ಮೈಸೂರು: ಜಮೀನಿಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ತಿಂದು, ಅಲ್ಲದೇ ಫಸಲನ್ನು ನಾಶ ಮಾಡಿರುವ ಘಟನೆ ಸರಗೂರು ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಪರಶಿವಮೂರ್ತಿ ಎಂಬುವವರ ಜಮೀನಿಗೆ ಲಗ್ಗೆ ಇಟ್ಟ ಆನೆಗಳು, ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೇಲು, ಅವರೆಕಾಳು, ತರಕಾರಿ ಗಿಡಗಳನ್ನು ತುಳಿದು ತಿಂದು ಹಾಕಿದೆ. ಅಲ್ಲದೇ, ಜಮೀನಿನಲ್ಲಿ ಹಾಕಲಾಗಿದ್ದ ತಂತಿಬೇಲಿಯನ್ನು ಮುರಿದು ಹಾಕಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಕಾಡಾನೆಗಳು ಮತ್ತಷ್ಟು ಹೊಡೆತ ಕೊಡುತ್ತಿವೆ.
ಜಮೀನಿಗೆ ನುಗ್ಗಿದ ಆನೆಗಳನ್ನು ಓಡಿಸಲು ರೈತರು ಸಾಕಷ್ಟು ಪರದಾಡಿದ್ದಾರೆ. ಆನೆಗಳ ಹಾವಳಿಯ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರೂ ಸಹ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬೆಳಗ್ಗೆ ಶಾಲೆಗಳಿಗೆ ಹೋಗಲು ಮಕ್ಕಳು ಕೂಡ ಭಯಪಡುವಂತಾಗಿದೆ. ಆನೆಗಳು ಗ್ರಾಮಗಳ ಸಮೀಪವೇ ಬರುತ್ತಿರುವುದರಿಂದ ಗ್ರಾಮಸ್ಥರು ಭಯದ ವಾತಾವರನದಲ್ಲೇ ಬದುಕುವಂತಾಗಿದೆ.
ಇದನ್ನೂ ಓದಿ: ವಕ್ಫ್, ದೇವಸ್ಥಾನಗಳ ಆಸ್ತಿ ದುರ್ಬಳಕೆ ತಡೆಯಲು ಸರ್ವೇ : ಸಚಿವೆ ಜೊಲ್ಲೆ