ETV Bharat / city

ಮೈಸೂರಿನಲ್ಲಿ ಮನಕಲಕುವ ಘಟನೆ: ಚಿಕಿತ್ಸೆಗೆಂದು ಕರೆತಂದು ತಾಯಿ ಬಿಟ್ಹೋದ ಮಗಳು!

ಸ್ಥಳೀಯರು ವೃದ್ಧೆಯನ್ನು(Older woman) ಅಂತರಸಂತೆ ಪೊಲೀಸ್​ ಠಾಣೆಗೆ(Police station) ಕರೆತಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸರ ನೆರವಿನೊಂದಿಗೆ ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಸತಿ ನಿಲಯಕ್ಕೆ ದಾಖಲಿಸಲಾಗಿದೆ.

mysore aged mother
ವೃದ್ಧ ತಾಯಿ ಲಕ್ಷ್ಮಮ್ಮ
author img

By

Published : Nov 12, 2021, 1:41 PM IST

ಮೈಸೂರು: ವೃದ್ಧ ತಾಯಿಯನ್ನು (Older woman) ಚಿಕಿತ್ಸೆಗೆಂದು(Treatment) ಕರೆತಂದ ಮಗಳು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಹೆಚ್.ಡಿ.ಕೋಟೆಯ ಅಂತರಸಂತೆ‌ ಬಳಿ ಶುಕ್ರವಾರ ನಡೆದಿದೆ.

ವೃದ್ಧೆಯ ಹೆಸರು ಲಕ್ಷ್ಮಮ್ಮ ಎನ್ನಲಾಗಿದ್ದು, ಅವರ ಕೈ ಮೇಲೆ ಗೌರಮ್ಮ ಎಂಬ ಹಚ್ಚೆ ಇದೆ. ಅಂತರಸಂತೆಯ ನಿರ್ಜನ ಪ್ರದೇಶದಲ್ಲಿ ಕುಳಿತಿದ್ದ ವೃದ್ಧೆಯನ್ನು ಕಂಡ ದಾರಿಹೋಕರೊಬ್ಬರು ಆಕೆಯನ್ನು ವಿಚಾರಿಸಿದ್ದಾರೆ. ನಾನು ಮೈಸೂರಿನವಳು, ಮಗಳು ಮತ್ತು ಅಳಿಯ ನನ್ನನ್ನು ಆಸ್ಪತ್ರೆಗೆಂದು ಕರೆತಂದು ಇಲ್ಲಿ ಇರಲು ತಿಳಿಸಿದ್ದಾರೆ. ಅವರಿಗಾಗಿ ಕಾದಿದ್ದೇನೆ ಎಂದು ತಿಳಿಸಿದ್ದಾರೆ.

ಬಳಿಕ ಸ್ಥಳೀಯರು ಅವರನ್ನು ಅಂತರಸಂತೆ ಪೊಲೀಸ್​ ಠಾಣೆಗೆ ಕರೆತಂದಿದ್ದಾರೆ. ಇದೀಗ ವೃದ್ಧೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸರ ನೆರವಿನೊಂದಿಗೆ ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಸತಿ ನಿಲಯಕ್ಕೆ ದಾಖಲು ಮಾಡಲಾಗಿದೆ.

ಊಟ ಸಹ ಮಾಡಲಾಗದ ಸ್ಥಿತಿಯಲ್ಲಿ ವೃದ್ಧೆ ಇದ್ದು, ತನಗೆ ಆಟೋ ಮಾಡಿ ಮನೆಗೆ ಕಳುಹಿಸಿಕೊಡಿ ಎಂದು‌ ಕೇಳುತ್ತಿದ್ದದ್ದು ಎಲ್ಲರ ಮನ ಕಲಕುವಂತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.