ETV Bharat / city

ಆಷಾಢ ಶುಕ್ರವಾರಂದು ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ - istrict Collector Dr. Bagadi Gautam

ಆಷಾಢ ಶುಕ್ರವಾರಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಭೇಟಿಗೆ ಭಕ್ತರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ..

Mysuru
ಆಷಾಢ ಶುಕ್ರವಾರಂದು ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ
author img

By

Published : Jul 6, 2021, 1:50 PM IST

Updated : Jul 6, 2021, 2:08 PM IST

ಮೈಸೂರು : ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಬೇಕೆಂದುಕೊಂಡಿದ್ದ ಭಕ್ತಾದಿಗಳಿಗೆ ಕೊಂಚ ನಿರಾಶೆಯಾಗಲಿದೆ.

ಜುಲೈ 9ರಂದು ಆಷಾಢ ಅಮಾವಾಸ್ಯೆ. ಜುಲೈ 16ರ ಮೊದಲನೇ ಆಷಾಢ ಶುಕ್ರವಾರ. ಜುಲೈ 23ರ ಎರಡನೇ ಆಷಾಢ ಶುಕ್ರವಾರ. ಜುಲೈ30ರ ಆಷಾಢ ಶುಕ್ರವಾರ ಮತ್ತು ಅಮ್ಮನವರ ವರ್ಧಂತಿ. ಆಗಸ್ಟ್ 6ರಂದು 4ನೇ ಆಷಾಢ ಶುಕ್ರವಾರ. ಆ‌ಗಸ್ಟ್‌ 8ರಂದು ಭೀಮನ ಅಮಾವಾಸ್ಯೆ, ಈ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಜೊತೆಗೆ ಆಷಾಢ ಮಾಸದ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ

Last Updated : Jul 6, 2021, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.