ETV Bharat / city

ಜೇಮ್ಸ್ ಚಿತ್ರದ ನೆನಪಿಗಾಗಿ ಅಭಿಮಾನಿಗಳಿಂದ ಕೀ ಚೈನ್ ವಿತರಣೆ - Puneeth Rajkumar last Movie James

ದಿ. ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೇ ಸಿನಿಮಾ ಜೇಮ್ಸ್​ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಜೇಮ್ಸ್​ ಅಬ್ಬರಕ್ಕೆ ಫಿದಾ ಆಗಿದ್ದಾರೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ವೀರ ಕನ್ನಡಿಗ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ ಸಂಘ ಜೇಮ್ಸ್​ ಸಿನಿಮಾದ ಲೋಗೋವುಳ್ಳ ಕೀ ಚೈನ್​ ಅನ್ನು ಉಚಿತವಾಗಿ ಹಂಚಿ ಕೊನೆಯ ಸಿನಿಮಾ ಸವಿ ನೆನಪಾಗಿಸಿಕೊಳ್ಳುತ್ತಿದ್ದಾರೆ.

Fan Shreenivas
ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸದಸ್ಯ‌ ಶ್ರೀನಿವಾಸ್ ಮಾತನಾಡಿದರು.
author img

By

Published : Mar 17, 2022, 10:23 AM IST

ಮೈಸೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಇಂದು ದೇಶಾದ್ಯಂತ ಬಿಡುಗಡೆಯಾಗಿದ್ದು, ಮೈಸೂರಿನ ಗಾಯತ್ರಿ ಚಿತ್ರ ಮಂದಿರದ ಮುಂಭಾಗದಲ್ಲಿ ವೀರ ಕನ್ನಡಿಗ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ ಸಂಘದ ಸದಸ್ಯರು ಪುನೀತ್​ ಕೊನೆಯ ಸಿನಿಮಾ ಜೇಮ್ಸ್​ ನೆನೆಪಿಗಾಗಿ ಕೀ ಚೈನ್​ ಹಂಚಿ ಸಂಭ್ರಮ ಪಡುತ್ತಿದ್ದಾರೆ.

ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜೇಮ್ಸ್​ ಲೋಗೋವುಳ್ಳ ಕೀ ಚೈನ್​ ಹಂಚಲಾಯಿತು.

ಜೇಮ್ಸ್ ಸಿನಿಮಾದ ಅಬ್ಬರಕ್ಕೆ ಅಭಿಮಾ‌ನಿಗಳು ಫಿದಾ ಆಗಿದ್ದು, ಮೈಸೂರಿನ ಹಲವು ಥಿಯೇಟರ್​ಗಳ ಮುಂದೆ ಅಭಿಮಾ‌ನಿಗಳ ದಂಡು ಹರಿದು ಬಂದಿದೆ. ಹಲವು ಮಂದಿ ಜೇಮ್ಸ್ ನೋಡುತ್ತಾ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೇಮ್ಸ್ ಸಿನಿಮಾದ ಲೋಗೋವುಳ್ಳ ಕೀ ಚೈನ್ ಅನ್ನು ಸದಸ್ಯರು ಉಚಿತವಾಗಿ ನೀಡುತ್ತಿದ್ದಾರೆ.

ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸದಸ್ಯ‌ ಶ್ರೀನಿವಾಸ್ ಮಾತನಾಡಿ, ಪುನೀತ್ ರಾಜ್ ಕುಮಾರ್ ನೆನಪಿಗಾಗಿ ರಾಜ್ಯಾದ್ಯಂತ ಕೀ ಚೈನ್ ಕೊಡಬೇಕು ಅಂದು ಕೊಂಡಿದ್ದೇವೆ. ಇಂದು ಸಾಂಕೇತಿಕವಾಗಿ 2 ಸಾವಿರ ಕೀ ಚೈನ್ ಕೊಡುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.