ಮೈಸೂರು: ಭಾರಿ ಗಾಳಿ ಮಳೆಗೆ 7 ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮರೀಗೌಡ ಮತ್ತು ಮಾದೇಗೌಡ ಎಂಬುವವರಿಗೆ ಸೇರಿದ ಬಾಳೆ ಬೆಳೆ ಮಳೆ-ಗಾಳಿಗೆ ನಾಶವಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ, ಇಡೀ ವರ್ಷ ಶ್ರಮವಹಿಸಿ ಬೆಳೆದು ಗೊನೆ ಬಿಟ್ಟಿದ್ದ ಬಾಳೆ ಬೆಳೆ, ಸಂಪೂರ್ಣವಾಗಿ ನೆಲಕಚ್ಚಿದೆ. ಹೈರಿಗೆ ಗ್ರಾಮದ ಹೊರವಲಯದಲ್ಲಿ ಸುಮಾರು 7 ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ರೈತರಾದ ಮರೀಗೌಡ ಮತ್ತು ಮಾದೇಗೌಡ ಕಂಗಲಾಗಿದ್ದಾರೆ. ನಷ್ಟ ಪರಿಹಾರ ನೀಡುವಂತೆ ರೈತರು ತೋಟಗಾರಿಕೆ ಇಲಾಖೆಗೆ ಒತ್ತಾಯಿಸಿದ್ದಾರೆ.
ಓದಿ : ಮೈಸೂರು: ಮಳೆ-ಗಾಳಿಗೆ ಕೊಂಬೆ ಮುರಿದು ಬಿದ್ದು ಹೋರಿ ಸಾವು, ಅಪಾಯದಿಂದ ರೈತ ಪಾರು