ETV Bharat / city

2023ಕ್ಕೆ ಬಸವರಾಜ ಬೊಮ್ಮಾಯಿ ಮತ್ತೆ CM ಆಗಲಿದ್ದಾರೆ: MP ಪ್ರತಾಪ್ ಸಿಂಹ ಭವಿಷ್ಯ - ಸಂಸದ ಪ್ರತಾಪ್ ಸಿಂಹ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

MP Pratap Simha
ಪ್ರತಾಪ್ ಸಿಂಹ
author img

By

Published : Oct 7, 2021, 12:09 PM IST

ಮೈಸೂರು: 2023ರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಸವರಾಜ ಬೊಮ್ಮಾಯಿ ಅವರೇ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಭವಿಷ್ಯ ನುಡಿದಿದ್ದಾರೆ.

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮೈಸೂರಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡುವಂತೆ ತಿಳಿಸಿದ್ದು, ಅದರಲ್ಲಿ ಅನುಮಾನವಿಲ್ಲ. ಬೊಮ್ಮಾಯಿ‌ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯಾಗಲಿದೆ ಎಂದರು.

ಶ್ರೇಷ್ಠ ರಾಜಕಾರಣಿ ಎಸ್.ಎಂ ಕೃಷ್ಣ:

ಎಸ್.ಎಂ ಕೃಷ್ಣ ಅವರು 2001ರಲ್ಲಿ 2ನೇ ಬಾರಿ ಯೋಗ್ಯ ಹಾಗೂ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಇಂಡಿಯಾ ಟು ಡೇ ನೀಡುವ ಪ್ರಶಸ್ತಿಯನ್ನು ಪಡೆದುಕೊಂಡಿರುವ ಶ್ರೇಷ್ಠ ರಾಜಕಾರಣಿ.

ಲಿಕ್ಕರ್​​ನಿಂದ ಬರುತ್ತಿರುವ ಲಾಭಕ್ಕೆ ಅಂದು ಎಸ್.ಎಂ ಕೃಷ್ಣ ಅವರು ತಂದ ಯೋಜನೆಗಳು ಕಾರಣ. ಖಾತೆ, ಪಹಣಿಯಿಂದ ಹಿಡಿದು ಎಲ್ಲಾ ಸರ್ಕಾರಿ ದಾಖಲೆಗಳನ್ನು ಗಣಕೀಕರಣ ಮಾಡಿದ ಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ಅಲ್ಲದೇ ರಾಜ್ಯದ ಜನರ ಆರೋಗ್ಯ ಕಾಪಾಡುವ ಸಲುವಾಗಿ ಯಶಸ್ವಿನಿ ಯೋಜನೆ ಜಾರಿಗೆ ತಂದವರು ಎಸ್.ಎಂ. ಕೃಷ್ಣ ಎಂದು ಸಂಸದ ಪ್ರತಾಪ್ ಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೇವಿ ಅವಕಾಶ ಕಲ್ಪಿಸಿದರೆ ಮುಂದಿನ ವರ್ಷ ಅದ್ಧೂರಿ ದಸರಾ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.