ETV Bharat / city

ಆಪರೇಷನ್​​​ 'ಅಭಿಮನ್ಯು' ಆನೆ ಕುರಿತ ರೋಚಕ ಮಾಹಿತಿ ಇಲ್ಲಿದೆ ನೋಡಿ - ಆಪರೇಷನ್ ಅಭಿಮನ್ಯು ಆನೆ ಕುರಿತ ರೋಚಕ ಮಾಹಿತಿ

ಆಪರೇಷನ್ ಆನೆ ಎಂದು ಅರಣ್ಯ ಇಲಾಖೆಯಲ್ಲಿ ಪ್ರಸಿದ್ಧವಾಗಿರುವ ಅಭಿಮನ್ಯು ಸುಮಾರು 200 ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಕೀರ್ತಿ ಪಡೆದಿದ್ದಾನೆ. ಈ ಅಭಿಮನ್ಯು ಕುರಿತು ಪಶು ವೈದ್ಯ ನಾಗರಾಜ್ ವಿವರಿಸಿದ ರೋಚಕ ಅಂಶಗಳು ಇಲ್ಲಿವೆ.

ಅಭಿಮನ್ಯು ಆನೆ ಕುರಿತ ರೋಚಕ ಮಾಹಿತಿ
author img

By

Published : Sep 26, 2019, 2:49 AM IST

ಮೈಸೂರು: ಆಪರೇಷನ್ ಆನೆ ಎಂದು ಅರಣ್ಯ ಇಲಾಖೆಯಲ್ಲಿ ಪ್ರಸಿದ್ಧವಾಗಿರುವ ಅಭಿಮನ್ಯು ಸುಮಾರು 200 ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಕೀರ್ತಿ ಪಡೆದಿದ್ದಾನೆ. ಈ ಅಭಿಮನ್ಯು ಕುರಿತು ಪಶು ವೈದ್ಯ ನಾಗರಾಜ್ ವಿವರಿಸಿದ ರೋಚಕ ಅಂಶಗಳು ಇಲ್ಲಿವೆ.

ಅಭಿಮನ್ಯು ಆನೆ ಕುರಿತ ರೋಚಕ ಮಾಹಿತಿ

ದಸರಾ ಗಜಪಡೆಯ ಮೊದಲ ತಂಡದಲ್ಲಿ ಅರಮನೆಗೆ ಆಗಮಿಸುವ 53 ವರ್ಷದ ಅಭಿಮನ್ಯು ಅನೆ, ಅರ್ಜುನನ ನಂತರ ಜಂಬೂ ಸವಾರಿಯನ್ನು ಹೊರುವ ಆನೆ ಎಂದು ಬಿಂಬಿತವಾಗಿದೆ. ಕಳೆದ 25 ವರ್ಷಗಳಿಂದ ಕರ್ನಾಟಕ ವಾದ್ಯಗೋಷ್ಠಿಯನ್ನು ಎಳೆಯುವ ಗಾಡಿಯಾನೆ ಎಂದೇ ಪ್ರಸಿದ್ಧಿ. ಅಷ್ಟೇ ಅಲ್ಲದೆ ಅಭಿಮನ್ಯು ಆನೆ ಅರಣ್ಯ ಇಲಾಖೆಗೆ ವರದಾನ ಎಂದೇ ಹೇಳಬಹುದು. ಕರ್ನಾಟಕ ಅಲ್ಲದೇ ಹೊರ ರಾಜ್ಯಗಳಾದ ಆಂಧ್ರ ಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ಸುಮಾರು 200 ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕೀರ್ತಿ ಹೊಂದಿದ್ದಾನೆ. ಅಲ್ಲದೆ ದೇಶದಲ್ಲಿ ಈ ರೀತಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಏಕೈಕ ಆನೆ ಇದು ಎಂಬುದು ಕರ್ನಾಟಕದ ಹೆಮ್ಮೆ.

ಅಭಿಮನ್ಯುವಿನ ಕಾರ್ಯಾಚರಣೆ ಶೈಲಿ ಹೇಗೆ?:

ಆನೆ ಹಿಡಿಯುವುದು ತುಂಬಾ ಕಷ್ಟ ಹಾಗೂ ಸೂಕ್ಷ್ಮ ಕೆಲಸ. ಆದರೆ ಅಭಿಮನ್ಯು ಆನೆ ಕಾಡಾನೆ ಹಿಡಿಯಲು ಕಾಡಿನೊಳಗೆ ಹೋದರೆ ಕಾಡಾನೆಗಳು ಅಭಿಮನ್ಯುವಿನ ಮುಂದೆ ಅಥವಾ ಹಿಂದೆ ಇರುತ್ತವೆ. ಆದರೆ ಕಾಡಾನೆ ಕಂಡರೆ ಅಭಿಮನ್ಯು ನಿಲ್ಲುವ ರೀತಿ, ಕೊಡುವ ಸನ್ಹೆ ಹಾಗೂ ಸೂಕ್ಷ್ಮ ವಿಚಾರ ತಿಳಿದಿದೆ. ಅದಕ್ಕೆ ಅಭಿಮನ್ಯು ಆನೆಯನ್ನು ಕಾಡಾನೆ ಹಿಡಿಯುವ ಕಾರ್ಯಾಚರಣೆಯ ಆಪರೇಷನ್ ಹೀರೋ ಎಂದೇ ಕರೆಯಲಾಗುತ್ತದೆ.

ಇನ್ನು ಕಾಡಾನೆಯನ್ನು ಸೆರೆ ಹಿಡಿದ ನಂತರ ಅದನ್ನು ಲಾರಿಗೆ ಹತ್ತಿಸುವುದು ತುಂಬಾ ಕಷ್ಟದ ಕೆಲಸ. ಆದರೂ ಇಂತಹ ಕೆಲಸವನ್ನು ತುಂಬಾ ಸಲೀಸಾಗಿ ಮಾಡುತ್ತಾನೆ. ಎಂತಹ ಭಯಂಕರ ಕಾಡಾನೆ ಇದ್ದರೂ ಅದನ್ನು ಲಾರಿಯಲ್ಲಿ ಲೋಡ್ ಮಾಡಿ, ಟ್ರಾಲ್ ದಿಮ್ಮಿಗಳನ್ನು ಜೋಡಿಸಿ ಕಾಡಾನೆಯನ್ನು ಅದರ ಒಳಗೆ ಸೇರಿಸುತ್ತಾನೆ. ಇನ್ನು ಕಾಡಾನೆ ಕಾರ್ಯಾಚರಣೆಯಲ್ಲದೆ ಹುಲಿ ಕಾರ್ಯಚರಣೆಯಲ್ಲೂ ಭಾಗವಹಿಸುವ ಆನೆ ಸಹ ಹೌದು. ಹುಲಿಗೆ ಹೆದರದೆ ಹುಲಿಯನ್ನೇ ಅಟ್ಟಿಸಿಕೊಂಡು ಹೋಗುತ್ತಾನೆ ಎಂದು ಹೆಮ್ಮೆಯಿಂದ ಪಶುವೈದ್ಯ ಡಾ. ನಾಗರಾಜ್ ಹೇಳುತ್ತಾರೆ.

Intro:ಮೈಸೂರು: ಆಪರೇಷನ್ ಆನೆ ಎಂದು ಅರಣ್ಯ ಇಲಾಖೆಯಲ್ಲಿ ಪ್ರಸಿದ್ದವಾಗಿರುವ ಅಭಿಮನ್ಯು ಆನೆ, ಸುಮಾರು ೨೦೦ ಕಾಡಾನೆಗಳ ಸೆರೆ ಕಾರ್ಯಚರಣೆಯಲ್ಲಿ, ಹೊರ ರಾಜ್ಯಗಳಲ್ಲೂ ಭಾಗವಹಿಸಿರುವ ಕೀರ್ತಿ ಈ ಅಭಿಮನ್ಯು ಆನೆಗಿದೆ ಇದನ್ನು ಆಪರೇಷನ್ ಆನೆ ಎಂದೆ ಕರೆಯುತ್ತಾರೆ. ಈ ಆನೆ ಬಗ್ಗೆ ಪಶುವೈದ್ಯ ನಾಗರಾಜ್ ವಿವಿರಿಸಿದ ರೋಚಕ ಅಂಶಗಳು ಇಲ್ಲಿದೆ.

Body:ದಸರಾ ಗಜಪಡೆಯ ಮೊದಲ ತಂಡದಲ್ಲಿ ಅರಮನೆಗೆ ಆಗಮಿಸುವ ೫೩ ವರ್ಷದ ಈ ಅಭಿಮನ್ಯು ಅನೆ ಅರ್ಜುನ ನಂತರ ಜಂಬೂಸವಾರಿಯನ್ನು ಹೊರುವ ಆನೆ ಎಂದು ಬಿಂಬಿತವಾಗಿರುವ ಈ ಆನೆ ಕಳೆದ ೨೫ ವರ್ಷಗಳಿಂದ ಕರ್ನಾಟಕ ವಾದ್ಯಗೋಷ್ಠಿಯನ್ನು ಎಳೆಯುವ ಗಾಡಿಯಾನೆ ಎಂದೆ ಪ್ರಸಿದ್ಧಿ.
ಅಭಿಮನ್ಯು ಆನೆ ಅರಣ್ಯ ಇಲಾಖೆಗೆ ವರದಾನ ಎಂದೇ ಕರೆಯಬಹುದು. ‌ಈ ಆನೆ ಕರ್ನಾಟಕ ಅಲ್ಲದೇ ಹೊರ ರಾಜ್ಯಗಳಾದ ಆಂದ್ರಪ್ರದೇಶ, ಉತ್ತರಪ್ರದೇಶ, ಮಧ್ಯ ಪ್ರದೇಶಗಳಲ್ಲಿ ಸುಮಾರು ೨೦೦ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ಭಾಗವಹಿಸಿದ ಕೀರ್ತಿ ಅಭಿಮನ್ಯು ಆನೆಗೆ ಇದೆ.‌
ಅಲ್ಲದೆ ದೇಶದಲ್ಲಿ ಈ ರೀತಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಏಕೈಕ ಆನೆ ಇದು ಎಂಬುದು ಕರ್ನಾಟಕದ ಅರಣ್ಯ ಇಲಾಖೆಗೆ ಹೆಮ್ಮೆ.

ಅಭಿಮನ್ಯುವಿನ ಕಾರ್ಯಾಚರಣೆ ಶೈಲಿ ಹೇಗೆ: ಆನೆ ಹಿಡಿಯುವುದು ತುಂಬಾ ಕಷ್ಟ ಹಾಗೂ ಸೂಕ್ಷ್ಮ ಕೆಲಸ, ಆದರೆ
ಅಭಿಮನ್ಯು ಆನೆ ಕಾಡಾನೆ ಹಿಡಿಯಲು ಕಾಡಿನೊಳಗೆ ಹೋದರೆ ಕಾಡಾನೆಗಳು ಅಭಿಮನ್ಯುವಿನ ಮುಂದೆ ಅಥವಾ ಹಿಂದೆ ಇರುತ್ತವೆ. ಆದರೆ ಕಾಡಾನೆ ಕಂಡರೆ ಅಭಿಮನ್ಯು ನಿಲ್ಲುವ ರೀತಿ, ಸನ್ಹೆ ಕೊಡುವ ರೀತಿ ಹಾಗೂ ಆ ಕಾಡಾನೆ ಹತ್ತಿರ ಸೈಲೆಂಟ್ ಆಗಿ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಅಷ್ಟೊಂದು ಸೂಕ್ಷ್ಮ ಆನೆ. ಅದಕ್ಕೆ ಅಭಿಮನ್ಯು ಆನೆಯನ್ನು ಕಾರ್ಯಾಚರಣೆಯ ಆಪರೇಷನ್ ಹೀರೋ ಎಂದು ಹೆಸರು.
ಇನ್ನೂ ಕಾಡಾನೆಯನ್ನು ಸೆರೆಹಿಡಿದ ನಂತರ ಅದನ್ನು ಲಾರಿಗೆ ಹತ್ತಿಸುವುದು ತುಂಬಾ ತ್ರಾಸದ ಕೆಲಸ. ಆದರೂ ಇಂತಹ ತ್ರಾಸದ ಕೆಲಸವನ್ನು ತುಂಬಾ ಸಲೀಸಾಗಿ ಮಾಡುತ್ತಾನೆ. ಎಂತಹ ಭಯಂಕರ ಕಾಡಾನೆಗಳಿದ್ದರು ಅದನ್ನು ಲಾರಿಯಲ್ಲಿ ಲೋಡ್ ಮಾಡಿ ಅದನ್ನು ಟ್ರಾಲ್ ನಲ್ಲಿ ಒಳಗೆ ಬಿಡುವವರೆಗೂ ಹಾಗೂ ಟ್ರಾಲ್ ದಿಮ್ಮಿಗಳನ್ನು ಜೋಡಿಸಿ ಕಾಡಾನೆಯನ್ನು ಅದರ ಒಳಗೆ ಸೇರಿಸುತ್ತಾನೆ. ಇಷ್ಟೆಲ್ಲಾ ಮಾಡುವ ಅಭಿಮನ್ಯು ಅನೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ.
ಇನ್ನೂ ಕಾಡಾನೆ ಕಾರ್ಯಾಚರಣೆಯಲ್ಲದೆ ಹುಲಿ ಕಾರ್ಯಚರಣೆಯಲ್ಲೂ ಭಾಗವಹಿಸುವ ಈ ಆನೆ ಹುಲಿಗು ಹೆದರದೆ ಹುಲಿಯನ್ನೇ ಅಟ್ಟಿಸಿಕೊಂಡು ಹೋಗುತ್ತಾನೆ. ಅಷ್ಟೊಂದು ಸೂಕ್ಷ್ಮಮಯಿ ಆನೆ ಈ ಅಭಿಮನ್ಯು ಇದನ್ನು ಆಪರೇಷನ್ ಹೀರೋ ಹಾಗೂ ಅರಣ್ಯ ಇಲಾಖೆಯ ಹೀರೋ ಎಂದು ಕರೆಯುತ್ತಾರೆ. ಹಾಗೂ ಇಡಿ ದೇಶದಲ್ಲೇ ಅತಿ ಹೆಚ್ಚು ಕಾಡಾನೆಗಳನ್ನು ಸೆರೆ ಹಿಡಿದಿರುವ ಕೀರ್ತಿ ಅಭಿಮನ್ಯು ಆನೆ ಎಂದು ಹೆಮ್ಮೆಯಿಂದ ಹೇಳಬಹುದು ಎನ್ನುತ್ತಾರೆ ಪಶುವೈದ್ಯರಾದ ಡಾ.ನಾಗರಾಜ್.
ಜೊತೆಗೆ ಈ ಆನೆಯ ಮಾವುತ ವಸಂತ್ ಹೇಳುವ ಎಲ್ಲಾ ಸನ್ನೆಗಳನ್ನು ಪಾಲಿಸುವ ಆನೆ ಸಹ ಇದಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.