡಬಹುದು. ಕೊಡಗು, ಬೆಳಗಾವಿ ಸೇರಿದಂತೆ ಹಲವಾರು ಕಡೆ ಮಳೆಯಿಂದ ಹಾನಿಯಾದ ಸಂದರ್ಭದಲ್ಲಿ ಅವರು ಘೋಷಿಸಿದ್ದ ಅನುದಾನ ಇನ್ನೂ ಎಷ್ಟೋ ಜನಕ್ಕೆ ತಲುಪಿಲ್ಲ. ಇವರದ್ದು ಘೋಷಣೆ ಸರ್ಕಾರ ಎಂದು ಟೀಕಿಸಿದರು.

'ರೈತರಿಗೆ ಪರಿಹಾರ ನೀಡಲು ಮಾತ್ರ ನೀತಿ ಸಂಹಿತೆ ಅಡ್ಡಿ':

ಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಕುಮಾರಸ್ವಾಮಿ, ರೈತರಿಗೆ ಪರಿಹಾರ ನೀಡಲು ಮಾತ್ರ ನೀತಿ ಸಂಹಿತೆ ಅಡ್ಡಿ ಬರಲಿದೆಯೇ? ನೀತಿ ಸಂಹಿತೆ ಹೆಸರಿನಲ್ಲಿ ಜವಬ್ದಾರಿಯಿಂದ‌ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್​ನಲ್ಲಿ ಶಂಖ ಊದಲು ಜನರಿಲ್ಲ ಎಂಬ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಂಖ ಊದಲು ಜೆಡಿಎಸ್​ನಲ್ಲಿ ಜನರನ್ನು ಹುಡುಕಬೇಕಿಲ್ಲ. ನೀವು ಬಹಳ ಜನರನ್ನು ಶಂಖ ಊದಲು ಇರಿಸಿಕೊಂಡಿದ್ದೀರಾ. ಶಂಖ‌ ಊದುವ ಸಮಯದಲ್ಲಿ ಊದಿ. ಆದರೆ ಇದು ಶಂಖ ಊದುವ ಸಮಯವಲ್ಲ. ಜನರು ಸಂಕಷ್ಟದಲ್ಲಿದ್ದು, ಅವರ ಬದುಕನ್ನು ಕಟ್ಟಿಕೊಡಿ. ಸಂಕಷ್ಟದಲ್ಲಿರುವ ಜನರ ಬದುಕನ್ನು ಕಟ್ಟಿಕೊಡಲು ಜೆಡಿಎಸ್​ನಲ್ಲಿ ಜನರಿದ್ದಾರೆ ಎಂದರು.

'ಬಕಾಸುರನ ರೀತಿ ನುಂಗುವುದೇ ಅಭಿವೃದ್ಧಿಯೇ?':

ಜೆಡಿಎಸ್ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಅಭಿವೃದ್ಧಿ ಎಂದರೆ 40 ಪರ್ಸಂಟೇಜ್ ಕಮೀಷನ್ ತೆಗೆದುಕೊಳ್ಳುವುದೇ? ನೀವು ನಿಮ್ಮ ಅಭಿವೃದ್ಧಿ ಮಾಡಿಕೊಂಡಿದ್ದೀರಿ. ನಿಮ್ಮ ಕಾರ್ಯಕರ್ತರ ಅಭಿವೃದ್ಧಿ ಮಾಡಿಕೊಂಡಿದ್ದೀರಿ. ಆದರೆ ಜನರ ಅಭಿವೃದ್ಧಿ ಮಾಡಿದ್ದೀರಾ? ಬಕಾಸುರನ ರೀತಿ ನುಂಗುವುದೇ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು. ನಾವು ಅಧಿಕಾರದಲ್ಲಿದ್ದಾಗ ಜನರಿಗೆ ನೆರವಾಗಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನನ್ನ ಬಳಿ ದಾಖಲೆ ಇದೆ. ಬಿಜೆಪಿಯವರ ಲಘು ಮಾತಿನ ಬಗ್ಗೆ ಜನ‌ ತೀರ್ಮಾನ ಮಾಡಲಿದ್ದಾರೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಮಾತಿಗೆ ಖಂಡನೆ:

ಪರಿಷತ್ ಟಿಕೆಟ್ ವಿಚಾರವಾಗಿ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರಿಗೆ ಆ ರೀತಿ ಪದಬಳಕೆ ಮಾಡಬಾರದು. ಕಾರ್ಯಕರ್ತರು ನಾವು ಯಾವ ಸರೌಂಡಿಂಗ್ ನಲ್ಲಿದ್ದೇವೆ. ಇಲ್ಲಿ ಇರಬೇಕಾ ಎಂದು ತೀರ್ಮಾನ ಮಾಡಬೇಕು. ಸೋಲಿಸಿದವರನ್ನು ಅಪ್ಪಿಕೊಳ್ಳುತ್ತಾರೆ, ಆದರೆ ಕಾರ್ಯಕರ್ತರ ಮೇಲೆ ಗಧಾ ಪ್ರಹಾರ ಮಾಡುತ್ತಾರೆ. ನಾನು ಹಾಗೂ ದೇವೇಗೌಡರು ಚುನಾವಣೆಯಲ್ಲಿ ಸೋತಿದ್ದೇವೆ. ಆದರೆ ಕಾರ್ಯಕರ್ತರಿಗೆ ಹೀಗೆ ಮಾತನಾಡಿಲ್ಲ ಎಂದರು.

'ಸಾರಾ ನನ್ನ ನಡುವೆ ಹುಳಿ ಹಿಂಡಲು ಸಾಧ್ಯವಿಲ್ಲ':

ಸಾ.ರಾ.ಮಹೇಶ್ ಹಾಗೂ ನಾನು ನಿರಂತರ ಸಂಪರ್ಕದಲ್ಲಿದ್ದು, ಸಂಜೆ ಸಭೆಗೆ ಆಗಮಿಸಲಿದ್ದಾರೆ. ಸಾ.ರಾ.ಮಹೇಶ್ ಮೇಲೆ ನಾನು ಕೆಂಡಾಮಂಡಲನಾದೆ ಎನ್ನುವುದು ಊಹಾಪೋಹ. ಕೆಂಡಾಮಂಡಲನಾಗಲು ಸಾ.ರಾ.ಮಹೇಶ್ ಯಾವ ತಪ್ಪೂ ಮಾಡಿಲ್ಲ. ನಮ್ಮ ಸಂಬಂಧದಲ್ಲಿ ಯಾರೂ ಹುಳಿ ಹಿಂಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪರಿಷತ್ ಚುನಾವಣೆ: 3 ಪಕ್ಷಗಳಲ್ಲೂ ಅಭ್ಯರ್ಥಿ ಅಂತಿಮ..ಘೋಷಣೆಯೊಂದೇ ಬಾಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.