ETV Bharat / city

ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಒಡೆಯಲು ರಾಜಮನೆತನದ ವಿರೋಧ - ಮೈಸೂರಿನ ಪಾರಂಪರಿಕ ಕಟ್ಟಡಗಳು

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪಾರಂಪರಿಕ ಕಟ್ಟಡ ಕೆಡವಲು ನಿರ್ಧಾರ ಮಾಡಿದ್ದನ್ನು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಮಹರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ...

Heritage buildings of Mysore
ಮೈಸೂರಿನ ಪಾರಂಪರಿಕ ಕಟ್ಟಡಗಳು
author img

By

Published : Apr 24, 2022, 7:52 AM IST

ಮೈಸೂರು : ಸಾಂಸ್ಕೃತಿಕ ನಗರಿ, ಮಲ್ಲಿಗೆನಗರಿ ಜತೆಗೆ ಮೈಸೂರು ಪಾರಂಪರಿಕ ನಗರಿಯೂ ಹೌದು. ಇಲ್ಲಿನ ದೇವರಾಜ ಮಾರುಕಟ್ಟೆ‌ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಕೆಡವಿ ಹೊಸದಾಗಿ ಕಟ್ಟಲು ಸಿದ್ದತೆ ನಡೆದಿದೆ. ಈ ಮಧ್ಯೆ ಪಾರಂಪರಿಕ ಕಟ್ಟಡವನ್ನು ಕೆಡವದೇ ಪುನಶ್ಚೇತನಗೊಳಿಸಬಹುದು ಎಂದು ರಾಜಮನೆತನದವರು ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರಿನ ಪಾರಂಪರಿಕ ಕಟ್ಟಡಗಳು

ಪಾರಂಪರಿಕ ನಗರಿ ಮೈಸೂರಿನಲ್ಲಿ ಮೊದಲ ಹಂತದ ಸರ್ವೇಯಲ್ಲಿ 235 ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿದೆ. 2ನೇ ಹಂತದ ಸರ್ವೇಯಲ್ಲಿ 500 ಕಟ್ಟಡಗಳು ಹಾಗೂ 3ನೇ ಹಂತದ ಸರ್ವೇಯಲ್ಲಿ ಮೈಸೂರು ನಗರದಲ್ಲಿ 720 ಪಾರಂಪರಿಕ ಕಟ್ಟಡ ಇದೆ ಎಂದು ಗುರುತಿಸಲಾಗಿದೆ.

ಅದರಲ್ಲಿ ಪ್ರಮುಖವಾಗಿ 130 ವರ್ಷಗಳ ಹಿಂದಿನ ಮೈಸೂರು ಸಂಸ್ಥಾನದ ರಾಜರಾದ ಹತ್ತನೇ ಚಾಮರಾಜ ಒಡೆಯರ್ ಅವರು ನಿರ್ಮಾಣ ಮಾಡಿರುವ ದೇವರಾಜ್ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್​ಗಳೂ ಸೇರಿವೆ.

2012ರಲ್ಲಿ ಶಿಥಿಲಾವಸ್ಥೆಯಿಂದ ಲ್ಯಾನ್ಸ್ ಡೌನ್ ಕಟ್ಟಡ ಕುಸಿದು ಬಿದ್ದು ಸಾವು-ನೋವು ಉಂಟಾಗಿತ್ತು. ತಕ್ಷಣ ಅಲ್ಲಿಂದ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿ, ಲ್ಯಾನ್ಸ್ ಡೌನ್ ಕಟ್ಟಡದ ಸುತ್ತ ಬ್ಯಾರಿಕೇಡ್‌ ಹಾಕಲಾಗಿದ್ದು, ಈ ಮಧ್ಯೆ ಈ ಕಟ್ಟಡ ಒಡೆದು, ಪುನಃ ಹೊಸ ಕಟ್ಟಡ ಕಟ್ಟಲು ಅಂದಾಜು ವೆಚ್ಚ ತಯಾರಿಸಲಾಗಿತ್ತು.

ಇದರಂತೆ ದೇವರಾಜ ಮಾರುಕಟ್ಟೆ ಹಿಂಭಾಗದ ಕೆಲವು ಭಾಗ 2016ರಲ್ಲಿ ಕುಸಿದು ಬಿದ್ದಿತ್ತು. ಯಾವುದೇ ಪ್ರಾಣ ಹಾನಿ ಆಗಿರಲಿಲ್ಲ. ‌ದೇವರಾಜ ಮಾರುಕಟ್ಟೆಯಲ್ಲಿ 200ಕ್ಕೂ ಹೆಚ್ಚು ಅಂಗಡಿ, ಮಳಿಗೆಗಳಿವೆ. ಇವುಗಳ ಬಾಡಿಗೆ ಮಹಾನಗರ ಪಾಲಿಕೆಗೆ ಸಂದಾಯವಾಗುತ್ತದೆ. ಈ ಮಧ್ಯೆ ದೇವರಾಜ ಮಾರುಕಟ್ಟೆಯ ರಿಪೇರಿಗಾಗಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೋಟಿ ರೂಪಾಯಿಗಳನ್ನು ನೀಡಿ ರಿಪೇರಿ ಮಾಡಲಾಗಿತ್ತು.

ಆದರೂ ಇಂದಿನ ಸರ್ಕಾರ 100 ಕೋಟಿ ರೂಪಾಯಿ ವೆಚ್ಚದಲ್ಲಿ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳನ್ನು ನೆಲಸಮ ಮಾಡಿ, ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಪುನರ್ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ.

ಪಾರಂಪರಿಕ ಕಟ್ಟಡ ಒಡೆಯಲು ರಾಜಮನೆತನದ ವಿರೋಧ : ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪಾರಂಪರಿಕ ಕಟ್ಟಡ ಕೆಡವಲು ನಿರ್ಧಾರ ಮಾಡಿದ್ದನ್ನು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಮಹರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ಕಟ್ಟಡ ಒಡೆದರೆ ಪಾರಂಪರಿಕತೆ ಹಾಳಾಗುತ್ತದೆ. ಅದಕ್ಕೆ ಬದಲಾಗಿ ಪುನಶ್ಚೇತನಗೊಳಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಸಹಕಾರ ನೀಡಿದರೆ ನಾವೇ ಪಾರಂಪರಿಕ ಕಟ್ಟಡಗಳನ್ನು ಪುನಶ್ಚೇತನಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಜನರ ಸುರಕ್ಷತೆ ದೃಷ್ಟಿಯಿಂದ ಶಿಥಿಲಾವಸ್ಥೆಯಲ್ಲಿರುವ ಈ ಎರಡು ಪಾರಂಪರಿಕ ಕಟ್ಟಡಗಳನ್ನ ಪುನರ್ನಿರ್ಮಾಣ ಮಾಡುವ ಅಗತ್ಯತೆ ಇದೆ ಎಂದು ಸರ್ಕಾರ ಹೇಳುತ್ತಿದೆ. ದೇವರಾಜ ಮಾರುಕಟ್ಟೆಯಿಂದ ಮಹಾನಗರ ಪಾಲಿಕೆಗೆ ಹೆಚ್ಚಿನ ಆದಾಯ ಬರುವ ಹಾಗೆ ಮಾಡಲು ಪಾರಂಪರಿಕ ಶೈಲಿಯಲ್ಲಿ ಹೊಸದಾಗಿ ಕಟ್ಟಡ ಕಟ್ಟುವುದು ಅಗತ್ಯ ಎಂಬುದು ಜನಪ್ರತಿನಿಧಿಗಳ ವಾದವಾಗಿದೆ.

ದೇವರಾಜ ಮಾರುಕಟ್ಟೆ ವಿಶೇಷಗಳೇನು? : 130 ವರ್ಷ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಏಷ್ಯಾದಲ್ಲೇ ವಿಶಿಷ್ಟ ರೀತಿಯ ಮಾರುಕಟ್ಟೆ ಇದು ಎಂಬ ಖ್ಯಾತಿಯನ್ನು ಹೊಂದಿದೆ. ಹತ್ತನೇ ಚಾಮರಾಜ ಒಡೆಯರ್ 130 ವರ್ಷಗಳ ಹಿಂದೆ ಮದ್ರಾಸ್ ಆರ್ಸಿಸಿ ಹಾಕಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿದ್ದರು.

ಮಾರುಕಟ್ಟೆಯ ಸುತ್ತ ನಾಲ್ಕು ಗೋಡೆಗಳಿವೆ. ಈ ಗೋಡೆಯನ್ನು ಸಿಮೆಂಟ್ ಇಲ್ಲದೇ ಕಡಿಮೆ ಕಬ್ಬಿಣ ಬಳಸಿ ಸುಟ್ಟ ಇಟ್ಟಿಗೆ, ಸುಣ್ಣದ ಗಾರೆ, ಕಡು ಗ್ರಾನೈಟ್ ಹಾಗೂ ತೇಗದ ಮರವನ್ನು ಬಳಸಿ ಕಟ್ಟಲಾಗಿದೆ. ಇದರ ಹಿಂಭಾಗ ಸ್ವಲ್ಪ ಶಿಥಿಲಾವಸ್ಥೆಯಲ್ಲಿದ್ದು, ಉಳಿದ ಭಾಗ ಗಟ್ಟಿಯಾಗಿದೆ. ಇದನ್ನು ಸಂರಕ್ಷಿಸಬಹುದು ಎಂಬುದು ಪಾರಂಪರಿಕ ತಜ್ಞರ ಅಭಿಪ್ರಾಯವಾಗಿದೆ.

ಪುನರ್ನಿರ್ಮಾಣ ಅಗತ್ಯ : ದೇವರಾಜ ಮಾರುಕಟ್ಟೆ 2016ರಲ್ಲಿ ಹಿಂಭಾಗ ಕುಸಿದು ಬಿದ್ದಿದ್ದು. ಜೊತೆಗೆ ಇಡೀ ಮಾರುಕಟ್ಟೆಯ ಕಟ್ಟಡಗಳು ಹಳೆಯದಾಗಿವೆ. ಮಳೆ, ಗಾಳಿಗೆ ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿವೆ. ಇದರ ಜೊತೆಗೆ ಇಲಿ, ಹೆಗ್ಗಣಗಳ ಕಾಟದಿಂದ ಈ ಮಾರುಕಟ್ಟೆ ಶಿಥಿಲಾವಸ್ಥೆಗೆ ತಲುಪಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಮಾರುಕಟ್ಟೆ ಕೆಡವಿ ಪಾರಂಪರಿಕ ಶೈಲಿಯಲ್ಲಿ ಪುನರ್ನಿರ್ಮಾಣ ಮಾಡಿ ಎಂಬುದು ಜನಪ್ರತಿನಿಧಿಗಳ ವಾದವಾಗಿದೆ‌.

ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡ ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಪುನರ್ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಹಾಗೂ ಸರ್ಕಾರ ಮುಂದಾದರೇ, ಮತ್ತೊಂದು ಕಡೆ ಪಾರಂಪರಿಕ ಕಟ್ಟಡ ಕೆಡವದೆ ಅದೇ ರೀತಿ ಸಂರಕ್ಷಣೆ ಮಾಡುವುದು ಅಗತ್ಯ ಎಂಬುದು ರಾಜಮನೆತನದ ಹಾಗೂ ವ್ಯಾಪಾರಸ್ಥರ ವಾದವಾಗಿದೆ. ಕೊನೆಗೆ ಏನಾಗುತ್ತದೆ ಎಂಬುದೇ ಈಗ ಪ್ರಶ್ನೆಯಾಗಿದೆ‌.

ಇದನ್ನೂ ಓದಿ: ಮೈಸೂರಿನ ಶಿಥಿಲಾವಸ್ಥೆಯ ಎರಡು ಪಾರಂಪರಿಕ ಕಟ್ಟಡಗಳ ನೆಲಸಮಕ್ಕೆ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.