ಬಂಟ್ವಾಳ: ಟಿಕ್ ಟಾಕ್ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ಟಾಕ್ ಕಮಲಜ್ಜಿ ನಿನ್ನೆ ಸಂಜೆ ನಿಧನರಾದರು.
ಕಳೆದೊಂದು ವಾರದಿಂದ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಟಿಕ್ ಟಾಕ್ ಸ್ಟಾರ್ ಧನರಾಜ್ ಜೊತೆ ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬ ಟಿಕ್ಟಾಕ್ ಫ್ಯಾಮಿಲಿ ಎಂದೇ ಹೆಸರು ಪಡೆದಿತ್ತು.

ಇಳಿವಯಸ್ಸಿನಲ್ಲೂ ಕಮಲಜ್ಜಿ ಟಿಕ್ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದರು. ಪ್ರಸೂತಿ ತಜ್ಞೆಯಾಗಿದ್ದ ಇವರು, ಪರೋಪಕಾರ ಮನಸ್ಸಿನವರಾಗಿದ್ದರು.
ಮೃತರು ಆರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಬಂಧು-ಬಳಗ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.