ETV Bharat / city

ಸಿದ್ದರಾಮಯ್ಯ ಮೇಲೆ ಐಟಿ ರೇಡ್​​​ಗೆ ಕೇಸರಿ ಸ್ಕೆಚ್​: ಕೇಂದ್ರದ ಆಟ ನಡೆಯೋದಿಲ್ಲ ಎಂದು ಗುಂಡೂರಾವ್ ಗುಡುಗು!​ - ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಮೈಸೂರಿನಲ್ಲಿ ಸಿದ್ದರಾಮಯ್ಯ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರು ಕೇಂದ್ರದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

it-raid-on-opposition-leader-siddaramaiah
author img

By

Published : Oct 19, 2019, 8:16 PM IST

ಮೈಸೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಗಳ ಮೇಲೆ ಐಟಿ ದಾಳಿ ನಡೆಸಲು ಪ್ರಧಾನಿ ಮೋದಿ- ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲಾಖೆಯನ್ನ ಸಜ್ಜು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ನಗರದಲ್ಲಿ ಸಿದ್ದರಾಮಯ್ಯ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮುಂದೆ ಮೋದಿ - ಅಮಿತ್​ ಶಾ ಅವರ ಆಟ ನಡೆಯುವುದಿಲ್ಲ. ಇದೆಕ್ಕೆಲ್ಲ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಕೇಂದ್ರ ಸರ್ಕಾರ ಚುನಾವಣೆ ಆಯೋಗ, ಸಿಬಿಐ, ಇಡಿ, ಸುಪ್ರೀಂಕೋಟ್೯ ಸೇರಿದಂತೆ ಎಲ್ಲ‌ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಆದ್ದರಿಂದ ಅವುಗಳ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಸಮ್ಮಿಶ್ರ ಸರ್ಕಾರ ಕೆಡವಲು ಬಿ.ಎಸ್​.ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕಾಗಿ ₹ 500-700 ಕೋಟಿ ಖರ್ಚು ಮಾಡಿದ್ದಾರೆ‌. ಇದರ ಮೇಲೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ದುರುದ್ದೇಶದಿಂದ ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್​ ಸೇರಿದಂತೆ ಹಲವು ಕಾಂಗ್ರೆಸ್​ ಮುಖಂಡರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಳಿತ ನಡೆಸಲು ಅಸಹಾಯಕರಾಗಿದ್ದಾರೆ. ಕಾಂಗ್ರೆಸ್ ಅಧಿಕಾರ ಕೊಡಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸುತ್ತೇವೆ ಎಂದರು.

ಹುಣಸೂರು ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿ, ಉಪಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮೋದಿ ದೇಶದಲ್ಲಿ ಹಿಟ್ಲರ್ ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಮಹಾತ್ಮಗಾಂಧಿ ದೇಶಬೇಕೋ ಅಥವಾ ಸಾವರ್ಕರ್ ದೇಶ ಬೇಕೋ ಚಿಂತಿಸಬೇಕಿದೆ ಎಂದರು. ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾಅಮರ್​ನಾಥ್, ಶಾಸಕ ತನ್ವೀರ್ ಸೇಠ್ ಇದೇ ವೇಳೆ, ಮಾತನಾಡಿದರು.

Intro:ದಿನೇಶ್ ಗುಂಡೂರಾವ್

Body:ದಿನೇಶ್ ಗುಂಡೂರಾವ್

Conclusion:ಸಿದ್ದರಾಮಯ್ಯ ಅವರ ಮೇಲೂ ದಾಳಿ ನಡೆಸಲು ಮೋದಿ- ಶಾ ಸಂಜು ರೂಪಿಸಿದ್ದಾರೆ: ದಿನೇಶ್ ಗುಂಡೂರಾವ್
( ಈ ಸುದ್ದಿಯನ್ನು ಡೆಸ್ಕ್ ವಾಟ್ಸಪ್ ಮಾಡಲಾಗಿದೆ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.