ಮಂಗಳೂರು: ಮಂಗಳೂರಿನಲ್ಲಿ ರೌಡಿಶೀಟರ್ ಒಬ್ಬನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮಂಗಳೂರಿನ ಹೊಯಿಗೆ ಬಜಾರ್ನ ರಾಹುಲ್(26) ಕೊಲೆಯಾದ ರೌಡಿಶೀಟರ್. ರಾಹುಲ್ ಪಾಂಡೇಶ್ವರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ಇದೆ. ಈತನ ವಿರೋಧಿ ತಂಡ ಈ ಕೃತ್ಯವೆಸಗಿದೆ.
ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಬಳಿ ಇದ್ದ ರಾಹುಲ್ನನ್ನು ನಾಲ್ಕು ಜನರ ಗುಂಪು ಅಟ್ಟಾಡಿಸಿ ಹತ್ಯೆ ಮಾಡಿದೆ. ಎಮ್ಮೆಕೆರೆ ಮೈದಾನದಲ್ಲಿ ರಾಹುಲ್ನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೊಬೈಲ್ ಶೋರೂಂನಲ್ಲಿ ಕೆಲಸ ಮಾಡ್ತಿದ್ದ ಯುವತಿ ಜೊತೆ ಅಸಭ್ಯ ವರ್ತನೆ- ಸಿಸಿಟಿವಿ ದೃಶ್ಯ