ETV Bharat / city

ಸರ್ಕಾರದೊಂದಿಗೆ ಹರ್ಷಗುಪ್ತ ನಡೆಸಿರುವ ಪತ್ರ ವ್ಯವಹಾರದ ಬಗ್ಗೆ ಗೊತ್ತಿಲ್ಲ: ಡಿಸಿ - Infection for workers in a Jubilant factory

ಕಾರ್ಮಿಕರ ಪ್ರಮಾಣವನ್ನು ಶೇ. 30ಕ್ಕೆ ತಗ್ಗಿಸಬೇಕು ಅಥವಾ ಶೇ. 50ಕ್ಕೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಕೈಗಾರಿಕೆಗಳ ಜೊತೆಯಲ್ಲಿ ಕಾಮಗಾರಿಗಳಿಗೂ ಅವಕಾಶ ನೀಡಲಾಗಿದೆ‌. ಕಾಮಗಾರಿ ಕೆಲಸಕ್ಕೆ ಹೊರಗಿನಿಂದ ಕಾರ್ಮಿಕರನ್ನು ಕರೆಯುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

alcohol-available-in-the-red-zone
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
author img

By

Published : May 2, 2020, 4:45 PM IST

ಮೈಸೂರು: ಜುಬಿಲಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಹರ್ಷಗುಪ್ತ ಅವರ ಪತ್ರ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19ಗಾಗಿ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಹರ್ಷಗುಪ್ತ ಅವರು ನನ್ನ, ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ವೈದ್ಯರ ಬಳಿ ಮಾಹಿತಿ ಕೇಳಿದ್ದರು. ಅದಕ್ಕೆ ಸಹಕಾರ ನೀಡಿದ್ದೇನೆ. ಸರ್ಕಾರದೊಂದಿಗೆ ಅವರು ನಡೆಸಿದ ಪತ್ರ ವ್ಯವಹಾರದ ಕುರಿತು ಮಾಹಿತಿ ಇಲ್ಲ ಎಂದು ಹೇಳಿದರು.

ಮೈಸೂರು ರೆಡ್ ಝೋನ್​​ನಿಂದ ಹೊರ ಬರುವ ಸಾಧ್ಯತೆಯಿದೆ. ಕ್ವಾರಂಟೈನ್​​​ನಲ್ಲಿ 200 ಮಂದಿ ಇದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲರೂ ಕ್ವಾರಂಟೈನ್ ಮುಗಿಸಲಿದ್ದಾರೆ. ಬಹುತೇಕ ಮಂದಿ ಸೋಂಕಿತರು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್

ಸೋಮವಾರದಿಂದ ರೆಡ್ ಝೋನ್​​​ನಲ್ಲಿಯೂ ಮದ್ಯ ಸಿಗಲಿದೆ. 6 ಅಡಿ ಅಂತರದಲ್ಲಿ ಮದ್ಯ ಖರೀದಿ ಮಾಡಬಹುದು. ಆದರೆ ಅಲ್ಲಿಯೇ ಸೇವಿಸುವಂತಿಲ್ಲ ಎಂದು ಹೇಳಿದರು.

ಕಾರ್ಮಿಕರ ಪ್ರಮಾಣವನ್ನು ಶೇ. 30ಕ್ಕೆ ತಗ್ಗಿಸಬೇಕು ಅಥವಾ ಶೇ. 50ಕ್ಕೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಕೈಗಾರಿಕೆಗಳ ಜೊತೆಯಲ್ಲಿ ಕಾಮಗಾರಿಗಳಿಗೂ ಅವಕಾಶ ನೀಡಲಾಗಿದೆ‌. ಕಾಮಗಾರಿ ಕೆಲಸಕ್ಕೆ ಹೊರಗಿನಿಂದ ಕಾರ್ಮಿಕರನ್ನು ಕರೆಯುವಂತಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.