ಮಂಗಳೂರು: ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬಂಟ್ವಾಳದ ಬಿ.ಸಿ. ರೋಡ್ನಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಅಸ್ವಚ್ಛತೆಯಿಂದ ಕೂಡಿವೆ. ಸಂಕೀರ್ಣದ ಮೇಲ್ಭಾಗದಲ್ಲಿ ಪಾಚಿ ಕಟ್ಟಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ.
ಇಲ್ಲಿ ನ್ಯಾಯಾಲಯ ಸಂಕೀರ್ಣದಿಂದ ಮಿನಿ ವಿಧಾನಸೌಧಕ್ಕೆ ತೆರಳುವ ಜಾಗದಲ್ಲಿ ಚರಂಡಿ ಸ್ವಚ್ಛಗೊಳಿಸದ ಕಾರಣ ನೀರು ನಿಂತಲ್ಲೇ ನಿಂತಿದೆ. ಸಂಕೀರ್ಣ ಮತ್ತು ಚರಂಡಿಯನ್ನು ಸ್ಪಚ್ಛಗೊಳಿಸಿ ವರ್ಷವೇ ಕಳೆಯಿತು. ಇದರಿಂದಾಗಿ ಸೊಳ್ಳೆಕಾಟ ಹೆಚ್ಚಾಗಿದೆ ಎಂದು ಆರೋಪಿಸುತ್ತಾರೆ ಸ್ಥಳೀಯರು.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ, ಸ್ಥಳೀಯರು ಈ ಕುರಿತು ಗಮನಕ್ಕೆ ತಂದಿದ್ದಾರೆ. ವಾರದೊಳಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.