ETV Bharat / city

ಮೈಸೂರು: ಮಳೆಗೆ ಜನಜೀವನ ಅಸ್ತವ್ಯಸ್ತ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು - water is flowing into the houses

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಹಿಂಗಾರು ಮಳೆ (Heavy rain in mysuru) ಸುರಿಯುತ್ತಿದ್ದು, ಮೈಸೂರು ನಗರದ ಕೆಲವು ಬಡಾವಣೆಗಳಿಗೆ ನೀರು ನುಗ್ಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಹಳೆಯ ಮನೆಗಳು ಕುಸಿದು ಬಿದ್ದಿವೆ.

heavy rain in mysore
ಮಳೆಗೆ ಜನಜೀವನ ಅಸ್ತವ್ಯಸ್ತ
author img

By

Published : Nov 15, 2021, 8:03 PM IST

ಮೈಸೂರು: ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಹಿಂಗಾರು ಮಳೆ (Heavy rain in mysuru) ಸುರಿಯುತ್ತಿದ್ದು, ಮೈಸೂರು ನಗರದ ಕೆಲವು ಬಡಾವಣೆಗಳಿಗೆ ನೀರು ನುಗ್ಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಹಳೆಯ ಮನೆಗಳು ಕುಸಿದು ಬಿದ್ದಿವೆ.

ಮೈಸೂರು ನಗರದಲ್ಲಿ ಸುರಿದ ಭಾರಿ ಮಳೆಗೆ ಬೋಗಾದಿ ಕೆರೆ ಕೋಡಿ ಬಿದ್ದಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ. ಇಲವಾಲ ಸಮೀಪದ ಬಡಾವಣೆಯ ಮನೆಗಳಿಗೂ ನೀರು ನುಗ್ಗಿವೆ. ಹುಣಸೂರು ರಸ್ತೆ ಸೇರಿದಂತೆ ಹಲವೆಡೆ ಮ್ಯಾನ್ ಹೋಲ್​ಗಳಲ್ಲಿ ನೀರು ತುಂಬಿಕೊಂಡಿದೆ.

ನಗರದ ಖಾಸಗಿ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೆಲಮಾಳಿಗೆ ಜಲಾವೃತವಾದುದರಿಂದ ಅಲ್ಲಿದ್ದ ರಕ್ತಪರೀಕ್ಷೆ ಪ್ರಯೋಗಾಲಯದ ಉಪಕರಣಗಳನ್ನು ತಾತ್ಕಾಲಿಕವಾಗಿ ಮೇಲಂತಸ್ತಿಗೆ ಸ್ಥಳಾಂತರಿಸಲಾಯಿತು. ನಂತರ ಪಂಪಿಂಗ್‌ ಮೋಟಾರ್ ಮೂಲಕ ನೀರನ್ನು ಹೊರ ಹಾಕಲಾಯಿತು.
ಮೈಸೂರು ದಿವಾನ್ಸ್ ರಸ್ತೆ, ಪಶುಸಂಗೋಪನಾ ಇಲಾಖೆ ಕಚೇರಿ ಆವರಣದಲ್ಲಿದ್ದ ಮರವೊಂದು ಉರುಳಿಬಿದ್ದು, ಕಾಂಪೌಂಡ್ ಹಾಳಾಗಿದೆ.

ತಾಲ್ಲೂಕುಗಳಲ್ಲಿ ಮನೆ ಕುಸಿತ

ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮ ಹಾಗೂ ನಗರದ ಅಶೋಕಪುರಂ ಬಡಾವಣೆಯಲ್ಲಿ ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತಿ.ನರಸೀಪುರ ತಾಲ್ಲೂಕಿನ ಕಿರಗಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿಳಿಗೆರೆ ಹುಂಡಿ ಗ್ರಾಮದ ವಾಸಿ ಬಂಗಾರು ಎಂಬುವವರ ಮನೆ ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಕುಟುಂಬಸ್ಥರು ಪಾರಾಗಿದ್ದಾರೆ.‌ ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ಕಾಂತರಾಜು ಭೇಟಿ ನೀಡಿದ್ದಾರೆ.

ಹುಣಸೂರು ಗ್ರಾಮದಲ್ಲಿಯೂ ಮನೆಗಳ ಗೋಡೆ ಕುಸಿದಿವೆ. ಹನಗೋಡು ಹೋಬಳಿಯ ಚಿಲ್ಕುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿಕುಪ್ಪೆ ಗ್ರಾಮದ ಗೀತಾ ಶಿವಕುಮಾರ್ ಅವರ ಮನೆ ಭಾಗಶಃ ಕುಸಿದಿದೆ. ತಟ್ಟೆಕೆರೆ ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಗೇಟ್​ನ ಲೀಲಾವತಿ ಚಂದ್ರನಾಯ್ಕರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ.

ತಿ.ನರಸೀಪುರದಲ್ಲಿ ಮೊಸಳೆ ಪ್ರತ್ಯಕ್ಷ, ಆತಂಕ

ತಿ.ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿರುವ ಕೆರೆಯೊಂದರಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಕೆರೆಯ ದಡದ ಮೇಲೆ ಮೊಸಳೆ ವಿಶ್ರಮಿಸಿಕೊಳ್ಳುವುದನ್ನು ಕಂಡಿರುವ ಗ್ರಾಮಸ್ಥರು ಜಾನುವಾರುಗಳನ್ನು ಕೆರೆಗೆ ಕರೆದೊಯ್ದು ನೀರು ಕುಡಿಸಲು ಹೆದರುವಂತಾಗಿದೆ.

ಜಿಲ್ಲೆಯ ಮಳೆಯ ವಿವರ

ಮೈಸೂರು ನಗರದಲ್ಲಿ 6 ಸೆಂ.ಮೀ ಮಳೆಯಾಗಿದ್ದು, ಕೆ.ಆರ್.ನಗರದಲ್ಲಿ 8 ಸೆಂ.ಮೀ, ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು, ಮಾದಾಪುರ, ಚಿಕ್ಕೆರೆಯೂರು ಭಾಗದಲ್ಲಿ 4, ಹುಣಸೂರಿನ ಜಾಬಗೆರೆಯಲ್ಲಿ 6, ಬಿಳಿಕೆರೆಯಲ್ಲಿ 5, ಕೆ.ಆರ್.ನಗರದ ಡೋರನಹಳ್ಳಿಯಲ್ಲಿ 5, ಚುಂಚನಕಟ್ಟೆ, ಚೆನ್ನಮ್ಮನಕೆರೆ, ತಿಪ್ಪೂರು, ಸಾಲಿಗ್ರಾಮದಲ್ಲಿ ತಲಾ 4, ಮೈಸೂರು ತಾಲ್ಲೂಕಿನ ನಾಗನಹಳ್ಳಿಯಲ್ಲಿ 7, ಮರಟಿಕ್ಯಾತನಹಳ್ಳಿಯಲ್ಲಿ 6, ದೊಡ್ಡಮಾರಗೌಡನಹಳ್ಳಿ, ಹಂಚ್ಯಾದಲ್ಲಿ ತಲಾ 5, ನಂಜನಗೂಡು ತಾಲ್ಲೂಕಿನ ಹದಿನಾರು, ಸುತ್ತೂರು, ಹೊಸಕೋಟೆ, ಹುಳಿಮಾವುಗಳಲ್ಲಿ ತಲಾ 5 ಸೆಂ.ಮೀ.ನಷ್ಟು ಮಳೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.