ETV Bharat / city

ಜುಬಿಲಂಟ್ ಕಾರ್ಖಾನೆಯಿಂದ 68 ಕೊರೊನಾ ಪಾಸಿಟಿವ್​ ಪ್ರಕರಣಗಳು: ಜಿಲ್ಲಾಧಿಕಾರಿ ಸ್ಪಷ್ಟನೆ - ಜುಬಿಲೆಂಟ್ ಕಾರ್ಖಾನೆ

ಮೈಸೂರು ಜಿಲ್ಲೆಯಲ್ಲಿ ಒಟ್ಟು 84 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿದ್ದು,ಅದರಲ್ಲಿ 68 ಜುಬಿಲಂಟ್​ ಕಾರ್ಖಾನೆಯಿಂದಲೇ ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.

68 Corona Positive Cases From Jubilant Factory: District Collector Clarified
ಜುಬಿಲೆಂಟ್ ಕಾರ್ಖಾನೆಯಿಂದ 68 ಕೊರೊನಾ ಪಾಸಿಟಿವ್​ ಪ್ರಕರಣಗಳು: ಜಿಲ್ಲಾಧಿಕಾರಿ ಸ್ಪಷ್ಟನೆ
author img

By

Published : Apr 20, 2020, 4:22 PM IST

ಮೈಸೂರು: ಜಿಲ್ಲೆಯ 84 ಕೊರೊನಾ ಪ್ರಕರಣಗಳಲ್ಲಿ ಜುಬಿಲಂಟ್​ ಕಾರ್ಖಾನೆಯಿಂದಲೇ 68 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.

ಜುಬಿಲಂಟ್ ಕಾರ್ಖಾನೆಯಿಂದ 68 ಕೊರೊನಾ ಪಾಸಿಟಿವ್​ ಪ್ರಕರಣಗಳು: ಜಿಲ್ಲಾಧಿಕಾರಿ ಸ್ಪಷ್ಟನೆ

ಇಂದು ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಿರಾಶ್ರಿತರಿಗೆ 18 ಲಕ್ಷ ಮೌಲ್ಯದ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಲ್ಲಿಯವರೆಗೆ ಮೈಸೂರು ಹಾಗೂ ನಂಜನಗೂಡು ಸೇರಿದಂತೆ ಪ್ರಾಥಮಿಕ ಸಂಪರ್ಕ ಪಡೆದ 473 ಜನರನ್ನ ಹಾಗೂ ಸೆಕೆಂಡರಿ ಸಂಪರ್ಕ ಪಡೆದ 1,671 ಜನರನ್ನ ಗುರುತಿಸಿ ಕ್ವಾರಂಟೈನ್​ನಲ್ಲಿ ಇಟ್ಟಿದ್ದೇವೆ. ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನ ಹೋಟೆಲ್ ಮತ್ತು ಲಾಡ್ಜ್​ನಲ್ಲಿ ಇರಿಸಿದ್ದೇವೆ.

ಇಲ್ಲಿಯವರೆಗೆ ಜುಬಿಲಂಟ್ ಕಾರ್ಖಾನೆಗೆ ಸಂಬಂಧಿಸಿದ 2,098 ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದ 1,960 ಜನರನ್ನ ಟೆಸ್ಟ್ ಮಾಡಿದ್ದೇವೆ. ಅದರಲ್ಲಿ 68 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರೆಲ್ಲಾ ಜುಬಿಲಂಟ್​ ಕಾರ್ಖಾನೆಯ ನೌಕರರು ಹಾಗೂ ಅವರ ಸಂಬಂಧಿಕರು. ಜುಬಿಲಂಟ್ ಕಾರ್ಖಾನೆಗೆ ಸಂಬಂಧಿಸಿದಂತೆ 138 ಇನ್ನು ಜನರಿಗೆ ಮಾತ್ರ ಟೆಸ್ಟ್ ಮಾಡಬೇಕಾಗಿದ್ದು,ಅದು ಇಂದು ನಡೆಯುತ್ತದೆ ಎಂದರು.

ಕಂಟೇನ್ಮೆಂಟ್ನ್ ಜೋನ್​ ಹೊಸದಾಗಿ ರಚನೆ ಮಾಡಲು ಸಿದ್ದತೆ ನಡೆಯುತ್ತಿದ್ದು, ಇದರ ಬಗ್ಗೆ ಇಂದು ಸರ್ಕಾರದ ಜೊತೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಗುತ್ತಿದೆ. ಜೊತೆಗೆ ಸಿಟಿಯಲ್ಲಿ 200 ರಿಂದ 130 ಮೀಟರ್ ಸುತ್ತಳತೆಯಲ್ಲಿ ಬ್ಯಾರಿಕೇಡ್ ಮಾಡಿ ಯಾವುದೇ ಜನ ಓಡಾಡದಂತೆ ಮಾಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.