ETV Bharat / city

ತೆರೆಯದ ಶಾಲಾ-ಕಾಲೇಜುಗಳು: ಕಂಗಾಲಾದ ಪುಸ್ತಕ ವ್ಯಾಪಾರಸ್ಥರು - ಪುಸ್ತಕ ವ್ಯಾಪಾರ ನಂಬಿದವರ ಗತಿ ಶೋಚನೀಯ

ಕೊರೊನಾ ಲಾಕ್​​ಡೌನ್​​ನಿಂದ ಬಸವಳಿದಿರುವ ಪುಸ್ತಕ ಮಾರಾಟಗಾರರು, ಸಡಿಲಿಕೆ ನಂತರ ಬದಲಾವಣೆಯಾಗಬಹುದು ಎಂದು ಕಾತುರದಿಂದ ಕಾಯುತ್ತಿದ್ದರು. ಆದರೆ ಸರ್ಕಾರ ಸರಿಯಾದ ಸೂಕ್ತ ನಿರ್ದೇಶನ ನೀಡದೇ ಇರುವುದರಿಂ‌ದ ಪುಸ್ತಕ ವ್ಯಾಪಾರ ನಂಬಿದವರ ಸ್ಥಿತಿ ಶೋಚನೀಯವಾಗುತ್ತಿದೆ.

Corona Effect on Mysore Book Trade Loss
ಶಾಲಾ-ಕಾಲೇಜು ತೆರೆಯಲು ಸರ್ಕಾರದ ಮೀನಾಮೇಷ: ಕಂಗಾಲಾದ ಪುಸ್ತಕ ವ್ಯಾಪಾರಸ್ಥರು
author img

By

Published : Aug 28, 2020, 3:30 PM IST

ಮೈಸೂರು: ಕೊರೊನಾ ಅಬ್ಬರಕ್ಕೆ ಶಾಲಾ-ಕಾಲೇಜುಗಳನ್ನು ತೆರೆಯಲೋ ಅಥವಾ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಸರ್ಕಾರ ಕುಳಿತಿರುವುದರಿಂದ ಪುಸ್ತಕ ವ್ಯಾಪಾರ ಫುಲ್ ಡಲ್ ಆಗಿದೆ.

ತೆರೆಯದ ಶಾಲಾ-ಕಾಲೇಜುಗಳು: ಕಂಗಾಲಾದ ಪುಸ್ತಕ ವ್ಯಾಪಾರಸ್ಥರು

ಶಾಲಾ-ಕಾಲೇಜು ತೆರೆಯಬೇಕೋ, ಬೇಡವೋ ಎನ್ನುವ ಗೊಂದಲ್ಲಿ ಸರ್ಕಾರವಿದ್ದು, ಇತ್ತ ಆನ್​​ಲೈನ್ ತರಗತಿ ಮಾಡಲು ಕೂಡ ಸೂಕ್ತ ಮಾರ್ಗದರ್ಶನ ನೀಡದೇ ಇರುವುದರಿಂದ ಪುಸ್ತಕ ಖರೀದಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು‌ ಮುಂದಾಗುತ್ತಿಲ್ಲ. ಕೊರೊನಾ ಲಾಕ್​ಡೌನ್​ನಿಂದ ಬಸವಳಿದಿರುವ ಪುಸ್ತಕ ಮಾರಾಟಗಾರರು, ಸಡಿಲಿಕೆ ನಂತರ ಬದಲಾವಣೆಯಾಗಬಹುದು ಎಂದು ಕಾತುರದಿಂದ ಕಾಯುತ್ತಿದ್ದರು. ಆದರೆ ಸರ್ಕಾರ ಸೂಕ್ತ ನಿರ್ದೇಶನ ನೀಡದೇ ಇರುವುದರಿಂ‌ದ ಪುಸ್ತಕ ವ್ಯಾಪಾರ ನಂಬಿದವರ ಸ್ಥಿತಿ ಶೋಚನೀಯವಾಗುತ್ತಿದೆ.

ದಿನೇ ದಿನೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಆರಂಭ ಡೌಟಾಗಿದ್ದು, ಪುಸ್ತಕ ಅಂಗಡಿ ಮಾಲೀಕರಿಗೆ ಶಾಲಾ-ಕಾಲೇಜುಗಳು ಆರಂಭವಾದರಷ್ಟೇ ವ್ಯಾಪಾರ ವಹಿವಾಟು. ಕಳೆದ 6 ತಿಂಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಹೈರಾಣಾಗಿದ್ದಾರೆ.
ಶಿಕ್ಷಣ ಇಲಾಖೆ ಆನ್​ಲೈನ್ ಶಿಕ್ಷಣದತ್ತ ಮುಖ ಮಾಡುತ್ತಿರುವುದರಿಂದ ವ್ಯಾಪಾರಿಗಳು‌ ಮತ್ತಷ್ಟು ಕಂಗೆಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.