ETV Bharat / city

ಹಸಿ ಕಸ, ಒಣ ಕಸ ವಿಂಗಡಿಸಿ.. ಇಲ್ಲದಿದ್ರೆ ದಂಡ ಕಟ್ಟಿ: ಮಂಗಳೂರಿಗರಿಗೆ ಮೇಯರ್ ಎಚ್ಚರಿಕೆ

ಮಂಗಳೂರು ನಗರ ಪಾಲಿಕೆಯಲ್ಲಿ ಹಿಂದಿನಿಂದಲೂ ಹಸಿ ಕಸ, ಒಣ ಕಸ ವಿಂಗಡಿಸಿ ನೀಡುವಂತೆ ವಿನಂತಿಸಲಾಗಿತ್ತು. ಆದರೆ ಅದನ್ನು ಜನರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ಮಹಾನಗರ ಪಾಲಿಕೆ ಈಗ ಜನರಿಗೆ ದಂಡದ ಎಚ್ಚರಿಕೆ ರವಾನಿಸಿದೆ.

Mangalore city
ಮಂಗಳೂರು
author img

By

Published : May 22, 2021, 9:17 AM IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹದ ಮೂಲದಿಂದಲೇ ಇದನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ ಮಂಗಳೂರಿನಲ್ಲಿ ಇನ್ನು ಮುಂದೆ ಕಸ ನೀಡುವಾಗಲೇ ಹಸಿ ಕಸ, ತ್ಯಾಜ್ಯ ಕಸ ವಿಂಗಡಿಸದಿದ್ದರೆ ದಂಡ ವಿಧಿಸಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಮಂಗಳೂರಿನಲ್ಲಿ ಪ್ರತಿದಿನ 270 ಟನ್​ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಕಾರ್ಯವನ್ನು ಪಚ್ಚನಾಡಿ ತ್ಯಾಜ್ಯ ಡಂಪಿಂಗ್ ಯಾರ್ಡ್​ನಲ್ಲಿ ಮಾಡಲಾಗುತ್ತದೆ. ಆದರೆ ಡಂಪಿಂಗ್ ಯಾರ್ಡ್ ಸಿಬ್ಬಂದಿ, ತ್ಯಾಜ್ಯ ಸಂಗ್ರಹಕ್ಕೆ ಬರುವ ಸಿಬ್ಬಂದಿ ಕೋವಿಡ್ ಸೇರಿದಂತೆ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೊರೊನಾ ಸೋಂಕಿತರು ಹೋಂ ಐಸೋಲೇಶನ್​ನಲ್ಲಿ ಬಳಸಿದ ತ್ಯಾಜ್ಯವನ್ನು ಇದರೊಂದಿಗೆ ನೀಡುವ ಕಾರಣದಿಂದ ಡಂಪಿಂಗ್ ಯಾರ್ಡ್ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ.

ಡಂಪಿಂಗ್ ಯಾರ್ಡ್​ನಲ್ಲಿ ಹಸಿ ಕಸ, ಒಣ ಕಸ ವಿಂಗಡನೆ ಮಾಡುವ ಬದಲಿಗೆ ಕಸ ಸಂಗ್ರಹ ಮಾಡುವಾಗಲೇ ಇದನ್ನು ವಿಂಗಡಿಸಿ ನೀಡುವುದನ್ನು ಕಡ್ಡಾಯ ಮಾಡಿದೆ. ಒಂದು ವೇಳೆ ಕಸ ವಿಂಗಡನೆ ಮಾಡಿ ನೀಡದಿದ್ದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿಂದಿನಿಂದಲೂ ಹಸಿ ಕಸ, ಒಣ ಕಸ ವಿಂಗಡಿಸಿ ನೀಡುವಂತೆ ವಿನಂತಿಸಲಾಗಿತ್ತು. ಆದರೆ ಅದನ್ನು ಜನರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದಕ್ಕಾಗಿ ಇದೀಗ ಕಟ್ಟುನಿಟ್ಟಾಗಿ ಇದನ್ನು ಮಾಡಲಾಗುತ್ತಿದೆ. ಈ ಮೂಲಕ ಜನರು ಪರಿಸರಕ್ಕೂ ಪೂರಕವಾದ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳುತ್ತಾರೆ.

ಪಾಲಿಕೆಯಲ್ಲಿ ಹಸಿ ಕಸ, ಒಣ ಕಸ ವಿಂಗಡನೆ ಮಾಡಿ ನೀಡುವಂತೆ ಹಿಂದಿನಿಂದಲೂ ಸೂಚಿಸಲಾಗಿತ್ತು. ಆದರೆ ಅದಕ್ಕೆ ಜನರು ಸಹಕರಿಸದೆ ಇರುವುದರಿಂದ ದಂಡ ಪ್ರಯೋಗಕ್ಕೆ ನಿರ್ಧರಿಸಲಾಗಿದೆ. ಇನ್ನಾದ್ರೂ ಮಂಗಳೂರು ಜನತೆ ಹಸಿ ಕಸ , ಒಣ ಕಸ ವಿಂಗಡನೆ ಮಾಡಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಮಂಗಳೂರು: 7 ಮಂದಿಯಲ್ಲಿ ಬ್ಲಾಕ್​ ಫಂಗಸ್ ಪ್ರಕರಣ ಪತ್ತೆ, ಓರ್ವ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.