ಮೈಸೂರು: ಹಾವುಗಳು ಮನೆಗೆ ಬಂದಾಗ ಗಾಬರಿಯಾಗುವುದು ಸಹಜ. ಆದರೆ ಇಲ್ಲೊಂದು ಕುಟುಂಬ ಮನೆಗೆ ಬಂದ ನಾಗಪ್ಪನಿಗೆ ಹಾಲಿಟ್ಟು ಆತಿಥ್ಯ ಮಾಡಿದ್ದಾರೆ.
ಮರಟಿಕ್ಯಾತನಹಳ್ಳಿಯ ರಮೇಶ್ ಎಂಬುವವರ ಮನೆಗೆ ಬಂದ ನಾಗರ ಹಾವಿಗೆ ಮನೆಯವರು ಬಟ್ಟಲಲ್ಲಿ ಹಾಲು ಇಟ್ಟಿದ್ದಾರೆ. ನಂತರ ಉರಗ ತಜ್ಞರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಉರಗ ರಕ್ಷಕ ಸೂರ್ಯ ಕೀರ್ತಿ ನಾಗರಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟರು.
ಅಲ್ಲದೇ ಮನೆಯವರಿಗೆ ಹಾಲು ನೀಡಬೇಡಿ, ಹಾವುಗಳು ಹಾಲು ಕುಡಿಯುವುದಿಲ್ಲ. ಹಾವುಗಳು ಶೀತ ರಕ್ತಪ್ರಾಣಿಗಳು, ಸರೀಸೃಪಗಳಾಗಿದ್ದು, ಹಾಲನ್ನು ಕುಡಿಯುವುದಿಲ್ಲ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕರಾಟೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅಂಕೋಲಾದ ಆರರ ಪೋರ!