ETV Bharat / city

ಮೈಸೂರು: ಕೇಕ್ ತರಲು ಹೋಗಿ ಹುಟ್ಟುಹಬ್ಬದಂದೇ ಜವರಾಯನ ಅಟ್ಟಹಾಸಕ್ಕೆ ಬಾಲಕ ಬಲಿ! - Mysore Latest News

ಹುಟ್ಟುಹಬ್ಬಕ್ಕೆ ಕೇಕ್ ತರಲೆಂದು ಹೋಗಿದ್ದ ಬಾಲಕನೋರ್ವ ಅಪಘಾತದಲ್ಲಿ ಮೃತಪಟ್ಟ ಘಟನೆ ಮೈಸೂರಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂತಸದಿಂದ ಇರಬೇಕಿದ್ದ ಮನೆಯಲ್ಲೀಗ ದುಃಖ ಮಡುಗಟ್ಟಿದೆ.

a-boy-death-in-road-accident
ಕೇಕ್ ತರಲು ಹೋಗಿ ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ಬಾಲಕ!
author img

By

Published : Feb 1, 2021, 1:13 PM IST

ಮೈಸೂರು: ಹುಟ್ಟುಹಬ್ಬಕ್ಕೆ ಕೇಕ್ ತರಲೆಂದು ಹೋಗಿದ್ದ ಬಾಲಕನೋರ್ವ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೈಸೂರಿನ ಸುಣ್ಣದಕೇರಿ ನಿವಾಸಿ ನಂದೀಶ್ ಮತ್ತು ಶಿವಮ್ಮ ದಂಪತಿ ಪುತ್ರ ಚಂದನ್‌ (14) ಮೃತ ಬಾಲಕ. ಇಂದು ಚಂದನ್ ಹುಟ್ಟುಹಬ್ಬವಾದ ಹಿನ್ನೆಲೆ, ಕೇಕ್​ ತರಲೆಂದು ತಾನೇ ಬೈಕ್​ನಲ್ಲಿ ಬೇಕರಿಗೆ ತೆರಳಿದ್ದಾನೆ. ಈ ವೇಳೆ ಜೀಪ್ ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಚಂದನ್ ಮೈಸೂರಿನ ಅಗ್ರಹಾರ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀಕೃಷ್ಣ ಲಲಿತಾ ಕಲಾಮಂದಿರ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಜಯಪುರ ಸಮೀಪದ ಬೆಟ್ಟದಬೀಡು ಗ್ರಾಮದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಾಗ ಈ ಅಪಘಾತ ನಡೆದಿದೆ.

ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಮಂಡ್ಯದಲ್ಲಿ ಶಿಕ್ಷಕ ಅರೆಸ್ಟ್​

ಕೂಡಲೇ ಸ್ಥಳಕ್ಕಾಗಮಿಸಿದ ಜಯಪುರ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಮಗ ಹುಟ್ಟುಹಬ್ಬದಂದು ಧರಿಸಬೇಕಿದ್ದ ಹೊಸ ಬಟ್ಟೆ ಹಿಡಿದು ಆತನ ತಾಯಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಅಪಘಾತ ಸಂಬಂಧ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.