ಮೈಸೂರು: ಕೊರೊನಾದ ಹಾಟ್ಸ್ಪಾಟ್ ಆಗಿರುವ ನಗರದಲ್ಲಿ ಸರ್ಕಾರಿ ಕಚೇರಿಗಳ ಮುಂಭಾಗ ರಾಸಾಯನಿಕ ಸಿಂಪಡಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಸಾರ್ವಜನಿಕರು ಹೆಚ್ಚಾಗಿ ಬರುವ ಸರ್ಕಾರಿ ಕಚೇರಿ ಮೂಡಾ ಇಲಾಖೆ ಮುಂಭಾಗ ಇಂದು ಅಗ್ನಿಶಾಮಕ ವಾಹನದಲ್ಲಿ ರಾಸಾಯನಿಕವನ್ನು ಪಾರ್ಕ್, ರಸ್ತೆ, ಮೂಡಾ ಕಚೇರಿಯ ಮುಂಭಾಗದಲ್ಲಿ ಸಿಂಪಡಿಸುವ ಮೂಲಕ ಸ್ವಚ್ಛತೆ ಕೈಗೊಳ್ಳಲಾಯಿತು.
ಮೈಸೂರು ಈಗಾಗಲೇ ಕೊರೊನಾ ವೈರಸ್ ಹಾಟ್ಸ್ಪಾಟ್ ಆಗಿದ್ದು, ನಗರದ 12 ಏರಿಯಾಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿದ್ದು, ಅಲ್ಲೂ ಸಹ ರಾಸಾಯನಿಕ ಸಿಂಪಡಿಸಿ, ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ.