ಮೈಸೂರು : ಕೊರೊನಾದ ಎರಡನೇ ಅಲೆ ಜಗತ್ತನ್ನೇ ತಲ್ಲಣಗೊಳಿಸಿದರೂ ಬೈಲುಕುಪ್ಪೆಯಲ್ಲಿರುವ ಬೌದ್ಧ ನಿರಾಶ್ರಿತ ಶಿಬಿರದಲ್ಲಿ ಈ ಸೋಂಕು ಹರಡುತ್ತಿಲ್ಲ. ಅದಕ್ಕೆ ಕಾರಣ ಇಲ್ಲಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಹಿಂದೆ ನಿರಾಶ್ರಿತರ ಬೌದ್ದ ಸನ್ಯಾಸಿಗಳು ವಾಸವಿದ್ದ ಪ್ರಸಿದ್ದ ಪ್ರಾರ್ಥನಾ ಮಂದಿರ ಗೋಲ್ಡನ್ ಟೆಂಪಲ್ ಇದೆ. ಇದನ್ನು ನೋಡಲು ಪ್ರಪಂಚದಾದ್ಯಂತ ಇರುವ ಬೌದ್ದ ಭಿಕ್ಷುಗಳು ಇಲ್ಲಿಗೆ ಬರುತ್ತಾರೆ.
ಆದರೆ, ಇಲ್ಲಿ ಕಳೆದ ವರ್ಷ ಉಂಟಾದ ಲಾಕ್ಡೌನ್ನಿಂದ ಮುಚ್ಚಲ್ಪಟ್ಟ ಈ ಮಂದಿರ ಇನ್ನೂ ತೆರೆದಿಲ್ಲ. ಸುಮಾರು 400 ದಿನಗಳಾದರೂ ಸ್ವಯಂ ಘೋಷಣೆ ಮಾಡಿಕೊಂಡು ಅವರು ಲಾಕ್‌ಡೌನ್ ಮಾಡಿಕೊಂಡಿದ್ದಾರೆ. ಹಾಗಾಗಿ, ಇಲ್ಲಿ ಕೊರೊನಾದ ಅಬ್ಬರ ಇಲ್ಲ. ಕೊರೊನಾ ಬರದಂತೆ ಸ್ವಯಂ ಬೀಗ ಹಾಕಿಕೊಂಡು ಮಾದರಿಯಾಗಿದ್ದಾರೆ ಈ ಬೌದ್ದ ಭಿಕ್ಷುಗಳು.