ಮೈಸೂರು : ಜಿಲ್ಲೆಯಲ್ಲಿ ಇಂದು ಮತ್ತೆ ಐದು ಹೊಸ ಕೊರೊನೊ ಪ್ರಕರಣ ಬೆಳಕಿಗೆ ಬಂದಿವೆ. ಇದರಲ್ಲಿ 8 ವರ್ಷದ ಬಾಲಕ ಸಹ ಸೇರಿರೋದು ಜಿಲ್ಲೆಯ ಜನ ಆತಂಕಗೊಳ್ಳುವಂತೆ ಮಾಡಿದೆ.
ಒಟ್ಟು ಮೈಸೂರಿನಲ್ಲಿ 42 ಜನರಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ. ಅದರಲ್ಲಿ ಒಬ್ಬ ವ್ಯಕ್ತಿ ಗುಣಮುಖನಾಗಿ ವಾಪಸ್ ಮನೆಗೆ ತೆರಳಿದ್ದಾನೆ. ಉಳಿದ 41 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.