ETV Bharat / city

ಆರ್​ಟಿಐ ಕಾರ್ಯಕರ್ತನಿಂದ ಬ್ಲಾಕ್​​ಮೇಲ್ ಆರೋಪ: ಮೈಸೂರಿನಲ್ಲಿ ಪ್ರಕರಣ ದಾಖಲು - ಮೈಸೂರಲ್ಲಿ ಆರ್​ಟಿಐ ಕಾರ್ಯಕರ್ತನ ವಿರುದ್ಧ ಎಫ್​​ಆರ್​​ಐ ದಾಖಲು

ಆರ್​​ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು, ಬಾರ್ ಕಟ್ಟಡ ಅಕ್ರಮವಾಗಿದೆ ಎಂದು ಹೆದರಿಸಿ ಬ್ಲಾಕ್​​ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಮೈಸೂರಲ್ಲಿ ಕೇಳಿ ಬಂದಿದೆ. ಈ ಸಂಬಂಧ ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

FIR Registered against RTI activist in Mysore
ಆರ್​ಟಿಐ ಕಾರ್ಯಕರ್ತನಿಂದ ಬ್ಲಾಕ್​​ಮೇಲ್
author img

By

Published : Jul 1, 2021, 5:59 PM IST

ಮೈಸೂರು: ಆರ್​​ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು ಬಾರ್ ಕಟ್ಟಡ ಅಕ್ರಮವಾಗಿದೆ ಎಂದು ಹೆದರಿಸಿ ಬ್ಲಾಕ್​​ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಮೈಸೂರಲ್ಲಿ ಎಫ್​ಐಆರ್ ದಾಖಲಾಗಿದೆ.

ಮಾಧ್ಯಮಗೋಷ್ಟಿಯಲ್ಲಿ ಪ್ರಕರಣ ವಿವರಿಸುತ್ತಿರುವ ದೂರುದಾರ ರಾಜೇಶ್

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಕಟ್ಟಡ ಮಾಲೀಕ ಪುಟ್ಟನರಸಯ್ಯ ಪುತ್ರ ರಾಜೇಶ್ ಮಾತನಾಡಿದರು. ಸಾಮಾಜಿಕ ಹಾಗೂ ಆರ್​​ಟಿಐ ಕಾರ್ಯಕರ್ತ ಗಂಗರಾಜು ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕ ಪುಟ್ಟನರಸಯ್ಯ (ರಾಜೇಶ್ ತಂದೆ)ರಿಂದ ದೂರು ದಾಖಲಾಗಿದೆ ಎಂದರು.

ಇದೇ ವೇಳೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿ, ಗಂಗರಾಜು 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.

ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರ್​ಟಿಐ ಕಾರ್ಯಕರ್ತ ಮಾತನಾಡಿರುವ ವಿಡಿಯೋ

ಪ್ರಕರಣದ ವಿವರ:

ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಬಾರ್ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಅಲ್ಲದೆ ಪುಟ್ಟನರಸಯ್ಯ ಅವರ ಹಿರಿಯ ಪುತ್ರ ಮಹೇಶ್ ಎಂಬುವವರಿಗೆ ಕರೆ ಮಾಡಿ ದೂರನ್ನು ವಾಪಸ್​ ಪಡೆಯಬೇಕೆಂದರೆ 5 ಲಕ್ಷ ನೀಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದಕ್ಕೆ ಹೆದರಿದ ಪುಟ್ಟನರಸಯ್ಯ ಈಗಾಗಲೇ 25 ಸಾವಿರ ರೂ. ಹಣ ನೀಡಿದ್ದು, ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಗರ ಪಾಲಿಕೆ ಹಾಗೂ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.