ETV Bharat / city

ಮಂಗಳೂರಲ್ಲಿ ಇನ್ಮುಂದೆ ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಸಿದ್ರೆ ಜೋಕೆ: ಕಮಿಷನರ್​ ವಾರ್ನಿಂಗ್​

author img

By

Published : Aug 16, 2019, 7:57 PM IST

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಪೊಲೀಸ್ ಫೋನ್ ಇನ್ ಕಾರ್ಯಕ್ರಮ ನಡೆದಿದ್ದು, ಈ ವೇಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಹೇಳಿದರು.

ಡಾ. ಪಿ.ಎಸ್ ಹರ್ಷ

ಮಂಗಳೂರು: ಕಾನೂನಿನ ಮುಂದೆ ಎಲ್ಲರೂ ಸಮಾನರು. ಹಾಗಾಗಿ ಯಾರಾದ್ರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ರೆ ಖಂಡಿತ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಹೇಳಿದರು.

ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಫೋನ್ ಇನ್ ಕಾರ್ಯಕ್ರಮ

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಡೀಲ್ ಕ್ರಾಸ್​ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಹಾಗೂ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ಶಬ್ದ ಮಾಲಿನ್ಯ, ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ತೊಂದರೆ ಉಂಟಾಗುತ್ತಿದ್ದು, ಇನ್ನು ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು ಈ ವೇಳೆ ಹಂಪನಕಟ್ಟೆ ಬಳಿ ವೃದ್ಧರೋರ್ವರು ಮೂರ್ನಾಲ್ಕು ತಿಂಗಳುಗಳಿಂದ ರಸ್ತೆ ಬದಿಯಲ್ಲೇ ಇದ್ದಾರೆ. ಅವರಿಗೆ ನಿರ್ಗತಿಕರ ಕೇಂದ್ರದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಬೇಕೆಂದು ವ್ಯಕ್ತಿಯೋರ್ವರು ಕರೆ ಮಾಡಿದರು‌. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಪಚ್ಚನಾಡಿಯ ನಿರ್ಗತಿಕರ ಕೇಂದ್ರದಲ್ಲಿ ವೃದ್ಧರಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಈ ಸಂದರ್ಭ ಉಪ ಪೊಲೀಸ್ ಆಯುಕ್ತರಾದ ಡಾ.ಅರುಣಾಂಶ ಗಿರಿ, ಲಕ್ಷ್ಮೀ ಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Intro:ಮಂಗಳೂರು: ನಮ್ಮ ದೇಶದಲ್ಲಿ ಕಾನೂನಿಗೆ ಸಮಾನರು ಮಾಧ್ಯಮದವರೇ ಇರಲಿ ಪೊಲೀಸ್ ಅಧಿಕಾರಿಗಳೇ ಇರಲಿ ಸರಕಾರಿ ಅಧಿಕಾರಿಗಳೇ ಇರಲಿ ಎಲ್ಲರೂ ಸಮಾನರು. ಹಾಗಾಗಿ ಯಾರೇ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೂ ಖಂಡಿತಾ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ನೋ ಪಾರ್ಕಿಂಗ್ ನಲ್ಲಿ ಮೀಡಿಯಾ ಎಂದು ಬರೆದಿರುವ ವಾಹನಗಳು ನಿಲುಗಡೆ ಮಾಡಲಾಗುತ್ತದೆ ಎಂದು ಮಹಮ್ಮದ್ ಎಂಬವರು ನೀಡಿದ ದೂರಿಗೆ ಅವರು ಪ್ರತಿಕ್ರಿಯಿಸಿ, ಮಾಧ್ಯಮದವರ ವಾಹನಗಳಿಗೆ ಪೊಲೀಸ್ ಮೊಹರು ಹೊಂದಿರುವ ಮೀಡಿಯ ಸ್ಟಿಕರ್ ಗೆ ವ್ಯವಸ್ಥೆ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತದೆ ಎಂದು ಹೇಳಿದರು.

ಹಂಪನಕಟ್ಟೆ ಬಳಿ ವೃದ್ಧರೋರ್ವರು ಮೂರ್ನಾಲ್ಕು ತಿಂಗಳುಗಳಿಂದ ರಸ್ತೆಯ ಬದಿಯಲ್ಲೇ ಇದ್ದಾರೆ. ಮಳೆಗೂ ರಸ್ತೆ ಬದಿಯಲ್ಲೇ ಇದ್ದಾರೆ. ಅವರಿಗೆ ನಿರ್ಗತಿಕರ ಕೇಂದ್ರದಲ್ಲಿ ವ್ಯವಸ್ಥೆ ಮಾಡಬೇಕೆಂದು ವ್ಯಕ್ತಿಯೋರ್ವರು ಕರೆ ಮಾಡಿದರು‌. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಪಚ್ಚನಾಡಿಯ ನಿರ್ಗತಿಕರ ಕೇಂದ್ರದಲ್ಲಿ ವೃದ್ಧರಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

Body:ಹೋಟೆಲ್ ಉದ್ಯೋಗಿಗಳಿಗೆ ಸರಿಯಾದ ವ್ಯವಸ್ಥೆ ಇರದೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ, ಪಡೀಲ್ ಕ್ರಾಸ್ ನಲ್ಲಿ ಟ್ರಾಫಿಕ್ ಜಾಮ್, ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ಬೈಕ್ ಗಳ ಸೈಲೆನ್ಸರ್ ಗಳಿಂದ ಶಬ್ದ ಮಾಲಿನ್ಯ, ಕೆಎಸ್ಸಾರ್ಟಿಸ್ ಸಮೀಪದಲ್ಲಿ ಬಳ್ಳಾಲ್ ಬಾಗ್ ಗೆ ಬರುವ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ತೊಂದರೆ, ಜಿಎಚ್ ಎಸ್ ರೋಡ್ ಪೂರ್ತಿ ಹೊಂಡವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ, ಪುರಭವನದ ಹತ್ತಿರದಲ್ಲಿರುವ ಮರಗಳ ಅಪಾಕಾರಿ ಕೊಂಬೆಗಳನ್ನು ಕತ್ತರಿಸಬೇಕು ಎಂಬ ದೂರುಗಳು ಬಂದವು.

ಈ ಸಂದರ್ಭ ಉಪ ಪೊಲೀಸ್ ಆಯುಕ್ತರಾದ ಡಾ.ಅರುಣಾಂಶ ಗಿರಿ, ಲಕ್ಷ್ಮೀಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ ಮತ್ತಿತರರ ಪೊಲೀಸ್ ಅಧಿಕಾರಿ ಗಳು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.