ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ. ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ ಎಂದು ಬಿಜೆಪಿ ಮುಖಂಡ ಎ.ಮಂಜು ವಾಗ್ದಾಳಿ ನಡೆಸಿದರು. ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡೋದು ವೆರಿ ಬ್ಯಾಡ್. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು ಎಂದರು.
ರೋಹಿಣಿ ಸಿಂಧೂರಿ ಭೂ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಯಾಕೆ ಎಫ್ಐಆರ್ ಮಾಡಿಲ್ಲ?. ಹಾಸನ ಡಿಸಿಯಾಗಿದ್ದಾಗ ರೋಹಿಣಿ ಸಿಂಧೂರಿಯನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಆಡಳಿತದ ಸಂದರ್ಭದಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಹೀಗಾಗಿಯೇ ಅವರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಉತ್ತಮ ಅಧಿಕಾರಿಯಾಗುತ್ತಾರೆ ಎಂದು ಸಲಹೆ ನೀಡಿದರು.
ಕೆರೆ, ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡಬೇಕು ಅಂತ ರೋಹಿಣಿ ಸಿಂಧೂರಿ ಹೇಳುತ್ತಾರೆ. ಅದೇ ಇವರು ಹಾಸನದಲ್ಲಿ ಡಿಸಿಯಾಗಿದ್ದಾಗ ಸಾರ್ವಜನಿಕರು ಸ್ವಂತ ಹಣದಿಂದ ಉಳಿಸಿದ ಕೆರೆಯನ್ನ ನೋಡಲೇ ಇಲ್ಲ. ಮೈಸೂರಿನಲ್ಲಿ ಏನು ಮಾಡಿದ್ರೂ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಭೂ ಮಾಫಿಯಾ ಮಾಡಿದ್ದಾರೆ ಅಂತಾರೆ. ಈವರೆಗೂ ಭೂ ಮಾಫಿಯಾ ಮಾಡಿದವರ ವಿರುದ್ಧ ಒಂದೇ ಒಂದು ಎಫ್ಐಆರ್ ಆಗಿಲ್ಲ ಏಕೆ? ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದರೆ, ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ದಂಧೆ ಮಾಡಬಾರದು. ಎಷ್ಟು ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾ ಮಾಡುವವರ ಮೇಲೆ ಎಫ್ಐಆರ್ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದೆಹಲಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಅರವಿಂದ ಬೆಲ್ಲದ