ಮೈಸೂರು: ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಪುರಾತನ ಕಾಲದ ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಫಿಮಿಗೇಷನ್ ಸೆಂಟರ್ಗೆ ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಚಾಲನೆ ನೀಡಿದರು.
ಮೈಸೂರು ವಿವಿ ಅಧೀನದಲ್ಲಿರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಪ್ರಾಚೀನ ತಾಳೆ ಗರಿ ಗ್ರಂಥಗಳು ಸೇರಿದಂತೆ ಎಲ್ಲ ಭಾಷೆಯ ಗ್ರಂಥಗಳಿವೆ. ಅದರಲ್ಲಿ ಅತಿ ಚಿಕ್ಕದಾದ ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಹಲವು ಅಮೂಲ್ಯ ಗ್ರಂಥಗಳಿವೆ. ಈ ತಾಳೆಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಫಿಮಿಗೇಷನ್ ಸೆಂಟರ್ ಅನ್ನು ಪ್ರಾರಂಭ ಮಾಡಲಾಯಿತು.
ಇಲ್ಲಿರುವ ಪುರಾತನ ಗ್ರಂಥಗಳು ಕೆಡದಂತೆ ರಾಸಾಯನಿಕಗಳಿಂದ ತೊಳೆದು ಅವುಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮಹಾರಾಜ ಕಾಲೇಜಿನಲ್ಲಿ ಪ್ರಾಚೀನ ಇತಿಹಾಸ ಓದುತ್ತಿರುವ ವಿದ್ಯಾರ್ಥಿಗಳನ್ನು ಇಂಟರ್ನ್ಶಿಪ್ಗೆ ಬಳಸಲಾಗುತ್ತಿದೆ. 2 ವರ್ಷದೊಳಗೆ ಇದನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದ್ದಾರೆ.