ETV Bharat / city

ಅಮಲಲ್ಲಿ ಮಚ್ಚು ಬೀಸಿದ ಕುಡುಕ: ಮೈಸೂರಿನಲ್ಲಿ ಒಬ್ಬರ ಸಾವು, ಐವರ ಸ್ಥಿತಿ ಗಂಭೀರ - ನಂಜನಗೂಡಿನಲ್ಲಿ ಕುಡುಕನಿಂದ ಮಚ್ಚಿನೇಟು

10 ವರ್ಷಗಳ‌ ಹಿಂದೆ ಮೊದಲನೇ ಪತ್ನಿಯನ್ನು ಕೊಂದು ಜೈಲು ಶಿಕ್ಷೆಯನ್ನು ಅನುಭವಿಸಿದ್ದ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ಮಚ್ಚು ಬೀಸಿ, ಒಬ್ಬರನ್ನು ಕೊಂದು, ಐವರನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ.

ಅಮಲಿನಲಿ ಮಚ್ಚು ಬೀಸಿದ ಕುಡುಕ: ಮೈಸೂರಿನಲ್ಲಿ ಇಬ್ಬರ ಸಾವು, ನಾಲ್ವರ ಸ್ಥಿತಿ ಗಂಭೀರ
machete attack in Mysuru , ಮೈಸೂರಿನಲ್ಲಿ ಕುಡುಕನಿಂದ ಮಚ್ಚಿನ ಏಟು
author img

By

Published : Dec 2, 2021, 9:57 AM IST

ಮೈಸೂರು: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ, ತನ್ನ ಎದುರು ಮನೆಯ ಒಬ್ಬರನ್ನು ಕೊಂದಿದ್ದು ಮಾತ್ರವಲ್ಲದೇ, ತನ್ನ ಗರ್ಭಿಣಿ ಪತ್ನಿ ಸೇರಿದಂತೆ ಐವರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಈರಯ್ಯ ಎಂಬಾತ ಕೃತ್ಯ ನಡೆಸಿದ್ದು, ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈರಯ್ಯನ ಎದುರು ಮನೆಯ ನಿಂಗಮ್ಮ ಹಲ್ಲೆಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂಗಮ್ಮನ ಪತಿ ಮಾದಯ್ಯ, ಈರಯ್ಯನ ಎರಡನೇ ಹೆಂಡತಿ ಮಹದೇವಮ್ಮ ಹಾಗೂ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.

ಸುಮಾರು ವರ್ಷಗಳ‌ ಹಿಂದೆ ಮೊದಲನೇ ಪತ್ನಿಯನ್ನು ಕೊಂದು ಜೈಲಿನಿಂದ ಹೊರ ಬಂದಿದ್ದು, ಇಂದು ಕುಡಿತದ ಅಮಲಿನಲ್ಲಿ‌ ಕೊಲೆಗೈದಿದ್ದಾನೆ.‌ ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಈಗ ಸದ್ಯಕ್ಕೆ ಈರಯ್ಯನ ಎರಡನೇ ಪತ್ನಿ ಮಹದೇವಮ್ಮ, ಈರಯ್ಯನ ತಾಯಿಯಾದ ಗೌರಮ್ಮ, ಕೊಲೆಯಾದ ನಿಂಗಮ್ಮನ ಮಗನಾದ ಸುರೇಶ್ ಹಾಗೂ ಜಗಳ ಬಿಡಿಸಲು ಬಂದ ಮಹಾದೇವ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಇವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಡಿವೈಎಸ್ಪಿ ಗೋವಿಂದರಾಜ್, ವೃತ್ತ ನಿರೀಕ್ಷಕರಾದ ಲಕ್ಷ್ಮೀಕಾಂತ ತಳವಾರ್‌ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪೊಲೀಸರ ಹೊಡೆತಕ್ಕೆ ಬಲಗೈ ಕಳೆದುಕೊಂಡ ಯುವಕ... ಪೋಷಕರಿಂದ ಗಂಭೀರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.