ETV Bharat / city

ಮಳೆ ಅವಾಂತರ: ಮಣ್ಣಿನ ಗೋಡೆ ಕುಸಿದು ಕುಟುಂಬ ಪ್ರಾಣಾಪಾಯದಿಂದ ಪಾರು..ಬಾಲಕನಿಗೆ ಗಾಯ - ಮೈಸೂರು ಮಳೆ ಅವಾಂತರ

ಮೈಸೂರು ಜಿಲ್ಲಾದ್ಯಂತ ನಿರಂತವಾಗಿ ಮಳೆ ಸುರಿಯುತ್ತಿದೆ. ಇದರಿಂದ ಅಪಾರ ಹಾನಿ ಉಂಟಾಗುತ್ತಿದೆ. ಇಂದು ಗಣಿಗರ ಹುಂಡಿಯಲ್ಲಿ ಮನೆ ಗೋಡೆ ಕುಸಿದು, (wall collapse Due To Heavy Rain) ಬಾಲಕನ ಕಾಲಿಗೆ ಗಂಭೀರ ಗಾಯಗಳಾಗಿವೆ ಹಾಗೆ ಮೋಳೆ ಗ್ರಾಮದಲ್ಲಿಯೂ ಮನೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

boy-hurt-leg-in-wall-collapse-due-to-heavy-rain
ಮಳೆ ಅವಾಂತರ
author img

By

Published : Nov 16, 2021, 12:57 PM IST

ಮೈಸೂರು: ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಮಣ್ಣಿನ ಗೋಡೆ ಕುಸಿದು (wall collapse Due To Heavy Rain) ಬಿದ್ದು, ಬಾಲಕನ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ತಾಲೂಕಿನ ಗಣಿಗರ ಹುಂಡಿಯಲ್ಲಿ ನಡೆದಿದೆ. ಮೊಳೆ ಗ್ರಾಮದಲ್ಲಿಯೂ ಮನೆ ಬಿದ್ದ ಘಟನೆ ಜರುಗಿದೆ.

ಮೈಸೂರು ಜಿಲ್ಲೆಯಲ್ಲಿ ಮಳೆ ಅವಾಂತರ

ಗ್ರಾಮದ ಸಿದ್ದರಾಜು, ಜ್ಯೋತಿ ಎಂಬುವರ ಪುತ್ರ ವಿಕಾಸ್ (16)ಗಾಯಗೊಂಡ ಬಾಲಕ. ವಿಕಾಸ್​ನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮನೆ ಕುಸಿತ: ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು

ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನರಸೀಪುರ ತಾಲೂಕಿನ ಮೂಗೂರು ಮೋಳೆ ಗ್ರಾಮದಲ್ಲಿ ಮನೆ ಕುಸಿದು (house collapse Due To Heavy Rain) ಬಿದ್ದಿದೆ‌.

ಗ್ರಾಮದ ಮಹಾದೇವಶೆಟ್ಟಿ ಎಂಬುವರ ಮನೆ ಬಿದ್ದಿದ್ದು, ರಾತ್ರಿ ಮಲಗಿದ್ದ ವೇಳೆ ಮನೆ ಬೀಳುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಮನೆಯಲ್ಲಿದ್ದ 10 ಮಂದಿಯನ್ನ ಮಹದೇವಶೆಟ್ಟಿ ಆಚೆ ಕಳುಹಿಸಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ. ಮನೆಯಲ್ಲಿದ್ದ ಅನೇಕ ವಸ್ತುಗಳು ನಾಶವಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.