ETV Bharat / city

ಡಾ. ಹೆಚ್​ ಸಿ ಮಹದೇವಪ್ಪನವರ ಕಡೆಗಣನೆಗೆ ಬೆಂಬಲಿಗರ ಆಕ್ಷೇಪ.. ಕ್ಷಮೆ ಕೋರಿದ ಜಿಲ್ಲಾಧ್ಯಕ್ಷ ಡಾ. ಬಿ ಜೆ ವಿಜಯಕುಮಾರ್.. - ಯತೀಂದ್ರ ಕಾರಿಗೆ ಘೇರಾವ್​

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ನಡೆದ ಜಾಥಾದ ಸ್ವಾಗತ ಭಾಷಣದಲ್ಲಿ ಕಾಂಗ್ರೆಸ್ ನಾಯಕರು ಹೆಚ್​ಸಿಎಂ ಹೆಸರು ಜೊತೆಗೆ ಅವರ ಬೆಂಬಲಿಗರ ಹೆಸರನ್ನು ಪ್ರಸ್ತಾಪ ಮಾಡದೆ ಇದ್ದದ್ದು, ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರವಾಸಿ ಮಂದಿರದಲ್ಲಿ ಮುಖಂಡರಿಗೆ ಏರ್ಪಡಿಸಿದ್ದ ಔತಣಕೂಟದಲ್ಲೂ ಸಹ ಹೆಚ್​ಸಿಎಂ ಬೆಂಬಲಿಗರು ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದು ಸಹ ಅಸಮಾಧಾನಕ್ಕೆ ಕಾರಣವಾಯಿತು..

Hc mahadevappa followers attacked MLA Yatindra car
ಯತೀಂದ್ರ ಕಾರು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಹೆಚ್​.ಸಿ.ಮಹದೇವಪ್ಪ ಬೆಂಬಲಿಗರು: ಕಾಂಗ್ರೆಸ್​ನಲ್ಲಿ ಒಡಕು?
author img

By

Published : Jul 14, 2021, 3:41 PM IST

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಮಾಜಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ಅವರ ಕಡೆಗಣನೆ ಬೆಳವಣಿಗೆ ನಂಜನಗೂಡು ಕಾಂಗ್ರೆಸ್​​ನಲ್ಲಿ ತಲ್ಲಣ ಮೂಡಿಸುತ್ತಿದೆ. ಡಾ. ಹೆಚ್. ಸಿ ಮಹದೇವಪ್ಪ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಘೇರಾವ್ ಹಾಕಿದ್ದಾರೆ.

ನಂಜನಗೂಡಿನ ಪ್ರವಾಸಿಮಂದಿರದಲ್ಲಿ ಈ ಘಟನೆ ನಡೆದಿದ್ದು, ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ ಜೆ ವಿಜಯಕುಮಾರ್​​ಗೆ ಮುತ್ತಿಗೆ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಾ. ಯತೀಂದ್ರ ಸಿದ್ದರಾಮಯ್ಯ ಕಾರನ್ನು ತಡೆದ ಡಾ. ಮಹದೇವಪ್ಪ ಬೆಂಬಲಿಗರು..

ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರ ಬೆಳವಣಿಗೆಗೆ ಮಹದೇವಪ್ಪನವರ ಕೊಡುಗೆ ಇದೆ. ಆದರೆ, ಇದೀಗ ಮಹದೇವಪ್ಪನವರನ್ನ ಕಡೆಗಣಿಸುತ್ತಿದ್ದಾರೆಂದು ಆರೋಪಿಸಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅವರು ಮಹದೇವಪ್ಪ ಬೆಂಬಲಿಗರ ಕ್ಷಮೆ ಕೋರಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ನಡೆದ ಜಾಥಾದ ಸ್ವಾಗತ ಭಾಷಣದಲ್ಲಿ ಕಾಂಗ್ರೆಸ್ ನಾಯಕರು ಹೆಚ್​ಸಿಎಂ ಹೆಸರು ಜೊತೆಗೆ ಅವರ ಬೆಂಬಲಿಗರ ಹೆಸರನ್ನು ಪ್ರಸ್ತಾಪ ಮಾಡದೆ ಇದ್ದದ್ದು, ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರವಾಸಿ ಮಂದಿರದಲ್ಲಿ ಮುಖಂಡರಿಗೆ ಏರ್ಪಡಿಸಿದ್ದ ಔತಣಕೂಟದಲ್ಲೂ ಸಹ ಹೆಚ್​ಸಿಎಂ ಬೆಂಬಲಿಗರು ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದು ಸಹ ಅಸಮಾಧಾನಕ್ಕೆ ಕಾರಣವಾಯಿತು.

ಇದನ್ನೂ ಓದಿ: ಪಾಕ್‌ ಬಸ್ ಸ್ಫೋಟದಲ್ಲಿ 9 ಚೀನಿ ಪ್ರಜೆಗಳು ಸೇರಿ 13 ಸಾವು: 'ಭಯೋತ್ಪಾದಕ ದಾಳಿ' ಎಂದ ಚೀನಾ

ಸದ್ಯದ ಬೆಳವಣಿಗೆ ಗಮನಿಸಿದರೆ ನಂಜನಗೂಡು ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿ ಇಲ್ಲವೆಂದೇ ಗೋಚರವಾಗುತ್ತಿದೆ. ದಿನೇದಿನೆ ನಂಜನಗೂಡು ಕಾಂಗ್ರೆಸ್​​ನಲ್ಲಿ ಭಿನ್ನಮತ ಉಲ್ಬಣವಾಗುತ್ತಿದೆ. ನಾಯಕರ ನಡುವಿನ ಮುನಿಸು ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುವುದೋ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.