ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 17 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಗುಣಮುಖರಾಗಿದ್ದಾರೆ.
ಇಂದು ಕೊರೊನಾ ದೃಢಪಟ್ಟ 17 ಮಂದಿಯಲ್ಲಿ 14 ಮಂದಿ ಸೌದಿ ಅರೇಬಿಯಾದಿಂದ ಬಂದವರು. ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದು, ಒಬ್ಬರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೌದಿ ಅರೇಬಿಯಾದಿಂದ ಜೂ. 5ರಂದು 12 ಮಂದಿ ಪುರುಷರು, ಜೂನ್ 8ರಂದು ಓರ್ವ ಪುರುಷ ಮತ್ತು ಜೂನ್ 10ರಂದು ಓರ್ವ ಪುರುಷ ಬಂದಿದ್ದರು. ಮುಂಬೈನಿಂದ ಜೂ. 9ರಂದು ಓರ್ವ ಪುರುಷ, ಜೂನ್ 8ರಂದು ಓರ್ವ ಮಹಿಳೆ ಆಗಮಿಸಿದ್ದರು.
ಇವರೆಲ್ಲರೂ ಕ್ವಾರಂಟೈನ್ನಲ್ಲಿದ್ದರು. ಜೂನ್ 7ರಂದು ಬೆಂಗಳೂರಿನಿಂದ ಆಗಮಿಸಿದ ಓರ್ವ ಪುರುಷನಿಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರೆಲ್ಲರಿಗೆ ಇಂದು ಕೊರೊನಾ ದೃಢಪಟ್ಟಿದೆ. ಇಂದು ನಾಲ್ಕು ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಇಂದು ಗುಣಮುಖರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 241 ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. 129 ಮಂದಿ ಗುಣಮುಖರಾಗಿದ್ದು, 105 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.