ಮೈಸೂರು: ನಟ ಅಜಯ್ ದೇವಗನ್, ರಾಷ್ಟ್ರೀಯ ನಾಯಕರ ಗಮನ ಸೆಳೆಯುವ ಆಸೆಯಿಂದ ಈ ಹೇಳಿಕೆ ನೀಡಿದ್ದಾರೆ. ಇದಕ್ಕೆ ನಮ್ಮ ಕಿಚ್ಚ ಸುದೀಪ್ ಕನ್ನಡದ ಅಭಿಮಾನದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಭಾಷೆಗೆ ಯಾವುದೇ ಲಾಭ, ನಷ್ಟ ಇಲ್ಲ. ನಮ್ಮದು ಭಾಷಾವಾರು ಪ್ರಾಂತ್ಯ, ನಾವು ಗಣರಾಜ್ಯ ವ್ಯವಸ್ಥೆಯಲ್ಲಿ ಇದ್ದೇವೆ. ಪಾರ್ಲಿಮೆಂಟ್ನಲ್ಲಿ ಇಂಗ್ಲಿಷ್ ಇಲ್ಲ, ಹಿಂದಿ ಭಾಷೆಯಲ್ಲಿ ಮಾತನಾಡಬೇಕು. ನಾವು ಕರ್ನಾಟಕದಲ್ಲಿ ಕನ್ನಡ ಬಳಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಈಟಿವಿ ಭಾರತದ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದರು.
ಸಂಪುಟ ವಿಸ್ತರಣೆ ಮುಂದಿನ ಚುನಾವಣೆಗೆ ಹಣ ಮಾಡುವುದಕ್ಕಾ?: ಚುನಾವಣೆಗೆ ಒಂದು ವರ್ಷ ಇರುವಾಗ ಸಂಪುಟ ವಿಸ್ತರಣೆ ಮಾಡುವುದಕ್ಕಿಂತ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ತುಂಬಿದರೆ ಸಾಕು. ಈಗ ಸಂಪುಟ ವಿಸ್ತರಣೆ ಮಾಡುವುದರಿಂದ ಹೊಸಬರು ಮುಂದಿನ ಚುನಾವಣೆಗೆ ಹಣ ಮಾಡಿಕೊಳ್ತಾರೆ. ಮೈಸೂರು ಜಿಲ್ಲೆಯಿಂದ ಒಬ್ಬ ಮಂತ್ರಿಯೂ ಇಲ್ಲ. ಬಿಜೆಪಿಯ ಹಿರಿಯ ರಾಜಕಾರಣಿಯಾದ ರಾಮದಾಸ್ ಇದ್ದಾರೆ, ಜೊತೆಗೆ ನಾಗೇಂದ್ರರವರು ಇದ್ದಾರೆ. ಒಬ್ಬರಿಗೆ ಕ್ಯಾಬಿನೆಟ್ನಲ್ಲಿ, ಇನ್ನೊಬ್ಬರಿಗೆ ಮಂತ್ರಿ ಸ್ಥಾನ ನೀಡಿ ಎಂದು ಸಲಹೆ ನೀಡಿದರು.
ಕೆ.ಆರ್.ನಗರದಿಂದ ಸ್ಪರ್ಧೆ ಮಾಡಲ್ಲ: 2023ರ ಚುನಾವಣೆಯಲ್ಲಿ ನಾನಾಗಲೀ ಅಥವಾ ನನ್ನ ಕುಟುಂಬದಿಂದ ಯಾರೂ ಸಹ ಕೆ.ಆರ್.ನಗರದಿಂದ ಸ್ಪರ್ಧೆ ಮಾಡುವುದಿಲ್ಲ. ಕೆ.ಆರ್.ನಗರದಲ್ಲಿ ಕಾಂಗ್ರೆಸ್ನಿಂದ ರವಿಶಂಕರ್ ಇದ್ದಾರೆ, ಜೆಡಿಎಸ್ನ ಈಗಿನ ಶಾಸಕ ಸಾ.ರಾ.ಮಹೇಶ್ ಇದ್ದಾರೆ, ಅವರು ಸ್ಪರ್ಧೆ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ: ಎನ್‌ಇಪಿ 2020 ತತ್ವಶಾಸ್ತ್ರವಾಗಿದ್ದು, ಎನ್ಸಿಎಫ್ ಮಾರ್ಗವಾಗಿದೆ: ಸಚಿವ ಧರ್ಮೇಂದ್ರ ಪ್ರಧಾನ್