ETV Bharat / city

ಪೊಲೀಸ್ ಅಕಾಡೆಮಿಯಲ್ಲಿ ಗನ್‌ ಹಿಡಿದು ಶೂಟ್‌ ಟ್ರಯಲ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ - ಮೈಸೂರು ಸುದ್ದಿ

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕಟ್ಟಡ ಹಾಗೂ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

Home minister Araga Jnanendra Gunshot practice in mysore
ಕೈಯಲ್ಲಿ ಗನ್‌ ಹಿಡಿದು ಮೈಸೂರಿನಲ್ಲಿ ಶೂಟ್‌ ಟ್ರಯಲ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Aug 27, 2021, 1:30 PM IST

ಮೈಸೂರು: ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಫೈರಿಂಗ್ ಸಿಮ್ಯುಲೇಟರ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗನ್ ಹಿಡಿದು ಶೂಟ್‌ ಮಾಡುವ ಮೂಲಕ ಗಮನ ಸೆಳೆದರು.

ಗನ್‌ ಹಿಡಿದು ಶೂಟ್‌ ಟ್ರಯಲ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಇದೇ ವೇಳೆ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸಂಚಾರ ನಡೆಸಿದ ಗೃಹ ಸಚಿವರು, ಕಟ್ಟಡ ಹಾಗೂ ವ್ಯವಸ್ಥೆ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾಡೆಲ್ ಪೊಲೀಸ್ ಸ್ಟೇಷನ್, ಮೂಡ್ ಕೋರ್ಟ್, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ಸೇರಿ ವ್ಯವಸ್ಥೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್ ಸಚಿವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಕೇಸ್: ಡಿಜಿಪಿಗೆ ತನಿಖೆ ಮೇಲುಸ್ತುವಾರಿ ವಹಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.