ETV Bharat / city

ನಾನು ಆಣೆ ಪ್ರಮಾಣ ಮಾಡುವುದಕ್ಕೆ ಬಂದಿಲ್ಲ: ಹೆಚ್‌ ವಿಶ್ವನಾಥ್ ಸ್ಪಷ್ಟನೆ

ರಾಜೀನಾಮೆ ನೀಡಲು 25 ಕೋಟಿ ರೂ ಹಣ ಪಡೆದಿದ್ದಾರೆ ಎಂಬ ಸಾ.ರಾ.ಮಹೇಶ್ ಆರೋಪ ಸುಳ್ಳು. ನಾನು ಈ ಕುರಿತಂತೆ ಯಾವುದೇ ಆಣೆ- ಪ್ರಮಾಣ ಮಾಡುವುದಿಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

mysure chamundi hills
author img

By

Published : Oct 17, 2019, 9:53 AM IST

Updated : Oct 17, 2019, 10:51 AM IST

ಮೈಸೂರು: ರಾಜೀನಾಮೆ ನೀಡಲು 25 ಕೋಟಿ ರೂ ಹಣ ಪಡೆದಿದ್ದಾರೆ ಎಂಬ ಸಾ.ರಾ.ಮಹೇಶ್ ಆರೋಪ ಸುಳ್ಳು. ನಾನು ಈ ಕುರಿತಂತೆ ಯಾವುದೇ ಆಣೆ - ಪ್ರಮಾಣ ಮಾಡುವುದಿಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಆಣೆ ಪ್ರಮಾಣದ ಕುರಿತು ಹೆಚ್‌ ವಿಶ್ವನಾಥ್ ಸ್ಪಷ್ಟನೆ

ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ.ಮಹೇಶ್ ಇಬ್ಬರೂ ಇಂದು ಚಾಮುಂಡಿ ಬೆಟ್ಟಕ್ಕೆ ಬಂದಿದ್ದು, ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೆಚ್.ವಿಶ್ವನಾಥ್ ನಾನು ಯಾವುದೇ ಹಣ ಪಡೆದಿಲ್ಲ ಎಂದು ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಿದರೆ, ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಹಾಕಿದ್ದ ಸವಾಲಿಗೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಚಾಮುಂಡಿ ಬೆಟ್ಟಕ್ಕೆ ಬಂದಿದ್ದು, ಆಣೆಪ್ರಮಾಣಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೆ ಈ ಕುರಿತಂತೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಾನು ಸತ್ಯ, ಪ್ರಮಾಣ ಮಾಡುವುದಿಲ್ಲ. ನನಗೆ 25 ಕೋಟಿ ರೂ ನೀಡಿದ ಆ ವ್ಯಕ್ತಿ ಯಾರು ಎಂದು ಸಾ.ರಾ.ಮಹೇಶ್ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬಂದರೆ ನಾನು ಈ ಆರೋಪವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಇದಕ್ಕೆ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿ, ನಾನಾಗಲಿ ನನ್ನ ಕುಟುಂಬದವರಾಗಲಿ ಹಣ ಅಥವಾ ಇತರ ಆಮಿಷಗಳಿಗೆ ಒಳಗಾಗಿಲ್ಲ ಎಂದು ಹೆಚ್.ವಿಶ್ವನಾಥ್ ಪ್ರಮಾಣ ಮಾಡಲಿ ಎಂದು ಪಟ್ಟು ಹಿಡಿದಿದ್ದರು.

ಮುಖಾಮುಖಿ ಭೇಟಿಯಾಗದ ಶಾಸಕರು:

ಆಣೆ ಪ್ರಮಾಣಕ್ಕೆ ಬಂದರೂ‌ ಸಹ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹಾಗೂ ಶಾಸಕ ಸಾ.ರಾ ಮಹೇಶ್ ಪ್ರತ್ಯೇಕವಾಗಿ ಪೂಜೆ ಸಲ್ಲಿಸಿ ಮುಖಾಮುಖಿ ಭೇಟಿಯಾಗದೇ, ಯಾವುದೇ ಆಣೆ ಪ್ರಮಾಣ ಮಾಡಲಿಲ್ಲ. 25 ಕೋಟಿ ಹಣ ಪಡೆದು ಶಾಸಕ ಸ್ಥಾನಕ್ಕೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂಬ ಶಾಸಕ ಸಾ.ರಾ.ಮಹೇಶ್ ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು. ಈ ಆರೋಪ ಸತ್ಯ ಎಂದು ಇಂದೂ ಸಹ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಜೊತೆಗೆ ದೇವಾಲಯಕ್ಕೆ ಬಂದಾಗ ಭಾವುಕರಾಗಿ ಶಾಸಕ ಸಾ.ರಾ.ಮಹೇಶ್ ಕಣ್ಣಿರಿಟ್ಟರು.

ಯಾವುದೇ ಕಾರಣಕ್ಕೂ ಸತ್ಯ ಮಾಡುವುದಿಲ್ಲ:

ಯಾವುದೇ ಕಾರಣಕ್ಕೂ ಸತ್ಯ- ಪ್ರಮಾಣ ಮಾಡುವುದಿಲ್ಲ, ನನ್ನ ಮೇಲೆ ಆರೋಪ ಮಾಡಿದ ವ್ಯಕ್ತಿ ಯಾರು?, ನನಗೆ ಯಾರು ಹಣ ನೀಡಿದ ವ್ಯಕ್ತಿ ಯಾರು ? ಎಂದು ನೋಡಲು ಬಂದೆ. ನಾನು ಯಾವುದೇ ಸತ್ಯ ಮಾಡುವುದಿಲ್ಲ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ತಿಳಿಸಿದರು.

ಸಾರಾ ಮಹೇಶ್​ ಬೆಂಬಲಿಗರ ಪ್ರತಿಭಟನೆ:

ಸಾರಾ ಮಹೇಶ್​ ಬೆಂಬಲಿಗರ ಪ್ರತಿಭಟನೆ:

ಅನರ್ಹ ಶಾಸಕ ಹೆಚ್. ವಿಶ್ವನಾಥ್ ನವರು ಚಾಮುಂಡಿ ದೇವಿಯ ಬಳಿ ಬಂದು ಆಣೆ-ಪ್ರಮಾಣ ಮಾಡಬೇಕೇಂದು ಒತ್ತಾಯಿಸಿ ಸಾರಾ ಮಹೇಶ್​ ಬೆಂಬಲಿಗರು ಪ್ರತಿಭಟನೆ ನಡೆಸಿದರು.

Intro:Body:

ಆಣೆ - ಪ್ರಮಾಣಕ್ಕೆ ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಸಿದ್ಧ. ಲೈವ್ ನೋಡಿ

ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ೨೫ ಕೋಟಿ ಹಣ ಪಡೆದಿದ್ದಾರೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಎಂಬ ಶಾಸಕ ಸಾ.ರಾ.ಮಹೇಶ್ ಆರೋಪ ಸುಳ್ಳು ಎಂದು ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಿದರೆ ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಹಾಕಿದ್ದ ಸವಾಲಿಗೆ  ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹಾಗೂ ಶಾಸಕ ಸಾ.ರಾ.ಮಹೇಶ್ ಚಾಮುಂಡಿ ಬೆಟ್ಟಕ್ಕೆ ಬಂದಿದ್ದಾರೆ. ಆದರೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಾನು ಸತ್ಯ ಮಾಡುವುದಿಲ್ಲ, ನನಗೆ ೨೫ ಕೋಟಿ  ನೀಡಿದ ವ್ಯಕ್ತಿ ಯಾರು ಎಂದು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬಂದರೆ ನಾನು ಈ ಆರೋಪವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೆಚ್. ವಿಶ್ವನಾಥ್ ಹೇಳಿದ್ದು ಇದಕ್ಕೆ ಸಾ.ರಾ.ಮಹೇಶ್ ಹಣ ಕೊಟ್ಟ ವ್ಯಕ್ತಿ ನಾನೇ ಎಂದು ಹೇಳುವುದಿಲ್ಲ ಅದಕ್ಕೆ ಬದಲಾಗಿ  ನಾನಾಗಲಿ ನನ್ನ ಕುಟುಂಬದವರಾಗಲಿ ಹಣ ಅಥವಾ ಇತರ ಆಮಿಷಗಳಿಗೆ ಒಳಗಾಗಿಲ್ಲ ಎಂದು ಸತ್ಯ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ಈಗ ಚಾಮುಂಡಿ ಬೆಟ್ಟದ ದೇವಾಲಯದ ಪ್ರವೇಶ ದ್ವಾರದಲ್ಲಿ ವೇದಿಕೆ ಸಿದ್ದವಾಗಿದ್ದು ಏನು ನಡೆಯುತ್ತದೆ ಎಂಬುದನ್ನು ನೋಡಿ.

Conclusion:
Last Updated : Oct 17, 2019, 10:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.