ETV Bharat / city

ಯುವದಸರಾದಲ್ಲಿ ದುರ್ಗೆಯಾಗಿ ಮಿಂಚಿದ ರಾಧಿಕಾ ಕುಮಾರಸ್ವಾಮಿ, ಚಕ್ರವರ್ತಿ ಹಾಡಿಗೆ ಚಿಂದಿ ಉಡಾಯ್ಸಿದ ಜನ - youth dasara

ಯುವ ದಸರಾ ಕೊನೆ ದಿನವಾದ ಭಾನುವಾರ‌ ಕನ್ನಡ ಚಿತ್ರರಂಗದ ತಾರೆಯರಾದ ರಮೇಶ್ ಅರವಿಂದ್ ಹಾಗೂ ರಾಧಿಕಾ ಕುಮಾರಸ್ವಾಮಿ ಆಗಮಿಸಿದ್ದು,ವಿವಿಧ ಕಾರ್ಯಕ್ರಮಗಳ ಮೂಲಕ ಯುವ ದಸರಾ ವೇದಿಕೆಗೆ ಅದ್ಧೂರಿ ಬೀಳ್ಕೊಡಿಗೆ ನೀಡಲಾಯಿತು.

ದಸರಾ ಮಹೋತ್ಸವ...ಯುವ ದಸರಾ ವೇದಿಕೆಗೆ ಅದ್ಧೂರಿ ಬೀಳ್ಕೊಡಿಗೆ
author img

By

Published : Oct 7, 2019, 7:33 AM IST

ಮೈಸೂರು: ಯುವ ದಸರಾ ಕೊನೆ ದಿನವಾದ ಭಾನುವಾರ‌ ಕನ್ನಡ ಚಿತ್ರರಂಗದ ತಾರೆಯರಾದ ರಮೇಶ್ ಅರವಿಂದ್ ಹಾಗೂ ರಾಧಿಕಾ ಕುಮಾರಸ್ವಾಮಿ ಆಗಮಿಸಿದ್ದು,ವಿವಿಧ ಕಾರ್ಯಕ್ರಮಗಳ ಮೂಲಕ ಯುವ ದಸರಾ ವೇದಿಕೆಗೆ ಅದ್ಧೂರಿ ಬೀಳ್ಕೊಡಿಗೆ ನೀಡಲಾಯಿತು.

ದಸರಾ ಮಹೋತ್ಸವ...ಯುವ ದಸರಾ ವೇದಿಕೆಗೆ ಅದ್ಧೂರಿ ಬೀಳ್ಕೊಡಿಗೆ

ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ಭಾನುವಾರ ಅಂತಿಮ ‌ದಿನದ ಯುವ ದಸರಾ ವೇದಿಕೆಯಲ್ಲಿ ರಾಧಿಕಾ ಕುಮಾರಸ್ವಾಮಿಯವರ ಭೈರಾದೇವಿ‌ ಸಿನಿಮಾದ ಪ್ರಚಾರ ಹಾಗೂ ಅದೇ ಸಿನಿಮಾದ ಒಂದು‌ ಹಾಡಿಗೆ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ನಡೆಯಿತು.

ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕರಾದ ಪ್ರೀತಮ್ ಚಕ್ರವರ್ತಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಧೂಮ್ ಮಚಾಲೆ, ಕ್ರೇಜಿ ಕಿ ಯಾರೆ, ಮನಮ ಎಮೋಶನ್ ಜಾಗೇರೆ, ಹರೇ ರಾಮ ಹರೇ ಕೃಷ್ಣ, ಹೇ ದಿಲ್ ಹೈ ಮುಸ್ಕಿಲ್, ಮೇರಾ ತೂ ಮೇರಾ, ಹಾಡು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ರು.

ಯುವ ಸಂಭ್ರಮದಿಂದ ಆಯ್ಕೆಯಾದ ಅತ್ಯುತ್ತಮ ತಂಡಗಳಾದ ಮೇಟಗಳ್ಳಿಯ ಪೂಜಾ ಭಾಗವತ್ ಮಹಾಜನ್ ಸ್ನಾತಕೋತ್ತರ ಕಾಲೇಜು, ಕೊಡಗು ಜಿಲ್ಲೆಯ ನಾಪೊಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ಕೆ.ಎಂ.ದೊಡ್ಡಿಯ ರೆಬೆಲ್ಸ್ ಡ್ಯಾನ್ಸ್ ಅಕಾಡೆಮಿ ಮತ್ತು ಡಿ2 ಡ್ಯಾನ್ಸ್ ಅಕಾಡೆಮಿ ಮೈಸೂರು ಅವರ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರು ಬೆರಗಾದರು. ಮೈಸೂರಿನ ಭರತ್ ಮತ್ತು ತಂಡದಿಂದ ಫ್ಯಾಷನ್ ಶೋ,ಮೈಸೂರಿನ ಯುವ ಡ್ಯಾನ್ಸ್ ಅಕಾಡೆಮಿ ಇವರಿಂದ ನೃತ್ಯ ಪ್ರದರ್ಶನ, ಮೈಸೂರಿನ ನಿರಂತರ ಹಾಗೂ ರಾಜೇಶ್ ಮತ್ತು ತಂಡದಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಮೈಸೂರಿನ ಗುಬ್ಬಿ ಮತ್ತು ತಂಡದಿಂದ ಸಂಗೀತ ರಸ ಸಂಜೆಯಲ್ಲಿ‌ ಗಾಯನ ಸುಧೆ ನಡೆಯಿತು. ಬೆಂಗಳೂರಿನ ಸ್ವಾಹ ಲಿಕ್ವಿಡ್ ಡ್ರಮ್ಸ್ ಅವರಿಂದ ವಾದ್ಯಗೋಷ್ಠಿ ಕಾರ್ಯಕ್ರಮ, ಮುಂಬೈನ ಕಿಂಗ್ಸ್ ಯುನೈಟೆಡ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಹಾಗೂ ಅವರ ಪತ್ನಿ ಅವರಿಗೆ ಯುವ ದಸರಾ ಉಪ‌ ಸಮಿತಿಯಿಂದ ಸನ್ಮಾನ ಮಾಡಲಾಯಿತು.

Intro:ಯುವದಸರಾBody:ಯುವ ದಸರಾ ವೇದಿಕೆಗೆ ಅದ್ದೂರಿ ಬೀಳ್ಕೊಡುಗೆ

ಮೈಸೂರು: ಯುವ ದಸರಾ ಕೊನೆ ದಿನದಲ್ಲಿ‌ ಕನ್ನಡ ಚಿತ್ರರಂಗದ ತಾರೆಯರಾದ ರಮೇಶ್ ಅರವಿಂದ್ ಹಾಗೂ ರಾಧಿಕಾ ಕುಮಾರಸ್ವಾಮಿ ಆಗಮನದಿಂದ ಭರ್ಜರಿ ಮನರಂಜನೆಯಿಂದ ಯುವ ಸಮೂಹ‌ ಸಂಭ್ರಮಿಸಿತು.

ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ಭಾನುವಾರ ಅಂತಿಮ ‌ದಿನದ  ಯುವ ದಸರಾ ವೇದಿಕೆಯಲ್ಲಿ ರಾಧಿಕಾ ಕುಮಾರಸ್ವಾಮಿಯವರ ಭೈರಾದೇವಿ‌ ಸಿನಿಮಾದ ಪ್ರಚಾರ ಹಾಗೂ ಅದೇ ದಿನಿಮಾದ ಒಂದು‌ ಹಾಡಿಗೆ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ನಡೆಯಿತು.

ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕರಾದ ಪ್ರೀತಮ್ ಚಕ್ರವರ್ತಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಿಂದಿ ಗಾಯಕರಿಂದ ಧೂಮ್ ಮಚಾಲೆ, ಕ್ರೇಜಿ ಕಿ ಯಾರೆ, ಮನಮ ಎಮೋಶನ್ ಜಾಗೇರೆ, ಹರೇ ರಾಮ ಹರೇ ಕೃಷ್ಣ,  ಹೇ ದಿಲ್ ಹೈ ಮುಸ್ಕಿಲ್, ಮೇರಾ ತೂ ಮೇರಾ, ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಯುವ ಸಂಭ್ರಮದಿಂದ ಆಯ್ಕೆಯಾದ ಅತ್ಯುತ್ತಮ ತಂಡಗಳಾದ ಮೆಟಗಳ್ಳಿಯ ಪೂಜಾ ಭಾಗವತ್ ಮಹಾಜನ್ ಸ್ನಾತಕೋತ್ತರ ಕಾಲೇಜು, ಕೊಡಗು ಜಿಲ್ಲೆಯ ನಾಪೊಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ಕೆ.ಎಂ.ದೊಡ್ಡಿಯ ರೆಬೆಲ್ಸ್ ಡ್ಯಾನ್ಸ್ ಅಕಾಡೆಮಿ ಮತ್ತು ಡಿ 2 ಡ್ಯಾನ್ಸ್ ಅಕಾಡೆಮಿ ಮೈಸೂರು ಇವರಿಂದ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರು ಬೆರಗಾದರು.  ಮೈಸೂರಿನ ಭರತ್ ಮತ್ತು ತಂಡದಿಂದ ಫ್ಯಾಷನ್ ಶೋ, ಮೈಸೂರಿನ ಯುವ ಡ್ಯಾನ್ಸ್ ಅಕಾಡೆಮಿ ಇವರಿಂದ ನೃತ್ಯ ಪ್ರದರ್ಶನ, ಮೈಸೂರಿನ ನಿರಂತರ ಹಾಗೂ ರಾಜೇಶ್ ಮತ್ತು ತಂಡದಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೈಸೂರಿನ ಗುಬ್ಬಿ ಮತ್ತು ತಂಡದಿಂದ ಸಂಗೀತ ರಸ ಸಂಜೆಯಲ್ಲಿ‌ ಮೈಸೂರಿನ ಬಯುವ ಗಾಯಕರಿಂದ ಹಲವಾರು ಗಾಯನ ಸುಧೆ ನಡೆಯಿತು. ಬೆಂಗಳೂರಿನ ಸ್ವಾಹ ಲಿಕ್ವಿಡ್ ಡ್ರಮ್ಸ್ ಅವರಿಂದ ವಾದ್ಯ ಗೋಷ್ಠಿ ಕಾರ್ಯಕ್ರಮ, ಮುಂಬೈನ ಕಿಂಗ್ಸ್ ಯುನೈಟೆಡ್ ತಂಡದಿಂದ ನೃತ್ಯ ಪ್ರದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಹಾಗೂ ಅವರ ಪತ್ನಿ ಅವರಿಗೆ ಯುವ ದಸರಾ ಉಪ‌ ಸಮಿತಿಯಿಂದ ಸನ್ಮಾನ ಮಾಡಲಾಯಿತು.Conclusion:ಯುವದಸರಾ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.