ETV Bharat / city

ಹೆಚ್​.ಡಿ.ಕೋಟೆ ಬಳಿ ಹುಲಿ ಉಗುರು ಮಾರಾಟ ಯತ್ನ: ಓರ್ವ ಬಂಧನ, ಮತ್ತೊಬ್ಬ ಪರಾರಿ - tiger nail seized in Mysuru

ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಹುಲಿ ಏಳು ಉಗುರು ವಶಪಡಿಸಿಕೊಳ್ಳಲಾಗಿದೆ.

ಹುಲಿ ಉಗುರು ಮಾರಾಟ ಯತ್ನ
ಹುಲಿ ಉಗುರು ಮಾರಾಟ ಯತ್ನ
author img

By

Published : Feb 6, 2022, 4:58 AM IST

ಮೈಸೂರು: ಹುಲಿ ಉಗುರು ಮಾರಾಟ ಮಾಡಲು ಯತ್ನಿಸಿದ ಓರ್ವನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಹೆಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದ ವೆಂಕಟೇಶ್ ಬಂಧಿತ ಆರೋಪಿ. ಗಂಡತ್ತೂರು ಗ್ರಾಮದ ಆರೋಪಿ ಸ್ವಾಮಿ ಪರಾರಿಯಾಗಿದ್ದಾನೆ. ಎನ್.ಬೇಗೂರಿನಿಂದ ಹೆಚ್.ಡಿ.ಕೋಟೆಗೆ ಹೋಗುವ ರಸ್ತೆಯಲ್ಲಿ ಬಸಾಪುರ ಗ್ರಾಮದ ಸಮೀಪದಲ್ಲಿ ಹುಲಿಯ ಏಳು ಉಗುರುಗಳನ್ನು ಸಾಗಣೆ ಮಾಡಿ, ಮಾರಾಟ ಮಾಡಲು ಇಬ್ಬರು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮೈಸೂರು ಅರಣ್ಯ ಸಂಚಾರಿದಳ ಉಪ ಅರಣ್ಯ ಸಂರಕ್ಷಣಾಧಿಕಾರಿಯು ದಾಳಿ ನಡೆಸಲು ಸೂಚಿಸಿದ್ದಾರೆ.

ಬಸಾಪುರ ಗ್ರಾಮದ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ, ವೆಂಕಟೇಶ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತನಿಂದ ಹುಲಿಯ ಏಳು ಉಗುರು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

(ಇದನ್ನೂ ಓದಿ: ಸಮವಸ್ತ್ರ ವಿಚಾರದಲ್ಲಿ ಶಾಲಾ-ಕಾಲೇಜುಗಳ ಸಮಿತಿಯ ನಿರ್ಣಯವೇ ಅಂತಿಮ : ಆರಗ ಜ್ಞಾನೇಂದ್ರ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.