ಮೈಸೂರು : ಸತತವಾಗಿ ಸುರಿಯುತ್ತಿರುವ ಮಳೆಯಿಂದ ಶಾಲೆಗಳಿಗೆ ಮಕ್ಕಳು ಹೋಗಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ (Vacation to school-colleges) ಡಿಡಿಪಿಐ ಆದೇಶ (announce the DDPI) ಹೊರಡಿಸಿದ್ದಾರೆ.
ಕಳೆದ 20 ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನರು ತತ್ತರಿಸಿದ್ದಾರೆ. ಅಲ್ಲಲ್ಲಿ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ. ಜೊತೆಗೆ ಮಕ್ಕಳು ಶಾಲೆಗೆ ಹೋಗಲು ತೀವ್ರ ತೊಂದರೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ, ಅನುದಾನ ಹಾಗೂ ಅನುದಾನ ರಹಿತ ಮತ್ತು ಸಿಬಿಎಸ್ಇ ಪಠ್ಯ ಕ್ರಮ ಹೊಂದಿರುವ ಶಾಲೆಗಳಿಗೆ ಶನಿವಾರದಂದು ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.
ನಾಳೆ ನೀಡಲಾಗುವ ರಜೆಗೆ ಬದಲಾಗಿ ಮುಂದಿನ ಶನಿವಾರ ಪೂರ್ತಿ ದಿನ ತರಗತಿ ನಡೆಸುವ ಷರತ್ತಿನೊಂದಿಗೆ ರಜೆ ಘೋಷಿಸಲಾಗಿದೆ.