ETV Bharat / city

ಅವರೂ ವರ್ಗಾವಣೆಯಾಗಿದ್ದಾರೆ, ಅದಕ್ಕೆ ನಾನು ರಾಜೀನಾಮೆ ವಾಪಸ್ ಪಡೆದೆ : ಶಿಲ್ಪಾನಾಗ್

ಯಾವ ರೀತಿಯ ತನಿಖೆ ಬೇಕಾದರೂ ಮಾಡಿಸಲಿ ಅದಕ್ಕೆ ದಾಖಲೆ ಇದೆ. 12 ಕೋಟಿ ಅಂತ ಹೇಳಿದ್ದಾರೆ, ಅದ್ಯಾವ 12 ಕೋಟಿ ಅಂತ ಅವರೇ ಹೇಳಲಿ. ಒಂದು ಪೈಸೆಯನ್ನು ನಾವು ಕ್ಯಾಶ್‌ನಲ್ಲಿ ತೆಗೆದುಕೊಂಡಿಲ್ಲ. ತೆಗೆದುಕೊಂಡಿರುವುದಕ್ಕೆ ದಾಖಲೆ ಪಾಲಿಕೆಯಲ್ಲಿ ಇದೆ..

ips-officer-shilpa-nagh
ಶಿಲ್ಪ ನಾಗ್
author img

By

Published : Jun 6, 2021, 3:37 PM IST

ಮೈಸೂರು : ಇಂತಹ ಅಧಿಕಾರಿಗಳು ಯಾವ ಜಾಗದಲ್ಲಿ ಇರಬಾರದು ಅಂತ ರಾಜೀನಾಮೆ ಕೊಟ್ಟಿದ್ದೆ. ಆದರೆ, ಇದೀಗ ವರ್ಗಾವಣೆ ಆಗಿದೆ. ನನ್ನ ರಾಜೀನಾಮೆ ಆದೇಶ ವಾಪಸ್ ಪಡೆದಿದ್ದೇನೆ‌ ಎಂದು ರೋಹಿಣಿ ಸಿಂಧೂರಿ ವಿರುದ್ಧ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಗುಡುಗಿದರು.

ರಾಜೀನಾಮೆ ಹಿಂದಕ್ಕೆ ಪಡೆದ ಕುರಿತಂತೆ ಶಿಲ್ಪಾನಾಗ್ ಪ್ರತಿಕ್ರಿಯೆ..

ಓದಿ: ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಲಕ್ಷ್ಮಿಕಾಂತ್ ರೆಡ್ಡಿ ಅಧಿಕಾರ ಸ್ವೀಕಾರ

ನಗರ ಪಾಲಿಕೆ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ಕೊಟ್ಟಿದ್ದು ಒಂದೇ ಉದ್ದೇಶಕ್ಕೆ, ಅದನ್ನ ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆದಿದ್ದೇನೆ ಎಂದರು‌.

ರಿಯಲ್ ಎಸ್ಟೇಟ್ ಡೀಲರ್ ಯಾರ ಮನೇಲಿ ಇದ್ದಾರೆ ಅನ್ನೋದು ನನಗೆ ಗೊತ್ತಿದೆ. ನನ್ನ ಟ್ರ್ಯಾಕ್ ರೆಕಾರ್ಡ್ ನೋಡಲಿ, ಅವರ ಟ್ರ್ಯಾಕ್ ರೆಕಾರ್ಡ್ ಕೂಡ ನೋಡಲಿ ಎಂದು ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.

ಅನಧಿಕೃತ ವ್ಯಕ್ತಿಯನ್ನು ಅಧಿಕೃತ ಮನೆಗೆ ಕರೆಸಿಕೊಂಡು ಯಾವ ಮಾಹಿತಿ ನೀಡಿದ್ರು ಅನ್ನೋದು ಗೊತ್ತಿದೆ. ನನ್ನ ಜೀವನದಲ್ಲೇ ಇಂತಹ ಅಧಿಕಾರಿಯನ್ನ ನೋಡಿರಲಿಲ್ಲ ಎಂದು ಕಿಡಿಕಾರಿದರು.

ಯಾವ ರೀತಿಯ ತನಿಖೆ ಬೇಕಾದರೂ ಮಾಡಿಸಲಿ ಅದಕ್ಕೆ ದಾಖಲೆ ಇದೆ. 12 ಕೋಟಿ ಅಂತ ಹೇಳಿದ್ದಾರೆ, ಅದ್ಯಾವ 12 ಕೋಟಿ ಅಂತ ಅವರೇ ಹೇಳಲಿ. ಒಂದು ಪೈಸೆಯನ್ನು ನಾವು ಕ್ಯಾಶ್‌ನಲ್ಲಿ ತೆಗೆದುಕೊಂಡಿಲ್ಲ. ತೆಗೆದುಕೊಂಡಿರುವುದಕ್ಕೆ ದಾಖಲೆ ಪಾಲಿಕೆಯಲ್ಲಿ ಇದೆ ಎಂದರು.

ಮೈಸೂರಿನ ಜನರು ಅತ್ಯುತ್ತಮವಾಗಿ ಸಹಕಾರ ನೀಡಿದ್ದಾರೆ. ನಾವು ಮಾಡಿದ ಆದೇಶವನ್ನು ಜನರು ಪರಿಪಾಲನೆ ಮಾಡಿದ್ದಾರೆ. ಮೈಸೂರಿನ ಜನರು, ಅಧಿಕಾರಿ ವರ್ಗ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.

ನೂತನ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಮುಕ್ತ ಮಾಡಲು ಜನಪ್ರತಿನಿಧಿಗಳೊಂದಿಗೆ ಹಾಗೂ ಅಧಿಕಾರಿಗಳ‌ ಸಹಕಾರ ಪಡೆದು ಕೆಲಸ ಮಾಡುತ್ತೇನೆ ಎಂದರು.

ಸಿಬ್ಬಂದಿ ನಮಸ್ಕಾರಕ್ಕೆ ಪ್ರತಿ ನಮಸ್ಕಾರ : ರೋಹಿಣಿ ಸಿಂಧೂರಿ ಹಾಗೂ ಇವರ ನಡುವೆ ಜಟಾಪಟಿ ಹಿನ್ನೆಲೆಯಲ್ಲಿ ಇಬ್ಬರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ನಗರ‌ ಪಾಲಿಕೆಯ ವಿವರಣೆ ನೀಡಿ ನಂತರ ಹೊರಡುವಾಗ ಕೆಲ ಸಿಬ್ಬಂದಿ ಸೆಲ್ಫಿ ಹಾಗೂ ಶಿಲ್ಪಾನಾಗ್ ಅವರ ಜೊತೆಯಲ್ಲಿ ಫೋಟೋ ತೆಗೆಸಿಕೊಂಡರು.

ನಗರ ಪಾಲಿಕೆಯಿಂದ ಶಿಲ್ಪಾನಾಗ್ ಹೊರಡುವಾಗ ಭದ್ರತಾ ಸಿಬ್ಬಂದಿ ಬಂದು ನಮಸ್ಕಾರ ಮಾಡಿದ್ದಾರೆ‌. ಅದಕ್ಕಾಗಿ ಪ್ರತಿಯಾಗಿ ನಮಸ್ಕಾರ ಮಾಡಿ, ಅಧಿಕಾರಿಗಳಲ್ಲಿ‌ ಅಧಿಕಾರದ ಮದ ಅಲ್ಲ, ಜನರ ಬಳಿ ಸಾಮಾನ್ಯರಂತೆ ನಡೆದುಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.