ಮೈಸೂರು : ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಮೈಸೂರಿನ ವಾಣಿಜ್ಯ ಕೇಂದ್ರ ರಸ್ತೆಗಳು ಬಿಕೋ ಎನ್ನುತ್ತಿವೆ. ಮೈಸೂರಿನ ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ, ಸಯ್ಯಾಜಿ ರಸ್ತೆ, ಸಾಡೇ ರೋಡ್ ಸೇರಿದಂತೆ ಮೈಸೂರಿನ ವಾಣಿಜ್ಯ ಕೇಂದ್ರದ ರಸ್ತೆಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು.
ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಲ್ಲದೇ ಬಸ್ಗಳು ನಿಂತಲ್ಲಿಯೇ ನಿಂತಿದ್ದವು. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದನ್ನು ಮನಗಂಡ ಸಾರಿಗೆ ಅಧಿಕಾರಿಗಳು ಬಸ್ ನಿಲ್ದಾಣಗಳಲ್ಲಿ ಬಸ್ಗಳ ಸಂಖ್ಯೆಯನ್ನು ಕಡಿತಗೊಳಿಸಿದರು.
ದೇವರಾಜ ಮಾರುಕಟ್ಟೆ ಸುತ್ತ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರಕ್ಕಿಳಿದಿದ್ದು, ದಿನಸಿ ಅಂಗಡಿಗಳು ತೆರೆದಿದ್ದವು. ಆದ್ರೆ, ಗ್ರಾಹಕರಿಲ್ಲದೇ ವ್ಯಾಪಾರ, ವಹಿವಾಟು ಇರಲಿಲ್ಲ.
ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡಿ ಅನಗತ್ಯ ತಿರುಗಾಡುವವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಚಾಮುಂಡೇಶ್ವರಿ, ನಂಜುಂಡೇಶ್ವರ ದೇವಾಲಯಗಳನ್ನು ಮುಚ್ಚಿಸಲಾಯಿತು.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂವಿದ್ದರೂ ಕಲಬುರಗಿ ಮಾರ್ಕೆಟ್ ಒಪನ್.. ಹೆಚ್ಚಿನ ಗ್ರಾಹಕರು ಬಾರದಿದ್ದಕ್ಕೆ ವ್ಯಾಪಾರಸ್ಥರು ಕಂಗಾಲು..
ಗ್ರಾಮಾಂತರ ಬಸ್ ನಿಲ್ದಾಣಗಳಿಂದ ಪ್ರತಿ ನಿತ್ಯ ಬೆಂಗಳೂರು, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಹೆಚ್ಚಿನ ಬಸ್ಗಳು ತೆರಳುತ್ತಿದ್ದವು. ನಿತ್ಯ 1,800 ಬಸ್ಸಂಚಾರ ನಡೆಸುತ್ತಿದ್ದವು.
ಆದರೆ, ಇಂದು 180 ಬಸ್ಗಳಷ್ಟೇ ಸಂಚಾರ ಮಾಡುತ್ತಿವೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮಾತ್ರ ಬಸ್ಗಳನ್ನು ಬಿಡಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಿದೆ.