ETV Bharat / city

ಮರಳುಗಾರಿಕೆ ದೋಣಿ ಮಗುಚಿ ಉತ್ತರ ಪ್ರದೇಶದ ಕಾರ್ಮಿಕ ನಾಪತ್ತೆ

author img

By

Published : Jul 3, 2022, 2:25 PM IST

ನಿನ್ನೆ ಮಧ್ಯಾಹ್ನ ಅರ್ಕುಳ ಗ್ರಾಮದ ನೇತ್ರಾವತಿ ನದಿಯಲ್ಲಿ ಶಶಿರಾಜ್ ಎಂಬವರ ಧಕ್ಕೆಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾಗ ಘಟನೆ ನಡೆದಿದೆ.

Uttar Pradesh laborer goes missing after sand dredging boat capsizes
ಮರಳುಗಾರಿಕಾ ದೋಣಿ ಮಗುಚಿ ಉತ್ತರ ಪ್ರದೇಶದ ಕಾರ್ಮಿಕ ನಾಪತ್ತೆ

ಮಂಗಳೂರು: ನಗರದ ಹೊರವಲಯದ ಅರ್ಕುಳ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಉತ್ತರಪ್ರದೇಶ ಮೂಲದ ಕಾರ್ಮಿಕ ನಾಪತ್ತೆಯಾಗಿದ್ದಾನೆ. ಮರಳುಗಾರಿಕೆಯಲ್ಲಿ ನಿರತರಾಗಿದ್ದ ಮತ್ತಿಬ್ಬರು ಕಾರ್ಮಿಕರು ಪಾರಾಗಿದ್ದಾರೆ. ಉತ್ತರ ಪ್ರದೇಶ ಮೂಲದ ರಾಜು ಸಾಹ್ ನಾಪತ್ತೆಯಾದ ಕಾರ್ಮಿಕ.

ನಿನ್ನೆ ಮಧ್ಯಾಹ್ನ ನದಿಯಲ್ಲಿ ಶಶಿರಾಜ್ ಎಂಬವರ ಧಕ್ಕೆಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾಗ ಘಟನೆ ನಡೆದಿದೆ. ವಿಪರೀತ ಮಳೆಯ ಕಾರಣ ನದಿಯಲ್ಲಿ ನೆರೆ ನೀರು ತುಂಬಿದ ಹಿನ್ನೆಲೆಯಲ್ಲಿ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರು ಮರಳುಗಾರಿಕಾ ದೋಣಿಯನ್ನು ದಡಕ್ಕೆ ತರುತ್ತಿದ್ದರು. ಆದರೆ, ನದಿನೀರಿನ ರಭಸ ಹೆಚ್ಚಾಗಿ ದೋಣಿ ಸಹಿತ ಮೂವರೂ ಕೊಚ್ಚಿಕೊಂಡು ಹೋಗಿದ್ದಾರೆ.

ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಅಡ್ಯಾರ್ ಪಾವೂರು ಸೇತುವೆಯಡಿಯಲ್ಲಿ ಸಿಲುಕಿ ಈಜಿ ದಡ ಸೇರಿ ಪಾರಾದರು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪತ್ನಿಯನ್ನು ನಿಂದಿಸಿದ್ದಕ್ಕೆ ಸಿಟ್ಟು.. ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಂದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.