ETV Bharat / city

ಬಿಜೆಪಿ ಎಂದರೆ ತಿಗಣೆ ಇದ್ದಂತೆ, ಜನರ ರಕ್ತ ಹೀರುವುದು ಅವರ ಕೆಲಸ : ಸಿದ್ದರಾಮಯ್ಯ

author img

By

Published : Jul 7, 2021, 1:52 PM IST

Updated : Jul 7, 2021, 2:25 PM IST

ಯಡಿಯೂರಪ್ಪ ಎರಡೇ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ‌ ಮಾಡಿದ್ದಾರೆ. ಈ ಸರ್ಕಾರ ಮುಂದುವರಿದರೆ ಎಷ್ಟು ಸಾಲ ಮಾಡಬಹುದು ಲೆಕ್ಕ ಹಾಕಿ. ಇಂತಹ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದರು. ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು..

siddaramaiah
ಬಿಜೆಪಿ ಎಂದರೆ ತಿಗಣೆ ಇದ್ದಂತೆ, ಜನರ ರಕ್ತ ಹೀರುವುದು ಅವರ ಕೆಲಸ: ಸಿದ್ದರಾಮಯ್ಯ

ಮೈಸೂರು : ಬಿಜೆಪಿ ಎಂದರೆ ತಿಗಣೆ ಇದ್ದಂತೆ. ಜನರ ರಕ್ತ ಹೀರುವುದು ಅವರ ಕೆಲಸ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿ ಎಂದರೆ ತಿಗಣೆ ಇದ್ದಂತೆ, ಜನರ ರಕ್ತ ಹೀರುವುದು ಅವರ ಕೆಲಸ : ಸಿದ್ದರಾಮಯ್ಯ

ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಘಟಕದಿಂದ ಏರ್ಪಡಿಸಿದ್ದ ಸಹಾಯ ಹಸ್ತ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ. ಬಿಜೆಪಿ ಭಂಡ ಹಾಗೂ ಮಾನವೀಯತೆ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು.

ಬಿಪಿಎಲ್ ಕಾರ್ಡ್​ದಾರರಿಗೆ ತಲಾ 10 ಸಾವಿರ ಕೊಡಬೇಕಿತ್ತು. ನಮ್ಮ ಸರ್ಕಾರ ಇದ್ದಿದ್ದರೆ, 10 ಸಾವಿರ ಹಣ, 10 ಕೆಜಿ ಅಕ್ಕಿ ಕೊಡ್ತಿದ್ದೆವು. ಇವರು ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿರಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ಜೆಸಿಬಿಯಲ್ಲಿ ಅಗೆಯುತ್ತಾ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಹೇಳುವುದೆಲ್ಲಾ ಸುಳ್ಳು. ಪ್ರಧಾನಿ ಅಚ್ಛೇ ದಿನ್ ಆಯೇಗಾ ಅಂದರೆ ಕೆಟ್ಟ‌ ದಿನ ಬರುತ್ತಿದೆ ಅಂತಾ ಅರ್ಥ. ಅವರು 2014ರಲ್ಲಿ ಹೇಳಿದ ಯಾವುದಾದರೂ ಒಂದು ಮಾತನ್ನು ಜಾರಿಗೊಳಿಸಿದ್ದಾರಾ? ಎಂದು ಪ್ರಶ್ನಿಸಿದರು. ಎಲ್ಲರೂ ನಾಚುವಂತೆ ಲಂಚ ಪ್ರಕ್ರಿಯೆ ನಡೆಯುತ್ತಿದೆ. ಅಧಿಕಾರ ವರ್ಗಾವಣೆಯಲ್ಲಿ ಲಂಚ, ಪೇಮೆಂಟ್​ ಮಾಡುವಲ್ಲಿ ಲಂಚ, ಪ್ರಾಜೆಕ್ಟ್​ ಕ್ಲಿಯರ್ ಮಾಡಬೇಕಂದ್ರೆ ಲಂಚ ಹೀಗೆ ಎಲ್ಲದಕ್ಕೂ ಲಂಚ ಪಡೆಯಲಾಗುತ್ತಿದೆ.

ಅವರ ಪಾರ್ಟಿಯವರೇ ಹಣ ಕೊಡುತ್ತಿದ್ದಾರೆ. ಶೇ.10ರಷ್ಟು ಲಂಚವಿಲ್ಲದೇ ಯಾವ ಫೈಲ್ ಕೂಡ ಈ ಸರ್ಕಾರದಲ್ಲಿ ಮುಂದಕ್ಕೆ ಹೋಗುತ್ತಿಲ್ಲ. ಯಡಿಯೂರಪ್ಪನವರದು ಸ್ವಾತಂತ್ರ್ಯ ನಂತರದ ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಸರ್ಕಾರ. ಈ ರಾಜ್ಯವನ್ನು ಇವರು ಹಾಳು ಮಾಡುತ್ತಾರೆ ಎಂದು ಕಿಡಿಕಾರಿದರು.

ಯಡಿಯೂರಪ್ಪ ಎರಡೇ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ‌ ಮಾಡಿದ್ದಾರೆ. ಈ ಸರ್ಕಾರ ಮುಂದುವರಿದರೆ ಎಷ್ಟು ಸಾಲ ಮಾಡಬಹುದು ಲೆಕ್ಕ ಹಾಕಿ. ಇಂತಹ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದರು. ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತರ ನಡೆಯಿಂದ ಕೆಳಗೆ ಕುಳಿತ ಸಿದ್ದರಾಮಯ್ಯ

ಸಹಾಯ ಹಸ್ತ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾಮಾಜಿಕ ಅಂತರ ಹಾಗೂ ಕೆಲವರು ಹೇಳಿದ ಮಾತು ಕೇಳದ ಹಿನ್ನೆಲೆ ಬೇಸರಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಕರ್ತರ ಜೊತೆ ಕೆಳಗೆ ಕುಳಿತು ಬೇಸರ ಹೊರ ಹಾಕಿದರು.

Last Updated : Jul 7, 2021, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.