ETV Bharat / city

ಮೈಸೂರಿನಲ್ಲಿ ಇನ್​​ಸ್ಟಾಗ್ರಾಮ್​ ವಿಚಾರವಾಗಿ ವಾಗ್ವಾದ.. ಸ್ನೇಹಿತನನ್ನು ಕೊಂದೇಬಿಟ್ಟ ಕಿರಾತಕ - ಮೈಸೂರು ಅಪರಾಧ ಸುದ್ದಿ

ಇನ್ಸ್ಟಾಗ್ರಾಮ್ ವಿಚಾರವಾಗಿ ಸ್ನೇಹಿತರ ನಡುವೆ ವಾಗ್ವಾದ- ಮಾತಿಗೆ ಮಾತು ಬೆಳೆದು ಜಗಳ- ಓರ್ವ ಯುವಕನ ಕೊಲೆ

young man killed his friend in Mysore, Mysore crime news, Instagram clash between friends in Mysore, ಮೈಸೂರಿನಲ್ಲಿ ಗೆಳೆಯನನ್ನು ಕೊಂದ ಯುವಕ, ಮೈಸೂರು ಅಪರಾಧ ಸುದ್ದಿ, ಮೈಸೂರಿನಲ್ಲಿ ಸ್ನೇಹಿತರ ನಡುವೆ ಇನ್​ಸ್ಟಾಗ್ರಾಂ ವಾಗ್ವಾದ,
ಗೆಳೆಯ ಸಾವು
author img

By

Published : Jul 13, 2022, 11:41 AM IST

ಮೈಸೂರು: ಇನ್​ಸ್ಟಾಗ್ರಾಮ್​ ಪೋಸ್ಟ್​ನಿಂದ ಸ್ನೇಹಿತರ ನಡುವೆ ಉಂಟಾದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿರುವ ಪ್ರಕರಣ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಅಂಗಟಹಳ್ಳಿಯ ಕುಚೇಲೇಗೌಡರ ಪುತ್ರ ಬೀರೇಶ್ (23) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರಾದ ಗೋಕುಲ್ ರಸ್ತೆಯ ಕುಟ್ಟಿ ಜಿಮ್‌ನ ತರಬೇತುದಾರ ನಿತಿನ್ ಅಲಿಯಾಸ್ ವಠಾರ ಹಾಗೂ ಕಲ್ಕುಣಿಕೆಯ ಮನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಏನಿದು ಪ್ರಕರಣ: ನಿತಿನ್ ಬಗ್ಗೆ ಕೆಟ್ಟದಾಗಿ ಇನ್ಸ್ಟಾಗ್ರಾಮ್​ನಲ್ಲಿ ಬೀರೇಶ್ ಪೋಸ್ಟ್​ ಮಾಡಿದ್ದ ಎನ್ನಲಾಗ್ತಿದೆ. ಈ ಸುದ್ದಿ ಜಿಮ್​ ಟ್ರೈನರ್​ ನಿತಿನ್​ಗೆ ತಿಳಿದಿದೆ. ಇದರಿಂದ ಕೋಪಗೊಂಡ ನಿತಿನ್, ತನ್ನ ಸ್ನೇಹಿತ ಮನು ಜೊತೆ ಬೈಕಿನಲ್ಲಿ ಬೀರೇಶ್‌ನನ್ನು ಕರೆದೊಯ್ದಿದ್ದಾರೆ. ಎಪಿಎಂಸಿ ಬಳಿಯ ಬೈಪಾಸ್ ರಸ್ತೆಯಲ್ಲಿ ಈ ಪೋಸ್ಟ್​ ಬಗ್ಗೆ ಬೀರೇಶ್​ಗೆ ನಿತಿನ್​ ಪ್ರಶ್ನಿಸಿದ್ದಾನೆ. ತಾನು ಈ ಪೋಸ್ಟ್​ ಮಾಡಿಲ್ಲ ಎಂಬುದು ಬೀರೇಶ್ ವಾದವಾಗಿತ್ತು. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಓದಿ: ಹೆತ್ತ ಮಕ್ಕಳ ಮುಂದೇಯೇ ನೇಣಿಗೆ ಶರಣಾದರಾ ತಾಯಿ? : ಕೊಲೆ ಎಂದು ದೂರು ನೀಡಿದ ಕುಟುಂಬಸ್ಥರು

ಇದು ಹೇಗಾಗಿದೆ ಗೊತ್ತಿಲ್ಲ ಎನ್ನುತ್ತಿದ್ದಂತೆ ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಬೆನ್ನು, ಕುತ್ತಿಗೆ ಬಾಗಕ್ಕೆ ನಿತಿನ್ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಜೋರಾಗಿ ಕೂಗಿಕೊಂಡಾಗ ಅಲ್ಲಿದ್ದ ಮರದ ವ್ಯಾಪಾರಿಯೊಬ್ಬರು ಆತನ ರಕ್ಷಣೆಗೆ ಬಂದಿದ್ದಾರೆ. ಆ ವ್ಯಾಪಾರಿಯನ್ನು ನೋಡಿದ ನಿತಿನ್​ ಮತ್ತು ಮನು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕೂಡಲೇ ಆ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಿರೇಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶಿಫ್ಟ್​ ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಬೀರೇಶ್​ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.