ಮಂಗಳೂರು: ಜೂಜಾಟ ನಡೆಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 14 ಮಂದಿಯನ್ನು ಪೊಲೀಸರು ಬಂಧಿಸಿ, ನಗದು ಸಹಿತ ಸೊತ್ತು ವಶಪಡಿಸಿಕೊಂಡಿದ್ದಾರೆ.
ನಗರದ ಪಂಪ್ವೆಲ್ನಲ್ಲಿರುವ ಇಂಡಿಯಾನಾ ಆಸ್ಪತ್ರೆ ಬಳಿಯ ಎಂಐಒ ರಸ್ತೆಯಲ್ಲಿರುವ ಎ.ಬಿ ಟವರ್ಸ್ನಲ್ಲಿನ ಸ್ವೆವೆನ್ ಸ್ಟೇಸ್ ಎಂಬ ಲಾಡ್ಜ್ನ ಕೊಠಡಿ ಸಂಖ್ಯೆ 319ರಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿದ್ದ ಮಾಹಿತಿ ಮೆರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಕ್ರಮ ಜೂಜಾಟವಾಡುತ್ತಿದ್ದ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಕುಡುಪು ನಿವಾಸಿ ಅಕ್ಷಯ್(34), ತಾರೆ ತೋಟ ನಿವಾಸಿ ಶಶಿಕುಮಾರ್ (44), ತಲಪಾಡಿ ಕೆ.ಸಿ.ರೋಡ್ ನಿವಾಸಿ ಅಸೀಫ್ (40), ಕಲ್ಲಾಪು, ಪೆರ್ಮನ್ನೂರು ನಿವಾಸಿ ಅಶೋಕ್ ಡಿಸೋಜಾ(48), ವೆಲೆನ್ಸಿಯಾ, ಸಿಲ್ವಾ ಕ್ರಾಸ್ ರಸ್ತೆ ನಿವಾಸಿ ಕಾಶಿನಾಥ್(58), ಕಂಕನಾಡಿ, ಬಾಲಿಕಾಶ್ರಮ ರಸ್ತೆ ನಿವಾಸಿ ವಿ.ಬಶೀರ್(52), ಅಶೋಕ ನಗರ ನಿವಾಸಿ ಗುರುಪ್ರಸಾದ್(45), ಶಕ್ತಿನಗರ, ಕಾರ್ಮಿಕ ಕಾಲೋನಿ ನಿವಾಸಿ ಸುರೇಶ್(50), ಜೆಪ್ಪಿನ ಮೊಗರು, ತಂದೋಳಿಗೆ ಗುಡ್ಡೆ ನಾಗಬನದ ಬಳಿ ನಿವಾಸಿ ರಾಜಶೇಖರ ಅಲಿಯಾಸ್ ರಾಜ(47), ಜೆಪ್ಪಿನಮೊಗರು, ತಾರೆದೋಲ್ಯ, ಕೋರ್ದಬ್ಬು ದೈವಸ್ಥಾನದ ಬಳಿ ನಿವಾಸಿ ಅನಿಲ್ ಕುಮಾರ್(52), ಜೆಪ್ಪು ಮಜಿಲ ನಾಗಬನದ ಬಳಿ ನಿವಾಸಿ ಸುಧಾಕರ ಸನಿಲ್(52) ಬಂಧಿತ ಆರೋಪಿಗಳು.
ಆರೋಪಿಗಳಿಂದ 38 ಸಾವಿರ ರೂ. ನಗದು, ಇಸ್ಪೀಟ್ ಎಲೆಗಳು, 11 ಮೊಬೈಲ್ ಫೋನ್ಗಳು, ಆಟಕ್ಕೆ ಬಳಸಿದ ಪ್ಲಾಸ್ಟಿಕ್ ಟೇಬಲ್, ಕುರ್ಚಿ ಸೇರಿ ಅಂದಾಜು 1.29 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೇ, ನಗರದ ಹೊರವಲಯದಲ್ಲಿರುವ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಮಾರ್ಕೆಟ್ ಬಳಿ ಜೂಜಾಟದಲ್ಲಿ ತೊಡಗಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್(46), ಶ್ರೀನಿವಾಸ(46), ರಾಜೇಶ್(38) ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 28,410 ರೂ. ನಗದು, ಮೂರು ಮೊಬೈಲ್ ಫೋನ್, ಮಟ್ಕಾ ಬರೆದ ಚೀಟಿ ಸೇರಿ ಅಂದಾಜು 39,410 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.