ETV Bharat / city

ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

author img

By

Published : Sep 3, 2019, 11:47 PM IST

ಕೇಂದ್ರ ಸರ್ಕಾರದ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ಖಂಡಿಸಿ ಸಿಐಟಿಯು, ಡಿವೈಎಫ್​​ಐ, ಬಿಇಎಫ್ಐ, ಎಐಕೆಎಸ್ ಸಂಸ್ಥೆಗಳು‌ ದಕ್ಷಿಣ ಕ‌ನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದವು.

several organisations protest against central government

ಮಂಗಳೂರು: ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ನಡೆಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಿಐಟಿಯು, ಡಿವೈಎಫ್​​ಐ, ಬಿಇಎಫ್ಐ, ಎಐಕೆಎಸ್ ಸಂಸ್ಥೆಗಳು‌ ದಕ್ಷಿಣ ಕ‌ನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಸಂಜೆ ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಬ್ಯಾಂಕ್ ನೌಕರರ ಫೆಡರೇಷನ್​ನ ರಾಜ್ಯ ಮುಖಂಡ ಬಿ.ಎಂ‌.ಮಾಧವ ಮಾತನಾಡಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 10 ರಾಷ್ಟ್ರೀಕೃತ ಬ್ಯಾಂಕುಗಳನ್ನು 4 ಬ್ಯಾಂಕ್​ಗಳಾಗಿ ವಿಲೀನಗೊಳಿಸಿದ್ದಾರೆ. ಇದು ನಾಲ್ಕು ರಾಷ್ಟ್ರೀಕೃತ ಬ್ಯಾಂಕ್​ಗಳ ಹೆಸರನ್ನೇ ಅಳಿಸಿಹಾಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಕೇಂದ್ರ ಸರ್ಕಾರ ಬ್ಯಾಂಕ್​​ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್​​ಗಳನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಣ್ಣ ಬ್ಯಾಂಕ್​ಗಳನ್ನು ಜಾಗತಿಕ ಮಟ್ಟದಲ್ಲಿ ಏರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್​ಗಳ ವಿಲೀನ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಣ್ಣ ಬ್ಯಾಂಕ್ ಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಲ ಸೌಲಭ್ಯಗಳು ದೊರೆವುದಿಲ್ಲ. ಅವು​​ಗಳನ್ನು ವಿಲೀನಗೊಳಿಸಿದರೆ ಅದಾನಿ, ಅಂಬಾನಿ ಅಂತಹವರಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡುವ ಉದ್ದೇಶ ಹೊಂದಿದ್ದಾರೆ. ಬಳಿಕ ಅದು ಮರುಪಾವತಿಯಾಗದಿದ್ದಲ್ಲಿ ನಷ್ಟದಲ್ಲಿರುವ ಬ್ಯಾಂಕ್ ನಮಗೆ ಬೇಡ ಎಂದು ಖಾಸಗಿಗೆ ಮಾರುವ ಹುನ್ನಾರವಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಅವುಗಳಲ್ಲಿ ಕೆಲಸ ಮಾಡುತ್ತಿರುವವರನ್ನು ನಿರುದ್ಯೋಗಿಗಳನ್ನಾಗಿಸುತ್ತದೆ ಎಂದರು.

Intro:ಮಂಗಳೂರು: ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಗೆ ತೀವ್ರ ಚಾಲನೆ ನೀಡಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಸಿಐಟಿಯು, ಡಿವೈಎಫ್ ಐ, ಬಿಇಎಫ್ಐ, ಎಐಕೆಎಸ್ ಸಂಸ್ಥೆಗಳು‌ ಜಂಟಿಯಾಗಿ ದ.ಕ‌.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಸಂಜೆ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಪ್ರತಿಭಟನಾ ಕಾರರು ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಬ್ಯಾಂಕ್ ನೌಕರರ ಫೆಡರೇಷನ್ ನ ರಾಜ್ಯ ಮುಖಂಡ ಬಿ.ಎಂ‌.ಮಾಧವ ಮಾತನಾಡಿ, ಕೇಂದ್ರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ 10 ರಾಷ್ಟ್ರೀಕೃತ ಬ್ಯಾಂಕುಗಳನ್ನು 4 ಬ್ಯಾಂಕ್ ಗಳಾಗಿ ವಿಲೀನ ಗೊಳಿಸುವ ಬಾಂಬ್ ಹಾಕಿ‌ ನಮ್ಮೆಲ್ಲರನ್ನು ರೊಚ್ಚಿಗೇಳುವಂತೆ ಮಾಡಿದ್ದಾರೆ. ಖಾಸಗಿ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಸೇರಿ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಜನ್ಮ ನೀಡಿದ ಜಿಲ್ಲೆ ನಮ್ಮ ಅವಿಭಜಿತ ದ‌.ಕ. ಜಿಲ್ಲೆ. ಇಲ್ಲಿ ಮೂರು ಬ್ಯಾಂಕ್ ಗಳ ಹೆಸರನ್ನೇ ಅಳಿಸಿ ಹಾಕುವ ಯತ್ನದಲ್ಲಿದೆ ನಮ್ಮ ಈಗಿನ ಕೇಂದ್ರ ಸರಕಾರ.

ಇಂದಿನ ಕೇಂದ್ರ ಸರಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ನಿಲುವನ್ನು ಪಡೆದ ಸರಕಾರ. 1935-1969 ರ ತನಕ 1565 ಬ್ಯಾಂಕ್ ಗಳು ಈ ದೇಶದಲ್ಲಿ ಮುಚ್ಚಲ್ಪಟ್ಟಿವೆ. ಇದರಿಂದ ಈ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಇಟ್ಟವರು, ನೌಕರರು ಬೀದಿಗೆ ಬಿದ್ದಿದ್ದಾರೆ. ಈ ಸಂದರ್ಭ ಬ್ಯಾಂಕ್ ಗಳ ರಾಷ್ಟ್ರೀಕರಣವಾಗಬೇಕೆಂದು ಎಲ್ಲಾ ಕಡೆಗಳಿಂದಲೂ ಆಂದೋಲನ ಕೇಳಿ ಬಂತು. ಆ ಬಳಿಕ 1969ರಲ್ಲಿ ಇಂದಿರಾಗಾಂಧಿಯವರು ಬ್ಯಾಂಕ್ ಗಳ ರಾಷ್ಟೀಕರಣ ಮಾಡಿದರು. ಈ ಸಂದರ್ಭ ಬ್ಯಾಂಕ್ ರಾಷ್ಟ್ರೀಕರಣವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವರು ಜನಸಂಘದ ಮುಖಂಡ ಬಾಲರಾಜ್ ಬದೋಪ್ ಹಾಗೂ ಸ್ವತಂತ್ರ ಪಕ್ಷದ ಎಂ.ಆರ್.ಮಸಾನಿ. ಆದರೆ ಆ ಸಂದರ್ಭ ರಾಷ್ಟ್ರೀಕರಣದ ಪರವಾಗಿ ಎವಿಪಿ ಮತ್ತು ಸಿಪಿಎಂ ಮುಖಂಡರು ಕೋರ್ಟ್ ಮೆಟ್ಟಿಲೇರಿದರು. ಅಂದಿನಿಂದಲೇ ಬ್ಯಾಂಕ್ ರಾಷ್ಟ್ರೀಕರಣಕ್ಕೆ ವಿರುದ್ಧವಾಗಿ ಹೋರಾಟ ಮಾಡಿದವರು ಇಂದು ಅಧಿಕಾರದಲ್ಲಿರುವ ಬಿಜೆಪಿ ಎಂದು ಹೇಳಿದರು.

ಈ ರಾಷ್ಟ್ರೀಕರಣದಲ್ಲಿ ಏನೆಲ್ಲಾ ಲೋಪದೋಷಗಳಿವೆ ಅದನ್ನು ಸರಿಪಡಿಸಿ ಮುಂದಿನ ಬಿಲ್ ಅನ್ನು ಪಾಸ್ ಮಾಡಿದಾಗ ಲೋಕಸಭೆಯಲ್ಲಿ ಚರ್ಚೆ ಮಾಡಲಾಯಿತು. ಆಗಲೂ ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಅಟಲ್ ಬಿಹಾರಿ ವಾಜಪೇಯಿ, ಜಯಪ್ರಕಾಶ್ ನಾರಾಯಣ್, ರಾಜಗೋಪಾಲಾಚಾರಿ. ಜೊತೆಗೆ ದೇಶದ ಎಲ್ಲಾ ಚೇಂಬರ್ ಆಫ್ ಕಾಮರ್ಸ್ ನವರೂ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ವಾಜಪೇಯಿಯವರು ಆಗಿನ ಕೇಂದ್ರ ಸರಕಾರ ಎಡಪಕ್ಷಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ದೂಷಿಸಿದ್ದರು. ಆದರೆ ಬ್ಯಾಂಕ್ ಗಳ ರಾಷ್ಟ್ರೀಕರಣ ಆದ ಬಳಿಕ ದೇಶದಾದ್ಯಂತ ಆ ಬ್ಯಾಂಕ್ ಗಳ ಎಷ್ಟು ಬ್ರ್ಯಾಂಚ್ ಗಳಾಗಿವೆ, ಎಷ್ಟು ಜನರಿಗೆ ಉದ್ಯೋಗ ದೊರಕಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಮಾಧವ ಹೇಳಿದರು.

Body:ಇಂದಿನ ಕೇಂದ್ರ ಸರಕಾರ ಬ್ಯಾಂಕ್ ಗಳನ್ನು ವಿಲೀನ ಗೊಳಿಸಿ ಬೃಹತ್ ಬ್ಯಾಂಕ್ ಗಳನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. 2008ರಲ್ಲಿ ಎಲ್ಲಾ ಬ್ಯಾಂಕ್ ಗಳು ಮುಳುಗಿದಾಗ, ಆಗ ಅವರ ದೇಶದ ಖಜಾನೆಯಿಂದ ಹಣಕೊಟ್ಟು ಬ್ಯಾಂಕ್ ಗಳನ್ನು ರಕ್ಷಣೆ ಮಾಡುವ ಕೆಲಸ ಆಗಿತ್ತು. ಸಣ್ಣ ಬ್ಯಾಂಕ್ ಗಳ ಎನ್ ಪಿಎ ಯನ್ನು ಸರಿದೂಗಿಸಲು ಕಷ್ಟವಾಗುತ್ತದೆ. ಆದ್ದರಿಂದ ಸಣ್ಣ ಬ್ಯಾಂಕ್ ಗಳನ್ನು ಜಾಗತಿಕ ಮಟ್ಟದಲ್ಲಿ ಏರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಗಳ ವಿಲೀನ ಮಾಡುವ ಹುನ್ನಾರ ನಡೆಯುತ್ತಿದೆ. ಆದರೆ ನಿಜವಾಗಿಯೂ ಸಣ್ಣ ಬ್ಯಾಂಕ್ ಗಳಲ್ಲಿ ದೊಡ್ಡದಾದ ಸಾಲಗಳು ದೊರೆಯುತ್ತಿಲ್ಲ. ಅವರು ಸೀಮಿತವಾದ ಸಾಲಗಳನ್ನು ಮಾತ್ರ ಕೊಡುತ್ತಾರೆ. ಆದ್ದರಿಂದ ಸಣ್ಣ ಬ್ಯಾಂಕ್ ಗಳನ್ನು ವಿಲೀನ ಗೊಳಿಸಿದರೆ ಅದಾನಿ , ಅಂಬಾನಿಯಂತವರಿಗೆ ಕೋಟಿಲೆಕ್ಕಗಳಲ್ಲಿ ಸಾಲಗಳನ್ನು ಕೊಡಬಹುದು. ಮುಂದಿನ ದಿನಗಳಲ್ಲಿ ಆ ಸಾಲಗಳು ಮರುಪಾವತಿಯಾಗದಲ್ಲಿ ನಷ್ಟದಲ್ಲಿರುವ ಬ್ಯಾಂಕ್ ನಮಗೆ ಬೇಡ ಎಂದು ಖಾಸಗಿಯವರಿಗೆ ಮಾರಿ ಬಿಡಬಹುದು ಎಂಬ ಹುನ್ನಾರವಿದೆ ಎಂದು ಬಿ.ಎಂ.ಮಾಧವ ಹೇಳಿದರು.

ಪ್ರತಿಭಟನೆಯಲ್ಲಿ ವಸಂತ ಆಚಾರಿ, ಕೆ.ರಾಘವ, ಪುರುಷೋತ್ತಮ ಪೂಜಾರಿ, ಸುನೀಲ್ ರಾಜ್, ಟಿ ಆರ್ ಭಟ್, ರಮಣಿ ಮೂಡುಬಿದಿರೆ, ಕೆ ಯಾದವ ಶೆಟ್ಟಿ, ವಾಸುದೇವ ಉಚ್ಚಿಲ, ಬಿ.ಕೆ.ಇಮ್ತಿಯಾಜ್ ಮತ್ತಿತರರು ಭಾಗವಹಿಸಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.