ಮೈಸೂರು: ನಂಜನಗೂಡು ತಾಲೂಕಿನ ದೊಡ್ಡಕವಲಂದೇ ಹೋಬಳಿಯ ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಜಿಂಕೆಗಳು ಹಾಗೂ ಕೃಷ್ಣಮೃಗಗಳು ದಿಕ್ಕಾಪಾಲಾಗಿ ಓಡಾಡಿ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತಿವೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಜೊತೆಗೆ ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾಡು ಪ್ರಾಣಿಗಳು ಪರದಾಟ ನಡೆಸಿದವು.
ದೊಡ್ಡಕವಲಂದೇ ಗ್ರಾಮದ ಹೊರವಲಯದ ಕಟ್ಟೆ ಮಾದೇಶ್ವರ ದೇವಸ್ಥಾನದ ಬಳಿಯ ಹಳ್ಳವೊಂದರಲ್ಲಿ ಕಾಣಿಸಿಕೊಂಡ ಬೆಂಕಿ, ಅರಣ್ಯ ಪ್ರದೇಶಕ್ಕೆ ತಗುಲಿದೆ. ಕಳೆದ 2 ತಿಂಗಳಿಂದ 5 ಬಾರಿ ಈ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ : ಗಿಡ, ಮರ ಭಸ್ಮ