ETV Bharat / city

ಜನ ಆಕ್ರೋಶದಲ್ಲಿ ಕಲ್ಲು ಬೀಸುವುದು, ಮೊಟ್ಟೆ ಎಸೆಯುವುದು ಸಾಮಾನ್ಯ: ವಿಶ್ವನಾಥ್ ಪ್ರತಿಕ್ರಿಯೆ - Etv Bharat Kannada

ನಮ್ಮ ರಾಜ್ಯದಲ್ಲಿ ರಾಜಕೀಯ ನಾಯಕರ ಹತ್ಯೆ ಮಾಡುವಂತಹ ಕೆಟ್ಟ ವಾತಾವರಣ ಇಲ್ಲ. ಸರ್ಕಾರನೂ ಚೆನ್ನಾಗಿದೆ, ರಾಜ್ಯನೂ ಚೆನ್ನಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ತಿಳಿಸಿದರು.

h-vishwanath-reaction-on-egg-throwing-at-siddaramaiah-car-issue
ಜನ ಆಕ್ರೋಶದಲ್ಲಿ ಕಲ್ಲು ಬೀಸುವುದು, ಮೊಟ್ಟೆ ಎಸೆಯುವುದು ಸಾಮಾನ್ಯ: ವಿಶ್ವನಾಥ್ ಪ್ರತಿಕ್ರಿಯೆ
author img

By

Published : Aug 20, 2022, 6:18 PM IST

ಮೈಸೂರು: ಜನ ಆಕ್ರೋಶದಲ್ಲಿ ಕಲ್ಲು ಬೀಸುವುದು, ಮೊಟ್ಟೆ ಎಸೆಯುವುದು ಸಾಮಾನ್ಯ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ನಾನು ಸಮರ್ಥಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನತಂತ್ರ ವ್ಯವಸ್ಥೆಯಲ್ಲಿ ಜನರೇ ನಾಯಕರು. ಅವರು ಸರ್ಕಾರದ ವಿರುದ್ಧ ಮತ್ತು ರಾಜಕಾರಣಿಯ ವಿರುದ್ಧ ಆಕ್ರೋಶದಲ್ಲಿ ಕಲ್ಲು ಬೀಸುವುದು, ಮೊಟ್ಟೆ ಎಸೆಯುವುದು ಸಹಜ. ಹಾಗಂತ ನಾನು ಯಾವುದನ್ನೂ ಬೆಂಬಲಿಸುವುದಿಲ್ಲ, ಖಂಡಿಸುತ್ತೇನೆ ಎಂದರು.

ಜನ ಆಕ್ರೋಶದಲ್ಲಿ ಕಲ್ಲು ಬೀಸುವುದು, ಮೊಟ್ಟೆ ಎಸೆಯುವುದು ಸಾಮಾನ್ಯ: ವಿಶ್ವನಾಥ್ ಪ್ರತಿಕ್ರಿಯೆ

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ಎಫೆಕ್ಟ್: ಶಾಸಕರ ಭವನದಲ್ಲಿ ಮೊಟ್ಟೆ ಬ್ಯಾನ್?

ಗಾಂಧಿಯನ್ನು ಕೊಂದವರು ನನ್ನನ್ನು ಕೊಲ್ಲುವುದಿಲ್ಲವೇ ಎಂಬ ಸಿದ್ದರಾಮಯ್ಯ ಹೇಳಿಕೆ ಸೂಕ್ತವಲ್ಲ. ಗಾಂಧಿಗೆ ಸಿದ್ದರಾಮಯ್ಯ ಹೋಲಿಕೆ ಅಲ್ಲ. ಜನರು ತಮ್ಮ-ತಮ್ಮ ಆಕ್ರೋಶವನ್ನು ಬೇರೆ-ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದು ಇದೆ. ಹಾಗಂತ ಅದನ್ನು ಈ ರೀತಿ ಹೋಲಿಕೆ ಮಾಡುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿ ರಾಜಕೀಯ ನಾಯಕರ ಹತ್ಯೆ ಮಾಡುವಂತಹ ಕೆಟ್ಟ ವಾತಾವರಣ ಇಲ್ಲ. ಸರ್ಕಾರನೂ ಚೆನ್ನಾಗಿದೆ, ರಾಜ್ಯನೂ ಚೆನ್ನಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಮೊಟ್ಟೆ ಪ್ರಕರಣ: ಬೆಂಗಳೂರಲ್ಲಿ ಮಾಜಿ ಸಿಎಂಗಿಲ್ಲ ಸೂಕ್ತ ಭದ್ರತೆ.. ಬಿಜೆಪಿ ಶಾಸಕರಿಗೆ ಭರ್ಜರಿ ಸುರಕ್ಷತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.