ಮೈಸೂರು: ರೈಲು ಕಂಬಿ ತಡೆಗೋಡೆ ದಾಟುವಲ್ಲಿ ವಿಫಲವಾದ ಒಂಟಿ ಸಲಗವೊಂದು ತಡೆಗೋಡೆಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದೆ.
ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ನಾಗಪುರ ಹಾಡಿ ಬಳಿ ಕಾಡಾನೆಗಳ ಹಾವಳಿ ತಡೆಯುವ ಉದ್ದೇಶದಿಂದ ರೈಲು ಕಂಬಿ ತಡೆಗೋಡೆಗಳನ್ನು ಹಾಕಲಾಗಿದೆ. ಕಾಡಾನೆಗಳು ಆಗಾಗ ಬಂದು ರೈಲು ಕಂಬಿಗಳನ್ನು ದಾಟಲಾಗದೇ ಪುನಃ ಕಾಡಿಗೆ ಮರಳುತ್ತಿರುತ್ತವೆ.
ಓದಿ: ನಿಡಗುಂದಿ ಆಂಜನೇಯನ ಹುಂಡಿ ಎಣಿಕೆ: ಹಣದ ಜೊತೆ ಸಿಕ್ಕವು ಭಕ್ತರ ಸ್ವಾರಸ್ಯಕರ ಪತ್ರಗಳು
ಇಂದು ನಾಗಪುರ ಹಾಡಿ ಬಳಿಬಂದ ಕಾಡಾನೆಯೊಂದು, ಪಕ್ಕದ ಜಮೀನಿಗೆ ನುಗ್ಗಲು ರೈಲು ಕಂಬಿ ತಡೆಗೋಡೆ ದಾಟಲಾಗದೇ, ದಂತದಿಂದ ಗುದ್ದಿ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ.