ಮೈಸೂರು: ಯುವ ಸಮೂಹದಿಂದಲೇ ಹೆಚ್ಚಾಗಿ ಕೊರೊನಾ ಹರಡುತ್ತಿದೆ. ಕಂಟ್ರೋಲ್ ಮಾಡಲು ಜಿಲ್ಲಾಡಳಿತ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ನಿತ್ಯ 6 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ತಾಲೂಕು ಮಟ್ಟದಲ್ಲೂ ಟೆಸ್ಟ್ ಕಾರ್ಯವನ್ನ ಹೆಚ್ಚಳ ಮಾಡಿದ್ದೇವೆ. ಮೈಸೂರಿನಲ್ಲಿ ಡೆತ್ ಕೇಸ್ ಹಿಂದೆಯೂ ಜಾಸ್ತಿ ಇತ್ತು, ಈಗಲೂ ಜಾಸ್ತಿ ಇದೆ ಎಂದರು.
ಪ್ರವಾಸಿತಾಣಗಳನ್ನ ಮುಚ್ಚಲು ಸಾಧ್ಯವಿಲ್ಲ. ಚಿತ್ರಮಂದಿಗಳಲ್ಲಿ ಶೇ.50 ಆದ ಕೂಡಲೇ ಡೋರ್ ಕ್ಲೋಸ್ ಮಾಡಲಾಗುತ್ತೆ. ಮದುವೆ ಮನೆಗಳಲ್ಲಿ ಗುಂಪುಗೂಡಬೇಡಿ, ಮಾಸ್ಕ್ ಹಾಕಿ ಅಂತ ಹೋಗಿ ಹೇಳೋಕೆ ಆಗಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿದರೆ ಒಳಿತು. ನಾನು ಬೆಂಗಳೂರಿನಿಂದ ಬರುವವರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ ಅಂತ ಹೇಳಿಲ್ಲ. ಸರ್ಕಾರ ಯಾವ ಸೂಚನೆ ನೀಡುತ್ತೆ, ಅದನ್ನು ಫಾಲೋ ಮಾಡ್ತೀವಿ ಎಂದರು.
ಮೈಸೂರು ಪ್ರವಾಸಿ ತಾಣಗಳಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ ರದ್ದು ವಿಚಾರವಾಗಿ ಮಾತನಾಡಿ, ಮಿಸ್‌ಗೈಡ್‌ನಿಂದಾಗಿ ನಾನು ತೆಗೆದುಕೊಂಡ ಕ್ರಮಗಳನ್ನ ಸರ್ಕಾರ ರದ್ದು ಮಾಡಿದೆ. ನಾನು ಸರ್ಕಾರಕ್ಕೆ ಸಲಹೆ ಕೊಡಬಹುದು ಅಷ್ಟೆ. ಆದರೆ, ಕಡ್ಡಾಯವಾಗಿ ಜಾರಿಗೆ ತನ್ನಿ ಎಂದು ಹೇಳಲು ಸಾಧ್ಯವೇ ಎಂದರು.
ಮೈಸೂರಿನಲ್ಲಿ ಒಬ್ಬ ಸೋಂಕಿತ ವ್ಯಕ್ತಿ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜೂಜಾಟ ಆಡಿ 250 ಜನರನ್ನ ಸಂಪರ್ಕಿಸಿದ್ದಾನೆ. ಹೀಗಾಗಿ ನೈಟ್ ಕರ್ಪ್ಯೂ ಜಾರಿ ಮಾಡಬೇಕಿದೆ ಎಂದು ಹೇಳಿದರು.
ಮೈಸೂರು ಜಿಲ್ಲೆಗೆ ಒಂದೂವರೆ ಲಕ್ಷ ಲಸಿಕೆ ಸರಬರಾಜಾಗಿದೆ. ಲಸಿಕೆಗಳು ಖಾಲಿಯಾಗುತ್ತಾ ಬಂದಿವೆ. ಈಗ ಮತ್ತೆ ಎರಡು ಲಕ್ಷ ಲಸಿಕೆ ಸರಬರಾಜು ಮಾಡುವಂತೆ ಕೇಳುತ್ತೇವೆ ಎಂದರು.