ಜುಬಿಲಂಟ್ಗೆ ಬಂದು ಮಾಹಿತಿ ಸಂಗ್ರಹಿಸಿದ ಕೇಂದ್ರ ಆರೋಗ್ಯ ಅಧಿಕಾರಿಗಳ ವಿಶೇಷ ತಂಡ - ಕೇಂದ್ರದ ಆರೋಗ್ಯ ಇಲಾಖೆ ತಂಡ ಜುಬಿಲಂಟ್ ಕಾರ್ಖಾನೆಗೆ ಭೇಟಿ
ಮೈಸೂರಿನ ಜುಬಿಲಂಟ್ ಕಾರ್ಖಾನೆಗೆ ಕೊರೊನಾ ಸೋಂಕು ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಕೇಂದ್ರದಿಂದ ಉನ್ನತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.

ಮೈಸೂರು: ಜುಬಿಲಂಟ್ ಕಾರ್ಖಾನೆಗೆ ಕೊರೊನಾ ಸೋಂಕು ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ಕೇಂದ್ರದ ಆರೋಗ್ಯ ಇಲಾಖೆಯ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ಮೈಸೂರಿನಲ್ಲಿ ಕೊರೊನಾ ಹಾಟ್ಸ್ಪಾಟ್ಗೆ ಕಾರಣವಾಗಿರುವ ಜುಬಿಲಂಟ್ ಕಾರ್ಖಾನೆಗೆ ಕೊರೊನಾ ಸೋಂಕು ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಕೇಂದ್ರದಿಂದ ಉನ್ನತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಕಾರ್ಖಾನೆಯಿಂದ ಕೊರೊನಾ ಸೋಂಕು ಹರಡಿರುವ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದು, ಅಧಿಕಾರಿಗಳು ಜುಬಿಲಂಟ್ ಕಾರ್ಖಾನೆಗೆ ಬಂದು ಇಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇನ್ನು ಈ ತಂಡದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಫಿಜಿಷಿಯನ್, ಮೈಕ್ರೋ ಬಯೋಲಜಿಸ್ಟ್, ಅನೆಸ್ತೇಷಿಯನ್ ಸೇರಿ ಇನ್ನಿತರೆ ಉನ್ನತ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎರಡು ದಿನಗಳ ಕಾಲ ಮಾಹಿತಿ ಸಂಗ್ರಹಿಸಿದ್ದು, ಕೇಂದ್ರದ ಆರೋಗ್ಯ ಇಲಾಖೆಗೆ ವರದಿ ನೀಡಲಿದೆ. ಜುಬಿಲಂಟ್ ಕಾರ್ಖಾನೆಯ ಬೇರೆ ಬೇರೆ ಶಾಖೆಗಳು ದೇಶದ ಹಲವು ಭಾಗದಲ್ಲಿದ್ದು, ಕೊರೊನಾ ಸೋಂಕು ಹೇಗೆ ಹರಡಿತು ಎಂಬ ಕುರಿತು ಸದ್ಯದಲ್ಲೇ ತಿಳಿಯಲಿದೆ.